ನೋಡಲು ಭಿಕ್ಷುಕಿಯಂತೆ ಕಾಣುವ ಈ ಮಹಿಳೆಯನ್ನು ದೇವರಂತೆ ಕಾಣುತ್ತಾರೆ!

ವೈರಲ್​​ ಆದ ವಿಡಿಯೋ ಒಂದರಲ್ಲಿ ಈಕೆ ಅರ್ಧ ಕುಡಿದು ಬಿಸಾಕಿದ ಕಾಫಿಯನ್ನು ಜನರು ದೇವರ ತೀರ್ಥದಂತೆ ಕುಡಿಯುತ್ತಿರುವುದನ್ನು ಕಾಣಬಹುದು. ಆದರೆ ಈ ಮಹಿಳೆಯನ್ನು ಭಕ್ತಿಯಿಂದ ಕಾಣಲು ಕಾರಣವೇನು?

ನೋಡಲು ಭಿಕ್ಷುಕಿಯಂತೆ ಕಾಣುವ ಈ ಮಹಿಳೆಯನ್ನು ದೇವರಂತೆ ಕಾಣುತ್ತಾರೆ!
Topi Amma

Updated on: Mar 29, 2024 | 5:29 PM

ಸದಾ ಕೊಳಕು ಬಟ್ಟೆಯನ್ನು ಧರಿಸಿ ಬೀದಿಯಲ್ಲಿ ಓಡಾಡುವ ಈ ಮಹಿಳೆಯ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ವೈರಲ್​​ ಆದ ವಿಡಿಯೋ ಒಂದರಲ್ಲಿ ಈಕೆ ಅರ್ಧ ಕುಡಿದು ಬಿಸಾಕಿದ ಕಾಫಿಯನ್ನು ಜನರು ದೇವರ ತೀರ್ಥದಂತೆ ಕುಡಿಯುತ್ತಿರುವುದನ್ನು ಕಾಣಬಹುದು. ಆದರೆ ಈ ಮಹಿಳೆಯನ್ನು ಭಕ್ತಿಯಿಂದ ಕಾಣಲು ಕಾರಣವೇನು? ಈ ಮಹಿಳೆ ಇರುವುದೆಲ್ಲಿ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿ ತಿಳಿದುಕೊಳ್ಳಿ.

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಈ ಮಹಿಳೆನ್ನು ಟೋಪಿ ಅಮ್ಮ ಎಂದು ಕರೆಯಲಾಗುತ್ತದೆ. ಇದಲ್ಲದೇ ಈಕೆಯನ್ನು ಸಿದ್ಧಿ ಮಾತೆ ಎಂದು ಕೂಡ ಕರೆಯುತ್ತಾರೆ. ಈಕೆ ನಡೆದ ಹಾದಿ ಹಾಗೂ ಈಕೆಯನ್ನು ಮುಟ್ಟಿದರೆ ಪಾಪವೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಲಾಗಿದೆ. ಇದಕ್ಕೊಂದು ಉತ್ತಮ ನಿದರ್ಶನವೆಂದರೆ ಮಣಿಮಾರನ್ ಎಂಬ ವ್ಯಕ್ತಿ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ದೇವಾಲಯದಲ್ಲಿ 1 ನಿಂಬೆ ಹಣ್ಣನ್ನು ಹರಾಜಿನ ಮೂಲಕ ಲಕ್ಷ ಲಕ್ಷ ಕೊಟ್ಟು ಖರೀದಿಸುತ್ತಾರೆ; ಯಾಕಿಷ್ಟು ದುಬಾರಿ?

ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಣಿ ಮಾರನ್​​​ ಎಂಬ ವ್ಯಕ್ತಿಗೆ ಟೋಪಿ ಅಮ್ಮನ ಆಶೀರ್ವಾದದಿಂದ ಕಿಡ್ನಿ ಸಮಸ್ಯೆ ನಿವಾರಣೆಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದಲೇ ಕಳೆದ 17 ವರ್ಷಗಳಿಂದ ಮಣಿಮಾರನ್​ ಈ ಟೋಪಿ ಅಮ್ಮನ ಸೇವೆ ಮಾಡುತ್ತಾ ಬಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:29 pm, Fri, 29 March 24

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us