Video: ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಲು ಬಂದ ಚಿರತೆ; ಪವಾಡ ಸದೃಶ್ಯವಾಗಿ ದಾಳಿಯಿಂದ ಪಾರಾದ ಬೈಕ್ ಸವಾರ

ಕತ್ತಲಾಗುತ್ತಿದ್ದಂತೆ ಈ ಕಾಡು ಪ್ರಾಣಿಗಳು ರಸ್ತೆಗಳು ಸೇರಿದಂತೆ ಜನವಸತಿ ಪ್ರದೇಶದಲ್ಲಿ ಕಾಣಸಿಗುತ್ತವೆ. ಆದರೆ ಇದೀಗ ಅಂತಹದ್ದೇ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ವೇಗವಾಗಿ ಚಲಿಸುತ್ತಿದ್ದ ಬೈಕ್ ಗೆ ಚಿರತೆಯೊಂದು ಡಿಕ್ಕಿ ಹೊಡೆಡಿದ್ದು ಈ ಭಯಾನಕ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಘಟನೆಯೂ ನಡೆದಿದ್ದು ಎಲ್ಲಿ? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Video: ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಲು ಬಂದ ಚಿರತೆ; ಪವಾಡ ಸದೃಶ್ಯವಾಗಿ ದಾಳಿಯಿಂದ ಪಾರಾದ ಬೈಕ್ ಸವಾರ
ವೈರಲ್ ವಿಡಿಯೋ
Image Credit source: Twitter

Updated on: Jul 28, 2025 | 12:15 PM

ತಿರುಪತಿ, ಜುಲೈ 28: ಕಾಡು ಪ್ರಾಣಿಗಳ ದಾಳಿಯ ಕುರಿತಾದ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಜನವಸತಿ ಪ್ರದೇಶಗಳು, ರಸ್ತೆ ದಾಟುವ ವೇಳೆಯಲ್ಲಿ ಕ್ಯಾಮೆರಾದ ಕಣ್ಣಿಗೆ ಈ ಕ್ರೂರ ಪ್ರಾಣಿಗಳು (Wild animals) ಸೆರೆ ಸಿಗುತ್ತವೆ. ಈ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವುದಿದೆ. ಆದರೆ ಇದೀಗ ವೇಗವಾಗಿ ಸಾಗುತ್ತಿದ್ದ ಬೈಕ್ ಸವಾರನ ಮೇಲೆ ಚಿರತೆಯೊಂದು ಜಿಗಿದಿದೆ. ಹೌದು, ಈ ಘಟನೆಯೂ ತಿರುಪತಿಯ ಅಲಿಪಿರಿಯ ಮೃಗಾಲಯ ಪಾರ್ಕ್ ರಸ್ತೆಯಲ್ಲಿ (Alipiri Zoo on Park Road in Tirupati) ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ . ಬೈಕ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮ್ ಈ ದೃಶ್ಯವನ್ನು ಸೆರೆಹಿಡಿದಿದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

@jsuryareddy ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವೇಗವಾಗಿ ಸಾಗುತ್ತಿದ್ದ ಬೈಕ್‍ನತ್ತ ಚಿರತೆ ಜಿಗಿದಿರುವ ದೃಶ್ಯವನ್ನು ಕಾಣಬಹುದು. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆಯಲ್ಲಿ ಬೈಕ್ ಸವಾರ ಮುಂದೆ ಸಾಗಿದ್ದು, ಚಿರತೆ ಕೂಡ ಎದ್ದು ಭಯಭೀತಗೊಂಡು ಹಿಂದಕ್ಕೆ ಓಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ
ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ
ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ
ಏರ್​ಪೋರ್ಟ್ ಇಲ್ಲ, ಕರೆನ್ಸಿ ಇಲ್ಲ, ಆದರೂ ಶ್ರೀಮಂತ ದೇಶ
ಡೆಲಿವರಿ ಬಾಯ್ ಆಗಿ ದಿನನಿತ್ಯ ದಣಿದಿದ್ದೇನೆ, ಈ ಬದುಕಿನ ಆಯ್ಕೆಗೆ ನಾನೇ ಕಾರಣ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ವೈರಲ್ ಆಗಿರುವ ವಿಡಿಯೋ ಕಾಡು ಪ್ರಾಣಿಗಳಿಂದ ಉಂಟಾಗುವ ಅಪಾಯವನ್ನು ಎತ್ತಿ ತೋರಿಸುತ್ತಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸಲು, ಜನರು ಹಾಗೂ ಈ ಚಿರತೆಗಳ ನಡುವಿನ ಮುಂದಿನ ಮುಖಾಮುಖಿಗಳನ್ನು ತಡೆಯಲು ಅರಣ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಘಟನೆ ನಡೆದ ದಿನ ಮಧ್ಯರಾತ್ರಿಯ ವೇಳೆಯಲ್ಲಿ ಅರವಿಂದ್ ಕಣ್ಣಿನ ಆಸ್ಪತ್ರೆಯ ಬಳಿ ಚಿರತೆಯೊಂದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಇದು ಅಲ್ಲಿನ ನಿವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿ ಕನಿಷ್ಠ ಮೂರು ಚಿರತೆಗಳು ಇರುವಿಕೆಯ ಬಗ್ಗೆ ತಿಳಿಸಿದ್ದಾರೆ. ಅವುಗಳ ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೆರೆಹಿಡಿಯಲು ಅನುಕೂಲವಾಗುವಂತೆ, 14 ಟ್ರ್ಯಾಪ್ ಕ್ಯಾಮರಾಗಳು ಮತ್ತು ಬೆಟ್ ಸ್ಟೇಷನ್‌ಗಳನ್ನು ಮೂರು ವಿಭಿನ್ನ ಸ್ಥಳಗಳಲ್ಲಿ ಕಾರ್ಯತಂತ್ರವಾಗಿ ಇರಿಸಿದ್ದಾರೆ. ಇನ್ನು ಉಳಿದಂತೆ ವೆಂಕಟೇಶ್ವರ ವಿಶ್ವವಿದ್ಯಾಲಯ ಮತ್ತು ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ದಟ್ಟವಾದ ಮುಳ್ಳು ಪೊದೆಗಳಿಂದ ಕೂಡಿದ ಪ್ರದೇಶವನ್ನು ತೆರವುಗೊಳಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ: Video: ಇದಪ್ಪಾ ಮಾನವೀಯತೆ ಅಂದ್ರೆ; ರೆಕ್ಕೆ ಮುರಿದ ಪಾರಿವಾಳಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದ ಬಾಲಕ

ಜುಲೈ 26 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು ಮಾನವರು ಕಾಡು ಪ್ರಾಣಿಗಳ ಪ್ರದೇಶ ಗಳನ್ನು ಅತಿಕ್ರಮಿಸಿಕೊಂಡಾಗ ಹೀಗಾಗುತ್ತದೆ. ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ 25% ಪ್ರದೇಶವು ಈಗ 11% ಕ್ಕೆ ಇಳಿದಿದೆ. ಹೀಗಾಗಿ ಪರಿಸರ ವಿಕೋಪವು ಹತ್ತಿರವಾಗಿದೆ ಎಂದಿದ್ದಾರೆ. ಮತ್ತೊಬ್ಬರು ಇಂತಹ ದೃಶ್ಯಗಳು ನೋಡುವುದಕ್ಕೆ ಭಯಾನಕವಾಗಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಕಾಡಿನ ರಸ್ತೆಯಲ್ಲಿ ವಾಹನ ಓಡಿಸುವುದಕ್ಕೆ ಭಯವಾಗುತ್ತದೆ, ಇಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ