ಈ ಬಾಲಕನಿಗಿದೆ ಹೇರ್ ಕಟ್ ಫೋಬಿಯಾ, ಕೂದಲು ಕತ್ತರಿಸದಿದ್ದರೆ ಶಾಲೆಯಿಂದ ಹೊರಕ್ಕೆ
ಸಾಮಾನ್ಯವಾಗಿ ಸಣ್ಣ ಮಕ್ಕಳು ಕೂದಲು ಕತ್ತರಿಸಿಕೊಳ್ಳಲು ಭಯಪಡುತ್ತಾರೆ, ಆದರೆ ಈ ಬಾಲಕನಿಗೆ 12 ವರ್ಷವಾದರೂ ಇನ್ನೂ ಭಯ ಹಾಗೆಯೇ ಮುಂದುವರೆದಿದೆ. ಈ ಬಾಲಕನಿಗಿದೆ ಹೇರ್ ಕಟ್ ಫೋಬಿಯಾ(Hair Cut Phobia), ಕೂದಲನ್ನು ಕತ್ತರಿಸಲು ಕ್ಷೌರಿಕನ ಬಳಿ ಹೋದ ತಕ್ಷಣ ಭಯವಾಗಿ ಮನೆಗೆ ಓಡಿ ಬರುತ್ತಾನೆ. ಆ ಬಾಲಕನಿಗೆ ಈಗ 12 ವರ್ಷ ವಯಸ್ಸು ಈಗಾಗಲೇ ಸೊಂಟದವರೆಗೆ ಕೂದಲು ಬಂದಿದೆ. ಫಾರೂಕ್ ಜೇಮ್ಸ್ ಎಂಬಾತನಿಗೆ ಹೇರ್ಕಟ್ ಫೋಬಿಯಾ ಇದ್ದು ಜತೆಗೆ ನಿದ್ರೆಯ ಅಸ್ವಸ್ಥತೆ ನಾರ್ಕೊಲೆಪ್ಸಿ ಕೂಡ ಇದೆ.

ಯುಕೆಯ ಈ ಬಾಲಕನಿಗಿದೆ ಹೇರ್ ಕಟ್ ಫೋಬಿಯಾ(Hair Cut Phobia), ಕೂದಲನ್ನು ಕತ್ತರಿಸಲು ಕ್ಷೌರಿಕನ ಬಳಿ ಹೋದ ತಕ್ಷಣ ಭಯವಾಗಿ ಮನೆಗೆ ಓಡಿ ಬರುತ್ತಾನೆ. ಆ ಬಾಲಕನಿಗೆ ಈಗ 12 ವರ್ಷ ವಯಸ್ಸು ಈಗಾಗಲೇ ಸೊಂಟದವರೆಗೆ ಕೂದಲು ಬಂದಿದೆ. ಫಾರೂಕ್ ಜೇಮ್ಸ್ ಎಂಬಾತನಿಗೆ ಹೇರ್ಕಟ್ ಫೋಬಿಯಾ ಇದ್ದು ಜತೆಗೆ ನಿದ್ರೆಯ ಅಸ್ವಸ್ಥತೆ ನಾರ್ಕೊಲೆಪ್ಸಿ ಕೂಡ ಇದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಫಾರೂಕ್ ಹೊಸ ಶಾಲೆಗೆ ಸೇರ್ಪಡೆಯಾಗಿದ್ದ, ಅಲ್ಲಿ ಕಟ್ಟುನಿಟ್ಟಾದ ನಿಯಮಗಳಿತ್ತು, ಕೆಲವು ದಿನಗಳ ವಿನಾಯಿತು ನೀಡಿದ್ದರು ಆದರೆ ಈಗಲೂ ಕೂದಲು ಕತ್ತರಿಸಿದ ಕಾರಣ ಶಾಲೆಯಿಂದ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜೇಮ್ಸ್ ಅಚ್ಚುಕಟ್ಟಾಗಿ ಜಡೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾನೆ ಆದರೆ ಶಾಲೆಯು ಅದನ್ನು ನಿರಾಕರಿಸಿದೆ. ವೈದ್ಯರು ಆತನಿಗಿರುವ ಸಮಸ್ಯೆ ಬಗ್ಗೆ ಶಾಲೆಗೆ ಮಾಹಿತಿ ನೀಡಿದ್ದರೂ ಅವರು ಅದನ್ನು ನಂಬಲು ಸಿದ್ಧವಿಲ್ಲ.
ತಲೆಕೂದಲು ಕತ್ತರಿಸದಿದ್ದರೆ ಶಾಲೆಯಿಂದ ಹೊರಹಾಕುವುದಾಗಿ ಶಾಲೆಯ ಆಡಳಿತ ಮಂಡಳಿ ಹೇಳಿತ್ತು. ಜೇಮ್ಸ್ ತಾಯಿ ಆತನ ಮನವೊಲಿಸಲು ಆರು ತಿಂಗಳ ಕಾಲಾವಕಾಶ ಕೇಳಿದ್ದರು. ಇದೀಗ ಕಾಲಾವಕಾಶ ಮುಗಿದಿದ್ದರು ಆತನ ಮನವೊಲಿಸಲು ಸಾಧ್ಯವಾಗಿಲ್ಲ.
ಮತ್ತಷ್ಟು ಓದಿ: Viral Video: ಓಂಕಾರದ ಮಹಿಮೆ; ತಾಯಿ ಓಂಕಾರವನ್ನು ಪಠಿಸುತ್ತಿದ್ದಂತೆ ಅಳುವುದನ್ನು ನಿಲ್ಲಿಸಿದ ಮಗು
ಫೋಬಿಯಾವನ್ನು ಹೋಗಲಾಡಿಸಲು ಮಾನಸಿಕ ಚಿಕಿತ್ಸೆ ಪಡೆಯಲಾಗುತ್ತಿದೆ, ಆತ ಮಲಗಿರುವಾಗ ಕೂದಲು ಕತ್ತರಿಸಬೇಕೆಂದು ತಾಯಿ ಅಂದುಕೊಂಡರೂ ಕೂಡ ಆತನ ಮೇಲೆ ಯಾವ ರೀತಿ ಆಘಾತವಾಗಬಹುದೆಂಬ ಅರಿವಿಲ್ಲದ ಕಾರಣ ಹಿಂಜರಿದಿದ್ದಾರೆ. ತನ್ನ ಕೂದಲಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಫಾರೂಕ್ ಫೇಮಸ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ 2.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹಿಂದಿದ್ದಾನೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Thu, 23 May 24