ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಸುಂದರ ಭಾವನೆಗಳಲ್ಲಿ ಒಂದಾಗಿದೆ. ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಿಗೆ ನಾವು ಎಂದಿಗೂ ಕೃತಜ್ಞರಾಗಿರಲೇಬೇಕು. ಅಂದಹಾಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಮೀರಾಬಾಯಿ ಚಾನು ಗೆದ್ದು ಬೆಳ್ಳಿ ಪದಕ ಪಡೆದರು. ಅವರ ಕನಸು ನನಸಾಗಲು ತರಬೇತಿ ಸಮಯದಲ್ಲಿ ಸಹಾಯ ಮಾಡುತ್ತಿದ್ದ ಟ್ರಕ್ ಚಾಲಕರಿಗೆ ಮೀರಾಬಾಯಿ ಚಾನು ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಮೀರಾಬಾಯಿ ಚಾನು ತರಬೇತಿ ಪಡೆಯಲು ಅದೆಷ್ಟೋ ದೂರ ಕ್ರಮಿಸಬೇಕಿತ್ತು. ಅವರ ಹಳ್ಳಿಯಿಂದ 30 ಕಿ.ಮೀ ದೂರದಲ್ಲಿರುವ ಕ್ರೀಡಾ ಅಕಾಡೆಮಿಗೆ ತಲುಪಲು ಕಷ್ಟವಾಗುತ್ತಿತ್ತು. ಯಾವುದೇ ಸೌಕರ್ಯಗಳು ಕೂಡಾ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಮೀರಾಬಾಯಿ ಚಾನು ಅವರಿಗೆ ಟ್ರಕ್ ಚಾಲಕರು ಡ್ರಾಪ್ ನೀಡುತ್ತಿದ್ದರು. ಅವರಲ್ಲಿ ಯಾವುದೇ ಹಣ ಪಡೆಯದೇ ಉಚಿತವಾಗಿ ಸಹಾಯ ಮಾಡುತ್ತಿದ್ದ ಟ್ರಕ್ ಚಾಲಕರನ್ನು ಗುರುತಿಸಿ ಮೀರಾಬಾಯಿ ಚಾನು ಉಡುಗೊರೆ ನೀಡಿ ಕೃತಜ್ಞತೆ ತಿಳಿಸಿದ್ದಾರೆ.
ತಮಗೆ ಮಾಡಿದ ಸಹಾಯವನ್ನು ಮರೆಯದೇ ಮೀರಾಬಾಯಿ ಚಾಲಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸುಮಾರು 150 ಟ್ರಕ್ ಚಾಲಕರಿಗೆ ಉಡುಗೊರೆ ನಿಡಿದ್ದಾರೆ. ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಕನಸನ್ನು ನನಸು ಮಾಡಲು ಹುರಿದುಂಬಿಸಿದ ಚಾಲಕರ ಬಗ್ಗೆ ಮಾತನಾಡುತ್ತಾ ಕೆಲ ಸಮಯ ಭಾವುಕರಾಗಿದ್ದಾರೆ.
What a kind gesture by our Olympic medalist @mirabai_chanu
Today she rewarded truck drivers in Imphal who use to give her lift from home to sports academy during her early training days. Her home was more than 25 km from the Academy & there was no means of transport those days. pic.twitter.com/lxmpej8E3m— Rahul Trehan (@imrahultrehan) August 5, 2021
ತರಬೇತಿ ಪಡೆಯುವಾಗ ಮನೆಯಿಂದ ಅದೆಷ್ಟೋ ದೂರ ಕ್ರಮಿಸಬೇಕಿತ್ತು. ಆ ಸಮಯದಲ್ಲಿ ನನಗೆ ಸಹಾಯ ಮಾಡಿದ ಟ್ರಕ್ ಚಾಲಕರಿಗೆ ನಾನು ಎಂದೂ ಕೃತಜ್ಞಳಾಗಿರುತ್ತೇನೆ. ಅವರ ಆಶೀರ್ವಾದ ನನ್ನ ಮೇಲೆ ಸದಾ ಇರಬೇಕು. ನನ್ನ ಕಷ್ಟದ ಸಮಯದಲ್ಲಿ ಅವರು ಸಹಾಯ ಮಾಡಿದ್ದಾರೆ ಎಂದು ಮೀರಾಬಾಯಿ ಚಾನು ಮಾತನಾಡಿದ್ದಾರೆ.
ನಿಮ್ಮ ಜಿವನದಲ್ಲಿ ಸಹಾಯ ಮಾಡಿದ ಯಾರನ್ನೂ ನೀವು ಮರೆಯಲಿಲ್ಲ. ಅವರಿಗೆ ಉಡುಗೊರೆ ನೀಡಿ ಕೃತಜ್ಞತೆ ಸಲ್ಲಿಸಿದ್ದೀರಿ. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Mirabai Chanu: ಸಿನಿಮಾ ಆಗಲಿದೆ ಮೀರಾಬಾಯಿ ಚಾನು ಜೀವನ: ಯಾವ ಭಾಷೆಯಲ್ಲಿ ಬರಲಿದೆ ಗೊತ್ತಾ?
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಲವ್ಲಿನಾ, ಪಿ.ವಿ.ಸಿಂಧು, ಮೀರಾಬಾಯಿ ಚಾನುರಿಗೆ ಅಮುಲ್ ಅಭಿನಂದನೆ..
Published On - 12:01 pm, Fri, 6 August 21