‘ನನ್ನ ಜಾಗದಲ್ಲಿ ನೀವು ಗಾಲ್ಫ್​ ಆಡುತ್ತಿದ್ದೀರಿ’ ಊಟಿಯಲ್ಲಿ ಬೇಟೆಗೆ ಬಂದ ಹುಲಿಯ ತಕರಾರು

Tiger : ಹುಲಿಗೆ ಕಾಡಿನಲ್ಲಿದ್ದು ಬೇಸರವಾಗಿಲ್ಲ, ಗಾಲ್ಫ್​ ಆಡಲೂ ಬಂದಿಲ್ಲ. ತನ್ನ ಜಾಗದಲ್ಲಿ ತಾನು ಸಹಜವಾಗಿ ಬೇಟೆಯಾಡಿದೆ. ಹಾಗಿದ್ದರೆ ಈಗ ಜಾಗರೂಕರಾಗಿರಬೇಕಾಗಿರುವುದು ಹುಲಿಯೋ, ಮನುಷ್ಯನೋ? ನೋಡಿ ವಿಡಿಯೋ.

‘ನನ್ನ ಜಾಗದಲ್ಲಿ ನೀವು ಗಾಲ್ಫ್​ ಆಡುತ್ತಿದ್ದೀರಿ’ ಊಟಿಯಲ್ಲಿ ಬೇಟೆಗೆ ಬಂದ ಹುಲಿಯ ತಕರಾರು
Tiger spotted with its prey in Ooty
Updated By: ಶ್ರೀದೇವಿ ಕಳಸದ

Updated on: Nov 05, 2022 | 12:53 PM

Viral Video : ಹಸಿವು ಯಾರ ಮಾತು ಕೇಳುತ್ತದೆ? ಬೇಕೆನ್ನಿಸಿದಲ್ಲಿ ಬೇಕಾದ್ದನ್ನು ಹುಡುಕಿಕೊಂಡು ಹೋಗುವುದು ವನ್ಯಜೀವಿಗಳ ಸ್ವಭಾವ. ಈ ಹುಲಿಯೂ ಹೀಗೇ ಬೇಟೆ ಹುಡುಕಿಕೊಂಡು ಊಟಿಯ ಗಾಲ್ಫ್​ಗೆ ಬಂದಿದೆ. ಅಲ್ಲೊಂದು ಹಸುವನ್ನು ಬೇಟೆಯೂ ಆಡಿದೆ. ಐಎಸ್​ ಅಧಿಕಾರಿ ಅನಂತ್​ ರೂಪನಗುಡಿ ಈ ವಿಡಿಯೋ ಕ್ಲಿಪ್ಪಿಂಗ್ಸ್​ ಅನ್ನು ಟ್ವೀಟ್ ಮಾಡಿದ್ದಾರೆ. ನೋಡಿ ವೈರಲ್ ಆಗಿರುವ ಈ ವಿಡಿಯೋ.

ಆಗಷ್ಟೇ ಬೇಟೆಯಾಡಿ ಊಟಿಯ ಗಾಲ್ಫ್​ ಮೈದಾನಕ್ಕೆ ಎಳೆದುಕೊಂಡು ಬರುತ್ತಿದೆ ಈ ಹುಲಿ. ಹತ್ತಿರದಲ್ಲಿಯೇ ಜನರು ವಾಸವಾಗಿದ್ದಾರೆ. ಹೀಗಾಗಿ ಈ ವಿಡಿಯೋ ನೋಡಿ ನೆಟ್​ಮಂದಿ ಬೆಚ್ಚಿಬಿದ್ದಿದ್ದಾರೆ. ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ನಮ್ಮ ಅವಶ್ಯಕತೆ, ಮನೋರಂಜನೆಗಳಿಗೋಸ್ಕರ ಹುಲಿಗಳ ಜಾಗವನ್ನು ಅತಿಕ್ರಮಣ ಮಾಡಿದ್ದೇವೆ. ಈಗ ಮನುಷ್ಯರಿರುವ ಜಾಗದಲ್ಲಿ ಹುಲಿಗಳು ಜಾಗರೂಕವಾಗಿರಬೇಕು!’ ಎಂದಿದ್ದಾರೆ ಒಬ್ಬರು. ‘ಎಂಥ ಸುಂದರವಾದ ಹುಲಿ ಇದು’ ಎಂದಿದ್ದಾರೆ ಒಬ್ಬರು. ‘ಇದು ಬಹಳ ದುಃಖಕರ ಸಂಗತಿ. ಹೀಗೆ ವನ್ಯಜೀವಿಗಳಿಗೆ ಮೀಸಲಿಟ್ಟ ಜಾಗವನ್ನು ಮನುಷ್ಯ ಬಳಸಿಕೊಳ್ಳಬಾರದು. ಹುಲಿಯ ತಪ್ಪು ಏನೂ ಇಲ್ಲ’ ಎಂದಿದ್ದಾರೆ ಇನ್ನೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:51 pm, Sat, 5 November 22