Trending : ರಕ್ತದಾನಂದಂತೆ ಅಂಗದಾನವೂ ಶ್ರೇಷ್ಠ. ಏಕೆಂದರೆ ಇದು ಇನ್ನೊಬ್ಬರ ಜೀವವನ್ನು ಉಳಿಸುತ್ತದೆ. ಅಪರಿಚಿತರಿಗೆ ಅಂಗದಾನ ಮಾಡುವುದು ಒಂದು ರೀತಿಯಾದರೆ ನಿಮ್ಮೊಂದಿಗಿರುವವರಿಗೆ ಅಂಗದಾನ ಮಾಡುವುದು ಇನ್ನೊಂದು ರೀತಿಯದು. ಈಗಿಲ್ಲಿ ವೈರಲ್ ಆಗಿರುವ ಈ ಟ್ವಿಟರ್ ಪೋಸ್ಟ್ ನೋಡಿ. ಸಾಕಷ್ಟು ಸಲ ಡಯಾಲಿಸಿಸ್ಗೆ ಒಳಗಾದ ನಂತರ ತನ್ನ ಗಂಡನ ಜೀವ ಉಳಿಸಲು ಹೆಂಡತಿಯೇ ತನ್ನ ಕಿಡ್ನಿ ದಾನ ಮಾಡಿದ ಕಥೆಯನ್ನು ಇದು ಹೇಳುತ್ತದೆ. ‘ನನ್ನ ತಂದೆಯನ್ನು ಉಳಿಸಲು ನನ್ನ ತಾಯಿ ದೊಡ್ಡ ಸಹಾಯ ಮಾಡಿದರು. ಇವರಿಬ್ಬರ ಮಧ್ಯೆ ಇರುವ ಪ್ರೀತಿ ಮತ್ತು ಅನುಬಂಧ ಬಹಳ ದೊಡ್ಡದು’ ಎಂದು ಅವರ ಮಗ ಟ್ವಿಟರ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾನೆ. ನೆಟ್ಟಿಗರು ಈ ಹೃದಯಸ್ಪರ್ಶಿಯಾದ ಕಥೆಯನ್ನು ಓದಿ ಟ್ವೀಟಿಸುತ್ತಿದ್ದಾರೆ.
Dad had to undergo 98 dialysis sessions and mom waited for 5-6 hours with him 3 days a week in here. Then she donated her kidney to save him and now they are both out of this misery. I dont know of a better love story. pic.twitter.com/LyIEEqVQxC
ಇದನ್ನೂ ಓದಿ— Leo (@4eo) October 19, 2022
ನನ್ನ ಅಪ್ಪ ಡಯಾಲಿಸಿಸ್ಗೆ ಒಳಗಾಗುವಾಗೆಲ್ಲ ನನ್ನ ಅಮ್ಮ ಅವರಿಗಾಗಿ ಸುಮಾರು 5 ತಾಸಿನತನಕ ಕಾಯ್ದುಕೊಂಡೇ ಇರುತ್ತಿದ್ದರು. ವಾರದಲ್ಲಿ 3 ದಿನ ಅವರಿಗೆ ಡಯಾಲಿಸಿಸ್ ಮಾಡುತ್ತಿದ್ದರು. ಈತನಕ ನನ್ನ ಅಪ್ಪ 98 ಸಲ ಡಯಾಲಿಸಿಸ್ ಸೆಷನ್ ಮಾಡಿಸಿಕೊಂಡಿದ್ದಾರೆ. ಕೊನೆಗೆ ಅವರನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿದ ಅಮ್ಮ ತನ್ನ ಒಂದು ಕಿಡ್ನಿಯನ್ನು ಅಪ್ಪನಿಗೆ ದಾನ ಮಾಡಿದರು. ಈಗ ಇಬ್ಬರೂ ಆರಾಮಾಗಿ ಸಂತೋಷದಿಂದ ಇದ್ದಾರೆ. ನನಗಿದೊಂದು ಸುಂದರವಾದ ಪ್ರೇಮಕಥೆಯಂತೆ ಕಾಣುತ್ತಿದೆ ಎಂದಿದ್ದಾರೆ ಅವರ ಮಗ ಲಿಯೋ.
ಈತನ ಈ ಪೋಸ್ಟ್ 1,200 ಜನರ ಮೆಚ್ಚುಗೆಗೆ ಒಳಗಾಗಿದೆ. 95 ಜನರು ರೀಟ್ವೀಟ್ ಮಾಡಿದ್ದಾರೆ. ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ‘ನಿಜಕ್ಕೂ ಇದನ್ನು ಓದಿ ನನಗೆ ಬಹಳ ಖುಷಿಯಾಗುತ್ತಿದೆ. ನನ್ನ ತಂದೆ ನನ್ನ ತಾಯಿಗೆ ಕಿಡ್ನಿ ದಾನ ಮಾಡಿದ್ದಾರೆ’ ಎಂದು ತಮ್ಮ ಅಪ್ಪ-ಅಮ್ಮನ ಕಥೆಯನ್ನು ಹೇಳಿಕೊಂಡಿದ್ದಾರೆ ಒಬ್ಬರು. ‘ನಿಮ್ಮ ಅಪ್ಪ ಅಮ್ಮನಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ ಇನ್ನೂ ಒಬ್ಬರು. ‘ಎಂಥ ಅದ್ಭುತ! ನಿಮ್ಮ ಅಪ್ಪಅಮ್ಮ ಸುಖದಿಂದ ಬಾಳಲಿ. ಅವರ ಬಗ್ಗೆ ನೀವು ಇಲ್ಲಿ ಹಂಚಿಕೊಂಡಿರುವುದು ಒಳ್ಳೆಯದಾಯಿತು’ ಎಂದಿದ್ದಾರೆ ಮಗದೊಬ್ಬರು. ‘ನಿಮ್ಮ ತಂದೆ-ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದು ಅತ್ಯಂತ ಸಂತಸವಾಯಿತು’ ಎಂದಿದ್ದಾರೆ ಮತ್ತೊಬ್ಬರು.
ಇನ್ನು ಮುಗಿದೇ ಹೋಯಿತು ಎನ್ನುವ ಸಂದರ್ಭಕ್ಕೆ ತಿರುವು ಸಿಗುವುದು ನಮ್ಮ ಗಟ್ಟಿ ಮನಸ್ಸು, ಪ್ರೀತಿ ಮತ್ತು ಪ್ರಯತ್ನದಿಂದ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:26 am, Fri, 21 October 22