Tomato : ಏನಿಲ್ಲವೆಂದರೆ ಮಹಾನಗರಗಳಲ್ಲಿ ಒಂದು ಕೇಜಿ ಟೊಮ್ಯಾಟೋ ಬೆಲೆ ರೂ. 100ರಿಂದ 200. ಈ ಪರಿ ಬೆಲೆ ಏರಿಕೆಯಿಂದಾಗಿ ಟೊಮ್ಯಾಟೋ ರಹಿತ ಖಾದ್ಯಗಳನ್ನು ತಿನ್ನುತ್ತಿರುವ ಜನರ ಮುಖವೆಲ್ಲಾ ಸಪ್ಪನೆಯ ಬೇಳೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೊಮ್ಯಾಟೋ ಹಾಡುಗಳು, ಮೀಮ್ಗಳು, ಜೋಕುಗಳು, ವಿಡಂಬನಾತ್ಮಕ ರೀಲ್ಸ್ಗಳು ದಂಡಿಯಾಗಿ ಓಡಾಡುತ್ತಿವೆ. ಆ ಪೈಕಿ ತಮಿಳಿನ ‘ಎನಿಮಿ’ ಸಿನೆಮಾದ ಟಮ್ ಟಮ್ ಹಾಡಿನ ಟ್ರ್ಯಾಕ್ಗೆ ನಟ ಮತ್ತು ಗಾಯಕ ಕುಶಾಲ್ ಪವಾರ್ (Khushaal Pawaar) ಎನ್ನುವ ಇನ್ಸ್ಟಾಗ್ರಾಮಿಗಳು ಟೊಮ್ಯಾಟೋ ಹಾಡನ್ನು ಬರೆದು, ಹಾಡಿ ಸಂಗಡಿಗರೊಂದಿಗೆ ನರ್ತಿಸಿರುವುದು ವೈರಲ್ ಆಗುತ್ತಿದೆ.
ಈತನಕ ಈ ವಿಡಿಯೋ ಅನ್ನು ಸುಮಾರು 7,30,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಹಾಸ್ಯಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಂದು ನಾನು ಟೊಮ್ಯಾಟೋ ಇಲ್ಲದೆಯೇ ಟೊಮ್ಯಾಟೋ ಸೂಪ್ ಕುಡಿದೆ ಎಂದು ಒಬ್ಬರು ಹೇಳಿದ್ದಾರೆ. ಈ ಹಾಡಿನೊಂದಿಗೆ ಇನ್ನಷ್ಟು ಸಾಹಿತ್ಯವನ್ನೂ ಸೇರಿಸಿ ಎಂದು ಇದೇ ಗತಿಗೆ ತಕ್ಕಂತೆ ನಾಲ್ಕೈದು ಹೊಸ ಸಾಲುಗಳನ್ನು ಒಬ್ಬರು ಸೇರಿಸಿದ್ದಾರೆ.
ಇದನ್ನೂ ಓದಿ : Viral: ಭಾರತದ ಈ 15 ಸಸ್ಯಾಹಾರಿ ಖಾದ್ಯಗಳು ವಿಶ್ವದ ಜನಪ್ರಿಯತೆ ಗಳಿಸಿವೆ
ಬೆಂಕಿ ಅಣ್ಣಾ! ಬೆಂಕಿ ಹಚ್ಚಬಿಟ್ಟೆ ಈ ಹಾಡಿನಿಂದ ಎಂದಿದ್ದಾರೆ ಒಬ್ಬರು. ಮನುಷ್ಯರೇ ಆಗಲಿ ಟೊಮ್ಯಾಟೋನೇ ಆಗಲಿ ಬೆಲೆ ಏರಿದಂತೆ ಅವರನ್ನು ಕೈಬಿಟ್ಟುಬಿಡಬೇಕು ಎಂದಿದ್ದಾರೆ ಮತ್ತೊಬ್ಬರು. ಮೊದಲು ಈರುಳ್ಳಿ ತುಟ್ಟಿಯಾಗಿತ್ತು ಈಗ ಟೊಮ್ಯಾಟೋ ನಂತರದ ಸರದಿ ಆಲೂಗಡ್ಡೆಯದು ಎಂದಿದ್ದಾರೆ ಮಗದೊಬ್ಬರು. ಹುಷಾರಾಗಿರಿ ನಿಮ್ಮ ಇನ್ಸ್ಟಾ ಅಕೌಂಟ್ ಬ್ಯಾನ್ ಆದೀತು ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.
ಇದನ್ನೂ ಓದಿ : Viral Video: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?
ನಿಮಗೂ ಈಗ ಟೊಮ್ಯಾಟೋ ಬಗ್ಗೆ ಹೊಸ ಹಾಡು ಬರೆಯಬೇಕು ಎನ್ನಿಸುತ್ತಿದೆಯೇ? ಅಥವಾ ಡ್ಯಾನ್ಸ್ ಮಾಡಿ ರೀಲ್ ಮಾಡಬೇಕು ಎನ್ನಿಸುತ್ತಿದೆಯೇ? ಏನೇ ಮಾಡಿದರೂ ಟೊಮ್ಯಾಟೋ ಬೆಲೆ ಇಷ್ಟು ಬೇಗ ಇಳಿದೀತೆ? ಟೊಮ್ಯಾಟೋ ಇಲ್ಲದೆ ಅಡುಗೆ ರುಚಿಸುತ್ತಿದೆಯೆ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:49 pm, Sat, 8 July 23