Video: ಆಫೀಸ್ನಲ್ಲಿ ಬೇರೆ ಮಹಿಳೆ ಜತೆಗೆ ಸರಸ ಸಲ್ಲಾಪ, ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಮಾಜಿ ‘ಮಿಸ್ ವೈಜಾಗ್’ ನಕ್ಷತ್ರ
ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಸಂಬಂಧದ ವೇಳೆ ಸಿಕ್ಕಿ ಬೀಳುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮಾಜಿ ಸುಂದರಿ ವೈಜಾಗ್ ನಕ್ಷತ್ರರವರು ತನ್ನ ಪತಿಯು ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಕಳೆದ ಕೆಲವು ವರ್ಷಗಳಿಂದ ವಿವಾಹದ ನಂತರ ಸಂಬಂಧವನ್ನು ಹೊಂದುತ್ತಿರುವವರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಇದೀಗ ಮಾಜಿ ಸುಂದರಿ ವೈಜಾಗ್ ನಕ್ಷತ್ರರವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೌದು, ತನ್ನ ಪತಿಯು ಬೇರೊಬ್ಬಳ ಜೊತೆಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು ಮೇ 31 ರಂದು ವಿಶಾಖಪಟ್ಟದಲ್ಲಿರುವ ಶೂಟಿಂಗ್ ಕಚೇರಿಯಲ್ಲಿ ತೇಜಾರವರು ಬೇರೊಬ್ಬ ಮಹಿಳೆಯ ಜೊತೆಗೆ ಇರುವುದನ್ನು ತಿಳಿಯುತ್ತಿದ್ದಂತೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ತೆರಳಿ ನಕ್ಷತ್ರರವರು ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ನಕ್ಷತ್ರರವರು ವ್ಯಕ್ತಿಯೊಬ್ಬನಿಗೆ ಕಚೇರಿಯ ಬಾಗಿಲು ತೆರೆಯಲು ಹೇಳುತ್ತಿರುವುದನ್ನು ಕಾಣಬಹುದು.
Former Miss Vizag catches husband red-handed with another woman.pic.twitter.com/X0bOxlaqnr
— زماں (@Delhiite_) May 31, 2024
ಕೊನೆಗೆ ತಾನೇ ಬಾಗಿಲನ್ನು ತಳ್ಳಿ ಒಳಗೆ ಹೋದ ನಕ್ಷತ್ರರವರು ಪತಿಯ ಜೊತೆಗೆ ಇದ್ದ ಮಹಿಳೆಯ ಮೇಲೆ ಸಿಕ್ಕಸಿಕ್ಕ ವಸ್ತುಗಳನ್ನು ಬಿಸಾಡಿದ್ದಾರೆ. ಪತಿಯು ಜೋರಾಗಿ ಮಾತನಾಡಲು ಶುರು ಮಾಡುತ್ತಿದ್ದಂತೆ ಪತಿಗೆ ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಲ್ಲದೇ, ತೇಜಾ ವಿಚ್ಛೇದನ ನೀಡದೆ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂದು ಮಾಜಿ ಸುಂದರಿ ವೈಜಾಗ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಬೇಯಿಸಿದ ಮೊಟ್ಟೆ ಸಿಪ್ಪೆಯನ್ನು ಹೀಗೂ ತೆಗೆಯಬಹುದು, ಇಲ್ಲಿದೆ ವಿಡಿಯೋ
ಆದರೆ ಇತ್ತ ತೇಜಾ ಮಾಜಿ ಸುಂದರಿ ವೈಜಾಗ್ ನಕ್ಷತ್ರ ತನ್ನ ವಿರುದ್ಧ ಮಾಡಿದ ಎಲ್ಲಾ ಆರೋಪಗಳನ್ನು ತೇಜಾ ತಿರಸ್ಕರಿಸಿದ್ದಾರೆ. “ನನ್ನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಮತ್ತು ಅವು ನ್ಯಾಯಾಲಯದಲ್ಲಿ ಬಾಕಿ ಇವೆ.” ತನ್ನ ಕೋಣೆಯಲ್ಲಿದ್ದ ಮಹಿಳೆಯು ತನ್ನ ಚಲನಚಿತ್ರಕ್ಕಾಗಿ ಆಡಿಷನ್‌ಗೆ ಬಂದಿದ್ದಾರೆ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ