Viral Video: ಕ್ರಿಕೆಟ್ ಪಂದ್ಯಾವಳಿ ವೇಳೆ ಅಂಪೈರ್ ಪ್ರತಿಕ್ರಿಯೆ ವೈರಲ್; ವೈಡ್ ಬಾಲ್ ತೋರಿಸಿದ ರೀತಿ ಕಂಡು ಬೆರಗಾದ ನೆಟ್ಟಿಗರು

ಯೋಗ ಮತ್ತು ಕ್ರಿಕೆಟ್ ಒಂದಾದಾಗ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿರುವ ಈ ವಿಡಿಯೋ, 360 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಕ್ರಿಕೆಟ್ ಪಂದ್ಯಾವಳಿ ವೇಳೆ ಅಂಪೈರ್ ಪ್ರತಿಕ್ರಿಯೆ ವೈರಲ್; ವೈಡ್ ಬಾಲ್ ತೋರಿಸಿದ ರೀತಿ ಕಂಡು ಬೆರಗಾದ ನೆಟ್ಟಿಗರು
ಅಂಪೈರ್
Edited By:

Updated on: Dec 08, 2021 | 9:27 AM

ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ನಗು ತಡೆಯಲಾರದಷ್ಟು ತಮಾಷೆಯಾಗಿರುತ್ತವೆ. ಅದೇ ಸಮಯದಲ್ಲಿ ಅನೇಕ ವೀಡಿಯೊಗಳು ಭಾವನಾತ್ಮಕವಾಗಿದ್ದು, ಕಣ್ಣಲ್ಲಿ ನೀರು ತರಿಸುತ್ತದೆ. ಇನ್ನು ನೋಡಿ ಬೆಚ್ಚಿ ಬೀಳುವ ಕೆಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಇದೀಗ ತಮಾಷೆಯ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಕ್ರಿಕೆಟ್ ಪಂದ್ಯಾವಳಿಯ ವೇಳೆ ಅಂಪೈರ್ (Umpire) ವೈಲ್ಡ್ ಬಾಲ್ ತೋರಿಸಿದ ರೀತಿ ಸದ್ಯ ನೆಟ್ಟಿಗರನ್ನು ಹಾಸ್ಯಲೋಕಕ್ಕೆ ಕರೆದೊಯ್ದಿದೆ.

ಮಹಾರಾಷ್ಟ್ರದ ಸ್ಥಳೀಯ ಕ್ರಿಕೆಟ್ ಟೂರ್ನಿಮೆಂಟ್ ಪುರಂದರ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಅಂಪೈರ್ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಈ ವಿಡಿಯೋವನ್ನು ರಿಪೋಸ್ಟ್ ಮಾಡಿ ಖುಷಿಪಟ್ಟಿದ್ದಾರೆ. 19 ಸೆಕೆಂಡುಗಳ ಈ ವಿಡಿಯೋವನ್ನು ಐಎಎಸ್ ಅಧಿಕಾರಿಯೊಬ್ಬರು ಸೋಮವಾರ (ಡಿಸೆಂಬರ್ 6) ಟ್ವಿಟರ್‌ನಲ್ಲಿ ಮರು ಟ್ವೀಟ್ ಮಾಡಿದ್ದಾರೆ. ವೈಡ್ ಬಾಲ್ ಅನ್ನು ಸೂಚಿಸಲು ಅಂಪೈರ್ ತಲೆಕೆಳಗಾಗಿದ್ದು, ಬಳಿಕ ಕಾಲನ್ನು ಅಗಲವಾಗಿಸಿ ವೈಡ್ ಎಂದಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ಯೋಗ ಮತ್ತು ಕ್ರಿಕೆಟ್ ಒಂದಾದಾಗ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿರುವ ಈ ವಿಡಿಯೋ, 360 ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ತಮಾಷೆಯ ವಿಡಿಯೋಗೆ ಕಮೆಂಟ್​ಗಳ ಮಹಾಪುರವೇ ಹರಿದು ಬಂದಿದೆ. ರಾಮದೇವ್ ಬಾಬಾ ಈ ತಂಡದ ಮಾಲೀಕರು ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ವೈಡ್ ಆ್ಯಂಗಲ್ ಅಗಲವಾಗಿತ್ತು ಹೀಗಾಗಿ ಕೈಗಳಿಂದ ತೋರಿಸಲಾಗಲಿಲ್ಲ ಎಂದಿದ್ದಾರೆ. ಇನ್ನು ಯೋಗ ಶಿಕ್ಷಕರು ಅಂಪೈರ್ ಆಗಿರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನು ಇತ್ತೀಚೆಗೆ ನಡೆದ ಅಂದರೆ ಡಿಸೆಂಬರ್ 3 ರಂದು ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ನಡೆದ ಎರಡನೇ ಟೆಸ್ಟ್‌ನಲ್ಲಿ  ಅಂಪೈರ್ ವೀರೇಂದ್ರ ಶರ್ಮಾ ಅವರ ವಿವಾದಾತ್ಮಕ ನಿರ್ಧಾರದ ನಂತರ ಕೊಹ್ಲಿ ಡಕ್‌ಗೆ ಔಟಾದರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗಿತ್ತು. ನೆಟ್ಟಿಗರು ಕೂಡ ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ:
Viral Video: ಕಾಡು ಬೆಕ್ಕನ್ನು ಬೆದರಿಸಿದ ಪುಟ್ಟ ನಾಯಿ ಮರಿ; ವಿಡಿಯೋ ಆಯ್ತು ವೈರಲ್​

Shocking News: ಆತ್ಮಹತ್ಯೆಗಾಗಿ ಯಂತ್ರ ಸಿದ್ದಪಡಿಸಿದ ಸ್ವಿಜರ್ಲ್ಯಾಂಡ್; ನೋವೇ ಆಗದಂತೆ ಒಂದು ನಿಮಿಷದಲ್ಲಿ ಸಾಯಬಹುದು

 

Published On - 9:26 am, Wed, 8 December 21