ಮಕ್ಕಳ ಜೀವನವೇ ಬಲು ಸುಂದರ. ಈ ಸುಂದರ ಬಾಲ್ಯ ಮತ್ತೆ ಮರಳಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ಮಕ್ಕಳಿದ್ದಾಗ್ಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಂಜಾಯ್ ಮಾಡ್ಬೇಕು. ಆದ್ರೆ ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್ ಅಲ್ಲಿಯೇ ಸಮಯ ಕಳೆಯುತ್ತಿದ್ದಾರೆ ಹೊರತು ಮನೆಯಿಂದ ಹೊರ ಬಂದ ಜಾರು ಬಂಡೆ, ಜೋಕಾಲಿ, ಚಿನ್ನಿದಾಂಡು ಇಂತಹ ಆಟಗಳನ್ನು ಆಡುವುದೇ ಅಪರೂಪವಾಗಿಬಿಟ್ಟಿದೆ. ಆದರೆ ಇಲ್ಲಿಬ್ಬರು ಪುಟಾಣಿ ಮಕ್ಕಳು ನಮ್ಮಲ್ಲಿ ಆಟವಾಡಲು ಆಟಿಕೆ ಇಲ್ಲದಿದ್ರೆ ಏನಂತೆ ಎನ್ನುತ್ತಾ, ಜುಗಾಡ್ ಐಡಿಯಾವನ್ನು ಉಪಯೋಗಿಸಿಕೊಂಡು ರಸ್ತೆ ಬದಿಯಲ್ಲಿ ಮುರಿದ ಕಬ್ಬಿಣದ ಗ್ರಿಲ್ ಒಂದರಲ್ಲಿ ತೂಗುಯ್ಯಾಲೆ ಆಟವನ್ನು ಆಡುತ್ತಾ ಎಂಜಾಯ್ ಸಖತ್ ಎಂಜಾಯ್ ಮಾಡಿದ್ದಾರೆ. ಸದ್ಯ ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಜುಗಾಡ್ ಐಡಿಯಾಗಳ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ಕ್ರಿಯೆಟಿವ್ ಐಡಿಯಾಗಳ ವಿಡಿಯೋಗಳನ್ನು ಕಂಡು ಇಂಡಿಯಾ ಇಸ್ ನಾಟ್ ಫಾರ್ ಬಿಗಿನರ್ಸ್ ಎಂದು ನೆಟ್ಟಿಗರು ಆಗಾಗ್ಗೆ ಹೇಳುತ್ತಿರುತ್ತಾರೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಕ್ಕಳಿಬ್ಬರು ರಸ್ತೆ ಬದಿಯಲ್ಲಿನ ಕಬ್ಬಿಣದ ಗ್ರಿಲ್ ಒಂದರಲ್ಲಿ ತೂಗುಯ್ಯಾಲೆ ಆಟವನ್ನು ಆಡುತ್ತಾ, ತಮ್ಮ ಬಾಲ್ಯವನ್ನು ಎಂಜಾಯ್ ಮಾಡಿದ್ದಾರೆ. @ghantaa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇಬ್ಬರು ಪುಟಾಣಿ ಮಕ್ಕಳು ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ, ಮುರಿದು ಹೋದ ಗ್ರಿಲ್ ಒಂದರಲ್ಲಿ ತೂಗುಯ್ಯಾಲೆ ಆಟವನ್ನು ಆಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕೆಲಸದ ನಡುವೆ ಮಗುವಿನ ಆರೈಕೆಗೆ ಸಮಯವಿಲ್ಲವೆಂದು 3 ತಿಂಗಳ ಮಗುವನ್ನು ದತ್ತು ನೀಡಿದ ದಂಪತಿ
ಮಾರ್ಚ್ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ಇರುವುದರಲ್ಲಿಯೇ ತಮ್ಮ ಖುಷಿಯನ್ನು ಕಂಡುಕೊಳ್ಳುತ್ತಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಇಂಡಿಯಾ ಇಸ್ ನಾಟ್ ಫಾರ್ ಬಿಗಿನರ್ಸ್ ಎಂಬ ಕಾಮೆಂಟ್ಸ್ ಗಳನ್ನು ಬರೆದುಕೊಂಡಿದ್ದಾರೆ.