San Francisco : ಟ್ವಿಟರ್ ತೆರೆದಾಕ್ಷಣ ಆಕಾಶನೀಲಿಯ ಪುಟ್ಟ ಪಕ್ಷಿ ಎದುರುಗೊಳ್ಳುತ್ತಿತ್ತು. ಆದರೆ ಎಲಾನ್ ಮಸ್ಕ್ (Elon Musk) ಒಡೆತನದಲ್ಲೀಗ ಕಪ್ಪು ಹಿನ್ನೆಲೆಯ ಬಿಳಿಗೆಂಪಿನ X ಲಾಂಛನ ಸ್ವಾಗತಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಶನಿವಾರ ರಾತ್ರಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಮುಖ್ಯ ಕಚೇರಿಯ ಮೇಲೆ ದೈತ್ಯಾಕಾರದ ಈ ಹೊಸ ಲಾಂಛನವು ಎಲ್‌ಇಡಿ ಲೈಟಿನಿಂದ ಝಗಮಗಿಸಲಾರಂಭಿಸಿದೆ. ಮಸ್ಕ್ ಈ ವಿಡಿಯೋ ಅನ್ನು ಟ್ವಿಟ್ ಮಾಡಿದ್ದಾರೆ. ಈ ವಿಡಿಯೋದಡಿ ನೆಟ್ಟಿಗರು ಪ್ರತಿಕ್ರಿಯಿಸುತ್ತ, ‘ಭವಿಷ್ಯ ಉಜ್ವಲವಾಗಿದೆ!’ ಎಂದಿದ್ದಾರೆ.
Our HQ in San Francisco tonight pic.twitter.com/VQO2NoX9Tz
ಇದನ್ನೂ ಓದಿ— Elon Musk (@elonmusk) July 29, 2023
ಇಂದು ಮಧ್ಯಾಹ್ನ 2.21 ನಿಮಿಷಕ್ಕೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 4.6 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 80,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 10,000 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಕೂಲ್, ಗಾರ್ಜಿಯಸ್, ಬ್ರೈಟ್ ಎಂದು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?
ಆದರೆ, ಯಾವುದೇ ಕಂಪೆನಿಯು ಕಟ್ಟಡದ ಮೇಲೆ ಬೃಹತ್ಗಾತ್ರದ ಲಾಂಛನವನ್ನು ಸ್ಥಾಪಿಸುವ ಮುನ್ನ ಕಟ್ಟಡದ ಪಾರಂಪರಿಕತೆಗೆ ಧಕ್ಕೆ ಬರದಂತೆ ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳಬೇಕಾಗುತ್ತದೆ. ಕಂಪೆನಿಯ ಅಕ್ಷರ ಅಥವಾ ಲಾಂಛನವು ಬದಲಾವಣೆಯಾದಾಗ ಬೃಹತ್ ಗಾತ್ರದ ಲಾಂಛನವನ್ನು ಸ್ಥಾಪಿಸುವಾಗಲೂ ಇದೇ ನಿಯಮವನ್ನು ಅನುಸರಿಸಬೇಕಾಗುತ್ತದೆ. ಆದರೆ ಪ್ರಸ್ತುತ ಲಾಂಛನ X ಸ್ಥಾಪನೆಯು ಅನುಮತಿ ಇಲ್ಲದೆಯೇ ಆಗಿದೆ. ಈ ಹಿನ್ನೆಲೆಯಲ್ಲಿ ನಗರಾಡಳಿತವು ಈ ಕುರಿತು ತನಿಖೆ ಶುರು ಮಾಡಿತ್ತು.
ಇದನ್ನೂ ಓದಿ : Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್ನಿಂದ ಪ್ರಯಾಣಿಕರೊಬ್ಬರಿಗೆ ಉಚಿತ ಕೊಡುಗೆ
ಲಾಂಛನವನ್ನು ಬದಲಾಯಿಸುವ ವಿಷಯವನ್ನು ಮಸ್ಕ್ ಕಳೆದವಾರ ಘೋಷಿಸಿದಾಗ ಪೊಲೀಸರು ಸೋಮವಾರದಂದು ಕಟ್ಟಡದ ಮೇಲಿದ್ದ ನೀಲಿಹಕ್ಕಿಯ ಹಳೆಯ ಲಾಂಛನವನ್ನು ತೆಗೆಯದಂತೆ ತಡೆಹಿಡಿದಿದ್ದರು. ಆದಾಗ್ಯೂ ಶುಕ್ರವಾರ ಎಲ್‌ಇಡಿ ಲೈಟ್ವುಳ್ಳ ಹೊಸ ಲಾಂಛನ X ಕಟ್ಟಡದ ಮೇಲೆ ಸ್ಥಾಪನೆಗೊಂಡಿತ್ತು. ಇದು ಎಷ್ಟೊಂದು ಭದ್ರವಾಗಿ ಸ್ಥಾಪಿತಗೊಂಡಿದೆ ಎನ್ನುವುದು ತಿಳಿದು ಬಂದಿಲ್ಲ, ಅಕಸ್ಮಾತ್ ಅದು ಬಿದ್ದರೆ ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:08 pm, Sat, 29 July 23