AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending News: ಅಂತಿಂಥವರಲ್ಲ ನಮ್ಮ ದಣಿ, ಕೋಟಿ ಮೌಲ್ಯದ ಆಸ್ತಿ, ಮನೆಗಳು, ಐಷಾರಾಮಿ ವಾಹನಗಳನ್ನು ತನ್ನ ಸೇವಕರಿಗೆ ಹಂಚಿದ ಮಾಲೀಕ

ಮಾಲೀಕ ಹಾಗೂ ಸೇವಕರ ಸಂಬಂಧ ಕೇವಲ ಕೆಲಸಕ್ಕಷ್ಟೆ ಸೀಮಿತ, ಸೇವಕ ಕೆಲಸ ಮಾಡುತ್ತಾನೆ, ಮಾಲೀಕ ಆ ಕೆಲಸಕ್ಕೆ ತಕ್ಕ ಸಂಬಳವನ್ನು ಕೊಡುತ್ತಾನೆ ಅವರ ಸಂಬಂಧ ಅಷ್ಟಕ್ಕೇ ಮುಗಿದು ಹೋಗುತ್ತದೆ.

Trending News: ಅಂತಿಂಥವರಲ್ಲ ನಮ್ಮ ದಣಿ, ಕೋಟಿ ಮೌಲ್ಯದ ಆಸ್ತಿ, ಮನೆಗಳು, ಐಷಾರಾಮಿ ವಾಹನಗಳನ್ನು ತನ್ನ ಸೇವಕರಿಗೆ ಹಂಚಿದ ಮಾಲೀಕ
ಬಲ್ಜಿತ್ ಸಿಂಗ್ ಮಾನ್
ನಯನಾ ರಾಜೀವ್
|

Updated on: Feb 20, 2023 | 12:37 PM

Share

ಮಾಲೀಕ ಹಾಗೂ ಸೇವಕರ ಸಂಬಂಧ ಕೇವಲ ಕೆಲಸಕ್ಕಷ್ಟೆ ಸೀಮಿತ, ಸೇವಕ ಕೆಲಸ ಮಾಡುತ್ತಾನೆ, ಮಾಲೀಕ ಆ ಕೆಲಸಕ್ಕೆ ತಕ್ಕ ಸಂಬಳವನ್ನು ಕೊಡುತ್ತಾನೆ ಅವರ ಸಂಬಂಧ ಅಷ್ಟಕ್ಕೇ ಮುಗಿದು ಹೋಗುತ್ತದೆ. ಆದರೆ ಇಲ್ಲೊಬ್ಬ ಮಾಲೀಕ ತನ್ನ 30 ಎಕರೆ ಜಮೀನು, ಮನೆಗಳು ಹಾಗೂ ಐಷಾರಾಮಿ ವಾಹನಗಳನ್ನು ತನ್ನ ಸೇವಕರ ಹೆಸರಿಗೆ ಬರೆದು ಉದಾರಿ ಎನಿಸಿಕೊಂಡಿದ್ದಾರೆ. ಪಂಜಾಬ್​ನ 87 ವರ್ಷದ ಹಿರಿಯ ವ್ಯಕ್ತಿ ತನ್ನ ಸೇವಕರಿಗೆ ಎಲ್ಲಾ ಆಸ್ತಿಯನ್ನು ದಾನ ಮಾಡಿದ್ದಾರೆ. ಮುಕ್ತಸರ ಸಾಹಿಬ್‌ನ ಬಾಮ್ ಗ್ರಾಮದ ನಿವಾಸಿ 87 ವರ್ಷದ ಬಲ್ಜಿತ್ ಸಿಂಗ್ ಮಾನ್ ಅವರು ತಮ್ಮ ಕೋಟಿ ಗೂ ಅಧಿಕ ಬೆಲೆ ಬಾಳುವ ಆಸ್ತಿಯನ್ನು ತನ್ನ ಸೇವಕರಿಗೆ ಬರೆದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಬಲ್ಜಿತ್ ಸಿಂಗ್ ಮಾನ್ ತನ್ನ ಆಸ್ತಿಯನ್ನು ತನ್ನ ಸೇವಕರ ಹೆಸರಿನಲ್ಲಿ ಬರೆದಾಗಿನಿಂದ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. 2011 ರಲ್ಲಿ ತನ್ನ ಪತ್ನಿಯ ಮರಣದ ನಂತರ ಅವರು ಒಂಟಿಯಾಗಿದ್ದರು ಎಂದು ಬಲ್ಜಿತ್ ಸಿಂಗ್ ಹೇಳುತ್ತಾರೆ. ಯಾವ ಸಂಬಂಧಿಯೂ ನೋಡಲು ಬರುತ್ತಿರಲಿಲ್ಲ. ಇಷ್ಟೇ ಅಲ್ಲ, ಪತ್ನಿ ಬದುಕಿದ್ದಾಗ ಕೆಲ ಸಂಬಂಧಿಕರು ಆಕೆಯ ಜಮೀನನ್ನೆಲ್ಲ ಲೂಟಿ ಮಾಡಲು ಯತ್ನಿಸಿದ್ದರು. ಈ ಪರಿಸ್ಥಿತಿಯಲ್ಲಿ ಕೆಲವು ಸೇವಕರು ಅವರಿಗೆ ಹೆಗಲಾಗಿ ನಿಂತಿದ್ದರು.

ಮತ್ತಷ್ಟು ಓದಿ: ಅಯ್ಯೋ ನನಗೆ ಬಾಯ್​ಫ್ರೆಂಡ್ ಇಲ್ಲ ಎಂದು ಕಣ್ಣೀರಿಟ್ಟ ಚೀನಾ ಯುವತಿ ವಿಡಿಯೋ ವೈರಲ್

ಇದನ್ನೆಲ್ಲ ಗಮನಿಸಿದರೆ ಪತ್ನಿ ಬದುಕಿರುವಾಗಲೇ ಬಲ್ಜಿತ್ ಸಿಂಗ್ ಮತ್ತು ಆತನ ಪತ್ನಿ ತಮ್ಮ ಆಸ್ತಿಯನ್ನು ಸಂಬಂಧಿಕರಿಗೆ ನೀಡುವುದಿಲ್ಲ ಎಂದು ನಿರ್ಧರಿಸಿದ್ದರು. ಬಟಿಂಡಾ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿರುವ ಇಕ್ಬಾಲ್ ಎಂಬ ನೌಕರನ ಹೆಸರಿನಲ್ಲಿ 19 ಎಕರೆ ಭೂಮಿ ಇದೆ ಎಂದು ಬಲ್ಜಿತ್ ಸಿಂಗ್ ಹೇಳಿದ್ದಾರೆ.

ಹಾಗೂ ಇನ್ನಿಬ್ಬರು ಸೇವಕರ ಹೆಸರಿನಲ್ಲಿ 6 ಮತ್ತು 4 ಎಕರೆ ಜಮೀನು ಇದೆ. ಅಷ್ಟೊತ್ತಿಗಾಗಲೇ ಇಷ್ಟು ಆಸ್ತಿ ಸಿಕ್ಕ ಮೇಲೆ ಸೇವಕರೂ ಖುಷಿಯಾಗಿದ್ದಾರೆ. ಬಾಲ್ಜಿತ್ ಸಿಂಗ್ ಅವರು ತಮ್ಮ ಐಷಾರಾಮಿ ಮನೆಯನ್ನು ನನಗೆ ನೀಡಿದ್ದಾರೆ ಎಂದು ಸೇವಕ ಇಕ್ಬಾಲ್ ಸಿಂಗ್ ಹೇಳಿದರು, ಅವರು ಸ್ವತಃ ಜಮೀನಿನಲ್ಲಿ ನಿರ್ಮಿಸಲಾದ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ