Viral Video: ಯುವಕನಿಗೆ ವಿಷಕಾರಿ ಹಾವು ಕಡಿತ; ಕೋಪದಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಕಿದ ಭೂಪ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 15, 2024 | 2:59 PM

ಛತ್ತೀಸ್ಗಢದ ಸೂರಜ್ಪುರ ಎಂಬಲ್ಲಿ ತೀರಾ ವಿಚಿತ್ರ ಘಟನೆಯೊಂದು ನಡೆದಿದೆ. ರಾತ್ರಿ ಮಲಗಿದ್ದ ವೇಳೆ ಯುವಕನೊಬ್ಬನ ಕೈಗೆ ವಿಷಕಾರಿ ಕಟ್ಟು ಹಾವು ಕಡಿದಿದ್ದು, ಇದರಿಂದ ಕೋಪಗೊಂಡ ಯುವಕ ಹಾವಿನ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ.  ಇದರಿಂದ ಹಾವು ಸಾವನ್ನಪ್ಪಿದ್ದು, ಹಾವಿನ ಕಡಿತಕ್ಕೊಳಗಾದ ಆ ಯುವಕ ಕೂಡಾ ಸಾವನ್ನಪ್ಪಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

Viral Video: ಯುವಕನಿಗೆ ವಿಷಕಾರಿ ಹಾವು ಕಡಿತ; ಕೋಪದಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಕಿದ ಭೂಪ
ವೈರಲ್​​ ವಿಡಿಯೋ
Follow us on

ಹಾವುಗಳೆಂದರೆ ಎಂತಹವರಿಗೂ ಭಯವಾಗುವುದು ಸಹಜ. ವಿಷಕಾರಿ ಹಾವುಗಳೇನಾದರೂ ಕಚ್ಚಿದರೆ ಮನುಷ್ಯ ಸತ್ತೇ ಹೋಗುತ್ತಾನೆ. ಹೀಗೆ ಹಾವು ಕಡಿತಕ್ಕೊಳಗಾಗಿ ಅದೆಷ್ಟೋ ಜನರು ಸಾವನ್ನಪ್ಪಿದ್ದಾರೆ. ಇದೀಗ ಅಂತಹದೇ ವಿಚಿತ್ರ ಘಟನೆಯೊಂದು ನಡೆದಿದ್ದು, ರಾತ್ರಿ ಮಲಗಿದ್ದ ವೇಳೆ ಯುವಕನೊಬ್ಬನ ಕೈಗೆ ವಿಷಕಾರಿ ಕಟ್ಟು ಹಾವು ಕಡಿದಿದೆ. ಇದರಿಂದ ಕೋಪಗೊಂಡ ಯುವಕ ನಿದ್ದೆಗಣ್ಣಿನಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ.  ಪರಿಣಾಮ  ಹಾವು ಸಾವನ್ನಪ್ಪಿದ್ದು, ಹಾವಿನ ಕಡಿತಕ್ಕೊಳಗಾದ ಆ ಯುವಕ ಕೂಡಾ ಸಾವನ್ನಪ್ಪಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಈ ವಿಚಿತ್ರ ಘಟನೆ ಕಳೆದ ವಾರ  ಛತ್ತೀಚ್ಘಡದ ಸೂರಜ್ಪುರ ಜಿಲ್ಲೆಯ ಪ್ರತಾಪುರ್ನಲ್ಲಿ ನಡೆದಿದೆ. ಇಲ್ಲಿನ ರೇವತಿ ಚೌಕಿ ಪ್ರದೇಶದ ಬುಡಕಟ್ಟು ನಿವಾಸಿಯಾದ ಕೋಮಾ ನೇತಮ್ ಎಂಬ ಯುವಕ ರಾತ್ರಿ ನೆಮ್ಮದಿಯಿಂದ ಮಲಗಿದ್ದ ವೇಳೆ ಆತನ ಕೈಗೆ ವಿಷಪೂರಿತ ಕಟ್ಟು ಹಾವು ಕಡಿದಿದೆ. ಸರಿಸುಮಾರು ರಾತ್ರಿ 1 ಗಂಟೆಯ ವೇಳೆಗೆ ಆತನಿಗೆ ಹಾವು ಕಡಿದಿದ್ದು,  ಇದರಿಂದ ಕೋಪಗೊಂಡ ಆ ಯುವಕ ನಿದ್ದೆಗಣ್ಣಿನಲ್ಲಿ  ಹಾವಿನ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ. ನಂತರ ಯುವಕ ಅಲ್ಲಿಯೇ  ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಏನಿದು ಸದ್ದು ಗದ್ದಲ ಕೇಳುತ್ತಿದೆಯೆಂದು ಮನೆಯವರು ಎದ್ದು ಬಂದು ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದ ಯುವಕನ ಬಾಯಲ್ಲಿ ರಕ್ತದ ಕಲೆಗಳಿರುವುದನ್ನು ಗಮನಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ರುಂಡವಿಲ್ಲದ ಹಾವು ಸತ್ತು ಬಿದ್ದಿರುವುದನ್ನು ನೋಡುತ್ತಾರೆ. ಕೂಡಲೇ ಕುಟುಂಬಸ್ಥರು ಯುವಕ ಮತ್ತು ಸತ್ತು ಬಿದ್ದ ಹಾವನ್ನು ಪ್ರತಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.   ಆದರೆ ಹಾವಿನ ವಿಷ ದೇಹದಲ್ಲಿ ಹರಡಿದ ಕಾರಣ  ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು  ಘೋಷಿಸಿದ್ದಾರೆ.

ಇದನ್ನೂ ಓದಿ: ಛೀ ಎಂಥಾ ಹೇಯ ಕೃತ್ಯವಿದು, ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಮುಸ್ಲಿಂ ಕ್ಷೌರಿಕ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:


ಈ ವಿಡಿಯೋವನ್ನು inhnewsindia ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ರುಂಡವಿಲ್ಲದೆ ಸತ್ತು ಬಿದ್ದಿರುವ ಹಾವು ಹಾಗೂ ಹಾವು ಕಡಿತಕ್ಕೊಳಗಾಗಿ ಮೃತಪಟ್ಟ ಯುವಕನನ್ನು ಕಾಣಬಹುದು. ಕೆಲದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ದೃಶ್ಯಾವಳಿಯನ್ನು ಕಂಡು ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: