Viral News: ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಟೂರ್​ ಪ್ಯಾಕೇಜ್​ ನೀಡಿದ ಕಂಪನಿ

| Updated By: Pavitra Bhat Jigalemane

Updated on: Feb 09, 2022 | 9:51 AM

ನೇಮಕಾತಿ ಕಂಪನಿಯೊಂದು ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಪ್ಯಾಕೆಜ್​ ನೀಡಿ 4 ದಿನ ಕೆಲಸಕ್ಕೆ ರಜೆ ನೀಡುತ್ತಿದೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ವೈರಲ್​ ಆಗಿದೆ.

Viral News: ಉದ್ಯೋಗಿಗಳಿಗೆ ಧನ್ಯವಾದ ಹೇಳಲು 1 ಕೋಟಿ ರೂ.ಗಳ ಟೂರ್​ ಪ್ಯಾಕೇಜ್​ ನೀಡಿದ ಕಂಪನಿ
ಸಾಂಕೇತಿಕ ಚಿತ್ರ
Follow us on

ಕೊರೊನಾ (Corona) ಸಂದರ್ಭದಲ್ಲಿ ಲಾಕ್ಡೌನ್ (Lock Dwon)​ ವೇಳೆ ಜಗತ್ತಿನಾದ್ಯಂತ  ಅನೇಕ ಕಂಪನಿಗಳು ವರ್ಕ್​​ ಫ್ರಾಮ್​ ಹೋಮ್​ ನೀಡಿದ್ದವು. ಉದ್ಯೋಗಿಗಳ ಹಿತ ದೃಷ್ಟಿಯಿಂದ ಮನೆಯಿಂದಲೇ ಬರಪೂರ ಕೆಲಸ ಮಾಡಿಸಿಕೊಂಡಿವೆ. ಇದೀಗ ಯುಕೆ ಮೂಲದ ಕಂಪನಿಯೊಂದು ಉದ್ಯೋಗಿಗಳು ಕೊರೊನಾ ಸಾಂಕ್ರಾಮಿಕ ವೇಳೆ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಕಂಪನಿಯ ಉದ್ಯೋಗಿಗಳಿಗೆ 4 ದಿನಗಳ ರಜಾ ನೀಡುತ್ತಿದ್ದು ಟ್ರಿಪ್​ ಪ್ಲಾನ್ (Trip Plan)​ ಕೂಡ ಮಾಡಿದೆ. ಇದಕ್ಕೆ ಕಂಪನಿ ಬರೋಬ್ಬರಿ 1 ಕೋಟಿ ರೂ ಗೂ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಒಟ್ಟು 55 ಉದ್ಯೋಗಿಗಳಿಗೆ ರಜೆ ನೀಡಿ ಕೆಲಸ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಿದೆ. ಸದ್ಯ ಈ ವಿಚಾರ ಜಗತ್ತಿನಾದ್ಯಂತ ಹರಡಿದ್ದು ವೈರಲ್​ ಆಗಿದೆ.


ವೇಲ್ಸ್​ನ ರಾಜಧಾನಿ ಕಾರ್ಡಿಫ್​ನಲ್ಲಿರುವ ( ಯುಕೆ ಮೂಲದ ಕಂಪನಿ ಈ ಆಫರ್​ ನೀಡುತ್ತಿದೆ.  ಯೋಲ್ಕ್​ ಪೋಕ್ ( Yolk Folk) ಎನ್ನುವ  ನೇಮಕಾತಿ ಕಂಪನಿಯು ತನ್ನ ಉದ್ಯೋಗಿಗಳಿಗಾಗಿ ಈ ಯೋಜನೆ ರೂಪಿಸಿದ್ದು ಎಲ್ಲಾ  ಉದ್ಯೋಗಿಗಳನ್ನು ಅತಿದೊಡ್ಡ ಜನ ಸಮೂಹ ಹೊಂದಿರುವ ದ್ವೀಪವಾದ  ಟೆನೆರೈಫ್​ಗೆ (Tenerife) ಕರೆದೊಯ್ಯುತ್ತಿದೆ. ಈ ಕುರಿತು ಕಂಪನಿಯ ಕಮರ್ಷಿಯಲ್​ ಆಫಿಸರ್​ ಮಾತನಾಡಿ, 2020 ಎಲ್ಲರಿಗೂ ಕಷ್ಟದ ದಿನಗಳಾಗಿತ್ತು. ಈ ಸಮಯದಲ್ಲಿಯೂ ನಮ್ಮ ಉದ್ಯೋಗಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಂಸ್ಥೆಯ ಏಳಿಗೆಗೆ ಕಾರಣವಾಗಿದ್ದಾರೆ. ಇದೀಗ ಅವರಿಗೆ ಧನ್ಯವಾದ ಹೇಳುವ ಸಮಯ ಬಂದಿದೆ. ಹೀಗಾಗಿ ಈ ಆಫರ್​ ನೀಡಿದ್ದೇವೆ ಎಂದಿದ್ದಾರೆ.

ಎಪ್ರಿಲ್​ 1 ರಂದು ನಾಲ್ಕು ದಿನಗಳ ಕಾಲ ಉದ್ಯೋಗಿಗಳನ್ನು ಎಂಜಾಯ್​ ಮಾಡಲು ಟೆನೆರೈಫ್​ಗೆ ಕರೆದೊಯ್ಯಲಾಗುತ್ತಿದೆ ಎಂದು ಸುದ್ದಿ ವರದಿ ಮಾಡಿದೆ. ಇನ್ನು ಕಂಪನಿಯ ಈ ಆಫರ್​ ನೋಡಿ ಜಗತ್ತಿನಾದ್ಯಂತ ಜನರು ಬೆರಗುಗೊಂಡಿದ್ದಾರೆ. ಕೊರೊನಾ ಬಂದು ಕಂಪನಿಗಳು ನಷ್ಟದಲ್ಲಿವೆ ಎಂದು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ, ಹೊಸ ಉದ್ಯೋಗ ದೊರಕದ ಸಂದರ್ಭದಲ್ಲಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಎಂಜಾಯ್​ ಮಾಡಲು ಟ್ರಿಪ್​ ಪ್ಲಾನ್​ ಮಾಡಿ ಅದಕ್ಕೆ 1 ಕೋಟಿ ರೂ ಗೂ ಹೆಚ್ಚು ವ್ಯಯಿಸುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್​ ಆಗದೆ.

ಇದನ್ನೂ ಓದಿ:

Shocking News: ಸೂಪರ್ ಹೀರೋ ಕಾಪಾಡುತ್ತಾನೆಂಬ ನಂಬಿಕೆಯಿಂದ ಟೆರೇಸ್​ನಿಂದ ಕೆಳಗೆ ಜಿಗಿದು ಸಾವನ್ನಪ್ಪಿದ ಬಾಲಕ

Published On - 9:49 am, Wed, 9 February 22