Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?

ಸುರಕ್ಷಿತ ಲೈಂಗಿಕ ಕ್ರಿಯೆಗೆ ಬಳಸುವ ಕಾಂಡೋಮ್ ಬೆಲೆ ವೆನೆಜುವೆಲಾ ದೇಶದಲ್ಲಿ 60,000ರೂ.ಗೆ ತಲುಪಿದೆ. ಭಾರಿ ಬೆಲೆ ಏರಿಕೆಯಿಂದಾಗಿ ಆ ದೇಶದ ಜನರನ್ನು ಚಿಂತೆಗೀಡುಮಾಡಿದೆ.

Viral: ಒಂದು ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿ! ಎಲ್ಲಿ ಗೊತ್ತಾ?
ಸಾಂಕೇತಿಕ ಚಿತ್ರ
Edited By: Rakesh Nayak Manchi

Updated on: Jun 13, 2022 | 4:37 PM

ಅನೇಕ ದೇಶಗಳಲ್ಲಿ ಸರ್ಕಾರಗಳು ಉಚಿತವಾಗಿ ಕಾಂಡೋಮ್​ಗಳನ್ನು ವಿತರಿಸುತ್ತಿದೆ. ಏಕೆಂದರೆ ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಅವಶ್ಯವಾಗಿದೆ. ಇಂಥ ಕಾಂಡೋಮ್ ಬೆಲೆ ದುಬಾರಿಯಾದರೆ ಹೇಗೆ? ದಕ್ಷಿಣ ಅಮೆರಿಕಾದ ಉತ್ತರ ಕರಾವಳಿಯಲ್ಲಿರುವ ವೆನೆಜುವೆಲಾ ದೇಶದಲ್ಲಿ ಕಾಂಡೋಮ್ ಖರೀದಿಸುವುದು ಒಂದೇ ದೊಡ್ಡ ಗಾತ್ರದ ಟಿವಿ ಖರೀದಿಸುವುದೂ ಒಂದೆ. ಏಕೆಂದರೆ ಈ ದೇಶದಲ್ಲಿ ಒಂದು ಕಾಂಡೋಮ್ ಪ್ಯಾಕ್ ಬೆಲೆ 60ಸಾವಿರ ರೂಪಾಯಿ ಆಗಿದೆ. ಇದು ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: Viral Video: ರಸ್ತೆ ದಾಟುವ ಹುಲಿಗಳ ಹಿಂಡಿನ ಅಪರೂಪದ ದೃಶ್ಯಾವಳಿ ಸೆರೆ ಹಿಡಿದ ಪ್ರವಾಸಿಗರು

ವೆನೆಜುವೆಲಾದಂತಹ ದೇಶಗಳಲ್ಲಿ ಹದಿಹರೆಯದವರಲ್ಲಿ ಗರ್ಭಧಾರಣೆಯ ಮಟ್ಟವು ಅತ್ಯಧಿಕವಾಗಿದೆ. ಯುಎನ್‌ನ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2015 ರ ಪ್ರಕಾರ, ವೆನೆಜುವೆಲಾ ಅತಿ ಹೆಚ್ಚು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳನ್ನು ಹೊಂದಿದೆ. ಇದೇ ಕಾರಣಕ್ಕಾಗಿ ವೆನೆಜುವೆಲಾದಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಒಂದೊಮ್ಮೆ ಗರ್ಭಪಾತ ಮಾಡಿದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನನ್ನು ಕೂಡ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Viral Video: ರಸ್ತೆ ಮಧ್ಯೆ ವಾಹನಕ್ಕೆ ಅಡ್ಡ ಹಾಕಿ, ಆಹಾರಕ್ಕಾಗಿ ಹುಡುಕಾಡಿದ ಆನೆ; ವಿಡಿಯೋ ವೈರಲ್

ಇದೇ ಕಾರಣಕ್ಕಾಗಿ ಆ ದೇಶದಲ್ಲಿ ಇತ್ತೀಚೆಗೆ ಕಾಂಡೋಮ್ ಪ್ಯಾಕ್ ಬೆಲೆ 60,000 ರೂಪಾಯಿಗಳಿಗೆ ಏರಿದೆ. ಕೈಗೆಟಕುವ ದರದಲ್ಲಿ ಸಿಗುತ್ತಿದ್ದ ಕಾಂಡೋಮ್​ಗಳು ಇದೀಗ ಇಷ್ಟೊಂದು ದುಬಾರಿಯಾಗಿರುವುದರಿಂದ ಅಲ್ಲಿನ ಜನರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಆದರೆ ಕಾಂಡೋಮ್‌ಗಳ ಬೆಲೆ ಏಕೆ ಅಷ್ಟೊಂದು ದುಬಾರಿಯಾಗಿದೆ ಎಂದು ಯಾವುದೇ ಸಂಗತಿ ಬಹಿರಂಗಗೊಂಡಿಲ್ಲ. ಆದರೆ ಬೆಲೆಯಲ್ಲಿ ಭಾರಿ ಏರಿಕೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Mon, 13 June 22

TV9 Web

TV9 Kannada

Read More
Loading...
Unable to load recommendations.
Follow Us