ಆಸ್ಪತ್ರೆಗೆ ತೆರಳಿ ಶೆಲ್​ ದಾಳಿಯಲ್ಲಿ ಗಾಯಗೊಂಡ ಯುವತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ

| Updated By: Pavitra Bhat Jigalemane

Updated on: Mar 18, 2022 | 5:05 PM

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಶೆಲ್​ ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಸ್ಪತ್ರೆಗೆ ತೆರಳಿ ಶೆಲ್​ ದಾಳಿಯಲ್ಲಿ ಗಾಯಗೊಂಡ ಯುವತಿಯನ್ನು ಭೇಟಿಯಾಗಿ ಧೈರ್ಯ ತುಂಬಿದ ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ
ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ
Follow us on

ಉಕ್ರೇನ್​ ರಷ್ಯಾ ನಡುವಿನ ಯುದ್ಧ (Ukraine Russia War) ಬರೋಬ್ಬರಿ 23 ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ಹಲವು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ. ಪಟ್ಟು ಬಿಡದ ರಷ್ಯಾ ಸೇನೆ ಉಕ್ರೇನ್​ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುತ್ತಲೇ ಇದೆ. ನೂರಾರು ನಾಗರಿಕರು ಬಾಂಬ್​, ಕ್ಷಿಪಣಿಗಳ ದಾಳಿಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ನಡುವೆಯೂ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಧೈರ್ಯವನ್ನು ಇಡೀ ಜಗತ್ತೇ ಮೆಚ್ಚಿಕೊಳ್ಳುತ್ತಿದೆ. ಇದೀಗ ಉಕ್ರೇನ್ ಅಧ್ಯಕ್ಷ ಶೆಲ್​ ದಾಳಿಯಲ್ಲಿ ಗಾಯಗೊಂಡವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾಜಧಾನಿ ಕೀವ್​ನ ವೊರ್ಜೆಲ್ ಪಟ್ಟಣದಿಂದ ಹೊರಡುವಾಗ ನಡೆದ ಶೆಲ್​ ದಾಳಿಯಲ್ಲಿ 16 ವರ್ಷದ ಬಾಲಕಿ ಗಾಯಗೊಂಡಿದ್ದಳು.  ಆಕೆಯನ್ನು ಕಟ್ಯಾ ವ್ಲಾಸೆಂಕೊ ಎಂದು ಗುರುತಿಸಲಾಗಿದೆ. ಗಾಯಗೊಂಡ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ಭೇಟಿಯಾದ ಅಧ್ಯಕ್ಷ ಝಲೆನ್ಸ್ಕಿ ಅವರು ಮಾತನಾಡಿಸಿದ್ದಾರೆ. ಆಕೆಯನ್ನು ಟಿಕ್​ಟಾಕ್​ ಸ್ಟಾರ್​ ಎಂದು ಗುರುತಿಸಿ ಹುರಿದುಂಬಿಸಿದ್ದಾರೆ.  ಟಿಕ್‌ಟಾಕ್‌ನಲ್ಲಿ ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ. ಆದ್ದರಿಂದಲೇ ನಾವು ಟಿಕ್​ ಟಾಕ್​ನ್ನು ಬಳಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ಆಕೆಗೆ ಹುರಿದುಂಬಿಸಿದ್ದಾರೆ. ಇದಕ್ಕೆ ಆಕೆ ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ನಗುಮೊಗದಿಂದ ಉತ್ತರಿಸಿದ್ದಾಳೆ.  ಆಕೆಗೆ ಝೆಲೆನ್ಸ್ಕಿ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳಿರುವ ಗುಚ್ಚವನ್ನು ನೀಡಿ, ಹಾಸಿಗೆಯಲ್ಲಿಯೇ ಇರುವುದು ಅಷ್ಟು ಸುಲಭವಲ್ಲ. ಬೇಗ ಚೇತರಿಸಿಕೊಳ್ಳಿ ಎಂದು ಆಶಿಸಿದ್ದಾರೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ​ ವೈರಲ್​ ಆಗಿದೆ.

ವರದಿಯ ಪ್ರಕಾರ, ರಷ್ಯಾನಡೆಸುತ್ತಿರುವ ನಿರಂತರ ಶೆಲ್​ ದಾಳಿಯಿಂದ ಉಕ್ರೇನಿಗರು ಊರು ತೊರೆಯುತ್ತದ್ದಾರೆ. ಕಟ್ಯಾ ಕುಟುಂಬವೂ ಸ್ಥಳಾಂತರವಾಗಲು ಹೊರಟಿತ್ತು. ಈ ವೇಳೆ ತನ್ನ ಕಿರಿಯ 8 ವರ್ಷದ ಸಹೋದರ ಇಹೋರ್ ಅನ್ನು ಆಲಂಗಿಸಿಕೊಂಡಿದ್ದಳು. ಇದರಿಂದ ಆತ ಸುರಕ್ಷಿತವಾಗಿ ಪಾರಾಗಿದ್ದಾನೆ. ಆದರೆ ಕಟ್ಯಾಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಶಕ್ಕಾಗಿ ಯುದ್ದದಲ್ಲಿ ಆಕೆ ಪಾಲ್ಗೊಂಡ ಬಗೆಗೆ ಯಾವುದೇ ವರದಿಗಳಿಲ್ಲ. ಅದರೆ ಎನ್​ಜಿಒ ಒಂದಕ್ಕೆ ಆಕೆ ಕೆಲಸಮಾಡಿದ್ದಳು ಎಂದು ಹೇಳಲಾಗಿದೆ.

ಇದನ್ನೂ ಓದಿ:

Oksana Shvets: ಕೀವ್​ನ ವಸತಿ ಕಟ್ಟಡದ ಮೇಲೆ ರಷ್ಯಾ ದಾಳಿ; ಉಕ್ರೇನ್​ನ ಖ್ಯಾತ ನಟಿ ದುರ್ಮರಣ

Published On - 5:03 pm, Fri, 18 March 22