Trending Viral Video: ರೀಲ್ಸ್ಗಾಗಿ ಜನ ಏನ್ ಬೇಕಾದ್ರೂ ಮಾಡ್ತಾರಪ್ಪಾ! ಸಿಲಿಂಡರ್ ಮೇಲೆ ಡ್ಯಾನ್ಸ್ ಮಾಡ್ತಿದ್ದ ಯುವತಿಗೆ ಕೊನೆಗೆ ಏನಾಯ್ತು ನೋಡಿ!
ಜಾರಿ ಬಿದ್ದ ಜಾಣೆ: ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಶಾಲಾ ಸಮವಸ್ತ್ರದಲ್ಲಿ ಗ್ಯಾಸ್ ಸಿಲಿಂಡರ್ ಹತ್ತಿ, ಅದರ ಮೇಲೆ ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾಳೆ. ಆ ಯುವತ ಮೊದಮೊದಲು ಶ್ರಮಹಾಕಿ ಸಮತೋಲನ ಕಾಯ್ದುಕೊಂಡು ಒಳ್ಳೇಯ ನೃತ್ಯವನ್ನೇ ಮಾಡಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ಸಿಲಿಂಡರ್‌ನಿಂದ ಕೆಳಗೆ ಜಾರಿ ಬಿದ್ದಿದ್ದಾಳೆ. ಇದೀಗ ಈ ಉತ್ತಮ ನೃತ್ಯ ವೀಡಿಯೊ ತಮಾಷೆಯ ವೀಡಿಯೊವಾಗಿ ಮಾರ್ಪಟ್ಟಿದೆ ಅಷ್ಟೇ.
ಈಗಂತೂ ಬಿಡಿ ರೀಲ್ಸ್ ಹುಚ್ಚು ವಿಪರೀತದ ಹಂತ ತಲುಪಿಬಿಟ್ಟಿದೆ. ಆದರೂ ಇನ್ನೂ ಏನೇನು ನೋಡಬೇಕಿದೆಯೋ ಈ ರೀಲ್ಸ್ ಯುಗದಲ್ಲಿ! ಹತ್ತು ಮಂದಿಗೆ ತಮ್ಮಲ್ಲಿನ ಅನೂಚವಾದ ಪ್ರತಿಭೆ, ತಮ್ಮ ಅಭೀಷ್ಟೆ, ಆಸಕ್ತಿ ಗೊತ್ತಾಗುವಂತೆ ರೀಲು, ವಿಡಿಯೋಗಳನ್ನು ಮಂದಿ ಮುಗಿಬಿದ್ದು ಮಾಡುತ್ತಿದ್ದಾರೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಂತರ್ಜಾಲದಲ್ಲಿ ವಿಹರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಶೇರ್ ಮಾಡುವುದು (tragedy) ಮತ್ತು ತಮ್ಮ ಕಲೆಯನ್ನು ಪ್ರದರ್ಶಿಸುವುದು (Girl Dancing) ಪ್ರಸ್ತುತ ಟ್ರೆಂಡ್ ಆಗಿದೆ (Trending Viral Video).
ಆದರೆ ಕೆಲವರು ವಿಚಿತ್ರವಾದ ಸಂಗತಿಗಳೂ ನಡೆಯುತ್ತಿವೆ… ರೀಲ್‌ಗಳನ್ನು ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುತ್ತಾರೆ. ಆದರೆ ಈ ರೀಲ್‌ಗಳನ್ನು ಮಾಡುವಾಗ ಅವರು ಏನೋ ಒಂದು ನಿರ್ದಿಷ್ಟ ಕೆಲಸ ಮಾಡಲು ಬಯಸುತ್ತಾರೆ.. ಆದರೆ ಇನ್ನೇನೋ ಆಗುತ್ತದೆ. ಜನ ಅಂತಹ ವೀಡಿಯೋಗಳನ್ನು ನೋಡುವುದು.. ಇದೆಲ್ಲ ಮೋಜಿಗಾಗಿ ಮಾಡಿದ್ದಾರೋ, ಅಥವಾ ಸೀರಿಯಸ್ ಆಗಿ ಮಾಡ್ತಾರೋ ಆ ದೇವರೇ ಬಲ್ಲ. ಏನೇ ಆಗಲಿ ಕೊನೆಗೆ, ಏನೂ ಯಡವಟ್ಟು ಆಗದೆ, ಯಾವುದೋ ಅಹಿತಕರ ಘಟನೆ ನಡೆಯದಿದ್ದರೆ ಪರವಾಗಿಲ್ಲ. ಆದರೆ ಕೆಲವೊಮ್ಮೆ ತಮಾಷೆಯ ದುರ್ಘಟನೆಗಳು/ ದುರಂತಗಳು ನಡೆದುಬಿಡುತ್ತವೆ. ಆ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೂ ಸದ್ದು ಮಾಡುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಗ್ಯಾಸ್ ಸಿಲಿಂಡರ್ (Gas Cylinder) ಮೇಲೆ ಡ್ಯಾನ್ಸ್ ಮಾಡಿದ್ದಾಳೆ. ಅದರೆ ಕೊನೆಗೆ ಏನಾಯ್ತು ತಪ್ಪದೆ ವಿಡಿಯೋ ನೋಡಿ.
ಜಾರಿ ಬಿದ್ದ ಜಾಣೆ: ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಶಾಲಾ ಸಮವಸ್ತ್ರದಲ್ಲಿ ಗ್ಯಾಸ್ ಸಿಲಿಂಡರ್ ಹತ್ತಿ, ಅದರ ಮೇಲೆ ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾಳೆ. ಆ ಯುವತ ಮೊದಮೊದಲು ಶ್ರಮಹಾಕಿ ಸಮತೋಲನ ಕಾಯ್ದುಕೊಂಡು ಒಳ್ಳೇಯ ನೃತ್ಯವನ್ನೇ ಮಾಡಿದ್ದಾಳೆ. ಯುವತಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾಳೆಂದು ತೋರುತ್ತದೆ. ಆದರೆ ಇದ್ದಕ್ಕಿದ್ದಂತೆ ಸಿಲಿಂಡರ್‌ನಿಂದ ಕೆಳಗೆ ಜಾರಿ ಬಿದ್ದಿದ್ದಾಳೆ. ಇದೀಗ ಈ ಉತ್ತಮ ನೃತ್ಯ ವೀಡಿಯೊ ತಮಾಷೆಯ ವೀಡಿಯೊವಾಗಿ ಮಾರ್ಪಟ್ಟಿದೆ ಅಷ್ಟೇ. ಜಾರಿ ಬಿದ್ದ ಜಾಣೆಯಾಗಿದ್ದಾಳೆ ಅಷ್ಟೆ.
View this post on Instagram
ವಿಡಿಯೋ ನೋಡಿದ ಮಂದಿ ಎಂದಿನಂತೆ ಮುಸಿಮುಸಿ ನಗ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದನ್ನು ಸರ್ಕಾರದ ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಲಿಂಕ್ ಮಾಡಿದರೆ, ಇನ್ನು ಕೆಲವರು ಇದು ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತ ಎಂದು ವ್ಯಾಖ್ಯಾನಿಸಿದ್ದಾರೆ. ಹುಡುಗಿ ರೀಲ್ ಮಾಡುವ ಪ್ರಯತ್ನಕ್ಕೆ ಇನ್ನೂ ಹಲವಾರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ರೀಲ್ ಮಾಡುವುದು ಮಕ್ಕಳ ಆಟವಲ್ಲ ಅಮ್ಮಣ್ಣೀ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.. ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣ. ಅದನ್ನು ಈ ಹುಡುಗಿ ಸಾಬೀತು ಮಾಡಿದ್ದಾಳೆ.. ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ!
Also Read: Viral Video: ಬಾವುಟ ಹಿಡಿದು ಡ್ಯಾನ್ಸ್ ಮಾಡುವಾಗಲೇ ಪ್ರಾಣ ಬಿಟ್ಟ ಸೈನಿಕ; ಚಪ್ಪಾಳೆ ತಟ್ಟಿದ ಜನ!
ಈ ವೀಡಿಯೊವನ್ನು Instagram ನಲ್ಲಿ sehnaj_badgujar ಖಾತೆಯಿಂದ ಹಂಚಿಕೊಳ್ಳಲಾಗಿದೆ. “ಡಿಂಗ್ ಡಿಂಗ್ ಡ್ಯಾನ್ಸ್ ಅನ್ನು ಕೊನೆಯವರೆಗೂ ನೋಡಿ” ಎಂದು ಶೀರ್ಷಿಕೆ ಸೇರಿಸಿದ್ದಾರೆ. ಇದುವರೆಗೆ 3.3 ಮಿಲಿಯನ್ (33 ಲಕ್ಷ) ಜನರು ಈ ವಿಡಿಯೋ ನೋಡಿದ್ದಾರೆ. 48 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Sat, 1 June 24