Viral Optical Illusion : ಆಪ್ಟಿಕಲ್ ಇಲ್ಲ್ಯೂಷನ್ಗೆ ಸಂಬಂಧಿಸಿದ ಸಾಕಷ್ಟು ಸವಾಲುಗಳನ್ನು ಆಗಾಗ ಇದೇ ತಾಣದಲ್ಲಿ ನೋಡುತ್ತಿರುತ್ತೀರಿ ಮತ್ತು ಸವಾಲು ಬಿಡಿಸಲು ಪ್ರಯತ್ನಿಸುತ್ತಿರುತ್ತೀರಿ. ಸೆಕೆಂಡುಗಳ ಲೆಕ್ಕದಲ್ಲಿ ಸಮಯ ಕೊಟ್ಟಾಗ ಅನೇಕರಿಗೆ ಇದು ಕಷ್ಟಕರವಾಗಿದ್ದಿದೆ. ಇನ್ನೂ ಕೆಲವರು ಸಮಯ ಮೀರಿದರೂ ಉತ್ತರ ಹುಡುಕುವುದರಲ್ಲಿ ಆಸಕ್ತಿ ವಹಿಸಿರುತ್ತೀರಿ. ಉತ್ತರ ಸಿಗದಿದ್ದರೂ ನಿಮ್ಮ ಚಿತ್ತವನ್ನು ಏಕಾಗ್ರಗೊಳಿಸಿಕೊಳ್ಳಲು ಮತ್ತು ಮೆದುಳಿಗೆ ವ್ಯಾಯಾಮ ನೀಡಲು ಇಂಥ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುತ್ತೀರಿ.
ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್
ಇದೀಗ ಮತ್ತೊಂದು ಹೊಸ ಚಿತ್ರ ಸವಾಲು ಇಲ್ಲಿದೆ. ನಿಮ್ಮ ದೃಷ್ಟಿಗೂ ಬುದ್ಧಿಗೂ ಮಧ್ಯೆ ಇದು ಸವಾಲನ್ನು ಸೃಷ್ಟಿಸುತ್ತದೆ. ಈ ಬಾತ್ರೂಮಿನಲ್ಲಿರುವ ವಸ್ತುಗಳನ್ನು ಗಮನಿಸಿ. ಟೂತ್ಬ್ರಷ್, ಟವೆಲ್, ಹೇರ್ ಡ್ರೈಯರ್, ಡಸ್ಟ್ ಬಿನ್, ಟಿಶ್ಯೂ ರೋಲ್, ಶಾಂಪೂ, ಸೋಪ್, ಪೇಸ್ಟ್, ಬಾತ್ರೂಮ್ ಕ್ಲೀನರ್ ಹೀಗೆ ಏನೆಲ್ಲ ಸಾಮಾನುಗಳು ಇಲ್ಲಿವೆ. ಇವುಗಳ ಮಧ್ಯೆಯೇ ಆಟಿಕೆಯ ಕಾರೊಂದು ಅಡಗಿದೆ.
ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್
ಕಾಣುತ್ತಿದೆಯಾ ಆಟಿಕೆಯ ಕಾರು? ನೀವು ಯಾವ ವಯಸ್ಸಿನವರೇ ಆಗಿರಲಿ ಆದರೆ ಖಂಡಿತ ಉತ್ತರ ಹುಡುಕುತ್ತೀರಿ ಎಂಬ ವಿಶ್ವಾಸ ನಮ್ಮದು. ಹೋಗಲಿ ಈಗ ಅವಧಿಯನ್ನು ಹೆಚ್ಚಿಸೋಣ. ಎಂಟು ಸೆಕೆಂಡುಗಳನ್ನು ತೆಗೆದುಕೊಳ್ಳಿ. ಈಗಲೂ ಗೊತ್ತಾಗುತ್ತಿಲ್ಲವಾ? ನೋಡಿಬಿಡಿ ಈ ಕೆಳಗಿನ ಚಿತ್ರ!
ಮಾರ್ಕ್ ಮಾಡಿದ ಜಾಗ ಗಮನಿಸಿದ ಮೇಲೆ ನಿಮಗೆ ಹುಡುಕುತ್ತಿರುವ ಚಿತ್ರವು ಸ್ಪಷ್ಟವಾಗಿ ಕಾಣುತ್ತದೆಯಲ್ಲ? ಅದೇ ಆಪ್ಟಿಕಲ್ ಇಲ್ಲ್ಯೂಷನ್ಗಾಗಿ ಚಿತ್ರಿಸಿದ ಡ್ರಾಯಿಂಗ್, ರೇಖಾಚಿತ್ರಗಳ ಗುಟ್ಟು. ನಿಮಗೆ ಕೊಟ್ಟ ಸಮಯದಲ್ಲಿ ಉತ್ತರ ಸಿಕ್ಕಿದ್ದರೆ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಿ. ಪ್ರಯತ್ನಿಸಿದರೂ ಹಾಗೆಯೇ ಮಾಡಿ. ಧಾವಂತದ ಜೀವನಶೈಲಿಯಲ್ಲಿ ಒಟ್ಟಿನಲ್ಲಿ ನಿಮ್ಮ ಮೆದುಳಿಗೆ ವಿಶ್ರಾಂತಿ ಕೊಟ್ಟಿದ್ದಕ್ಕಾಗಿ ನಿಮ್ಮನ್ನು ನೀವೇ ಪ್ರೋತ್ಸಾಹಿಸಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:25 pm, Mon, 16 January 23