PaniPuri: ಸಂಜೆಯಾದೊಡನೆ ಸ್ನೇಹಿತರೊಂದಿಗೆ ಫುಡ್ ಸ್ಟ್ರೀಟ್ಗಳಿಗೆ (Food Street) ಹೋಗಿ ಅಲ್ಲಿರುವ ಚಾಟ್ಗಾಡಿಗಳನ್ನು ಮುತ್ತಿಗೆ ಹಾಕಿ ಎರಡು ಮೂರು ಪ್ಲೇಟ್ ಈ ಪೂರಿ ಕುಟುಂಬದವರನ್ನು ಚೆನ್ನಾಗಿ ಬಾರಿಸಿ ಬರುವ ಚಾಟ್ ಪ್ರಿಯರೇ ಸ್ವಲ್ಪ ಇತ್ತ ಗಮನಿಸಿ. ಪಾನೀಪೂರೀ, ಶೇವ್ಪೂರೀ, ಮಸಾಲಾಪೂರೀ, ದಹೀಪೂರೀ, ಆಲೂಪೂರಿ, ಆ ಪೂರೀ ಈ ಪೂರೀಗೆ ತಯಾರಾಗುವ ಪೂರಿ ಮತ್ತತರೇ ಖಾದ್ಯಗಳು ತಯಾರಾಗುವ ಜಾಗವನ್ನು ನೋಡಿದ್ದೀರಾ? ಇಲ್ಲವಾದಲ್ಲಿ ಒಮ್ಮೆ ಈ ಕೆಳಗಿನ ವಿಡಿಯೋ ನೋಡಿ. ನೋಡಿದ ಮೇಲೆ ನಿಮ್ಮ ನಿಮ್ಮ ನಿರ್ಧಾರ ನಿಮಗೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಇದೇನು ಮೊದಲಲ್ಲ, ಹಿಂದೆಯೂ ಇಂಥ ಅನೇಕ ವಿಡಿಯೋಗಳು ವೈರಲ್ ಆಗಿವೆ. ಆದರೂ ಚಾಟ್ಗಾಡಿಗಳನ್ನು ಇರುವೆಗಳಂತೆ ಮುಕುರುವುದನ್ನಂತೂ ನಮ್ಮ ಜನ ಬಿಟ್ಟೇ ಇಲ್ಲ. ಏನೇ ಆಗಲಿ ನಾಲಗೆಯಿಂದ ಮೆದುಳಿಗಂಟಿದ ರುಚಿಯ ನೆನಪನ್ನು ಮಾತ್ರ ತ್ಯಜಿಸಲಾರೆವು ಎಂದು ಪ್ರಮಾಣ ಮಾಡಿದವರಂತೆ ಮತ್ತೆ ಮತ್ತೆ ಪಾನೀಪುರಿಗೆ ಮೊರೆ ಹೋಗುತ್ತಲೇ ಇರುತ್ತಾರೆ.
ಇದನ್ನೂ ಓದಿ : Viral Video: ಟೈಲರ್ ಸ್ವಿಫ್ಟ್ ಸಂಗೀತ ಕಛೇರಿಯಲ್ಲಿ ಪ್ರೇಮ ನಿವೇದನೆ; ನೆಟ್ಟಿಗರ ಹರ್ಷ
ಅದರಲ್ಲೂ ಮಕ್ಕಳಿಗೆ ಮತ್ತು ಯುವಕರಿಗಂತೂ ಈ ಖಾದ್ಯಗಳು ಪಂಚಪ್ರಾಣ. ವಾರಾಂತ್ಯ ಬಂದರೆ ತಿಂಡಿಗೂ ಅದೇ, ಊಟಕ್ಕೂ ಅದೇ. ಆದರೆ ಇಂಥ ಆಹಾರ ಪದ್ಧತಿಯಿಂದ ತಮ್ಮ ಆರೋಗ್ಯ ಏನಾಗುತ್ತಿದೆ ಎಂಬ ಅರಿವೇ ಅವರಿಗಿರದು, ಅಂಥ ವಿಚಿತ್ರ ವ್ಯಾಮೋಹದಲ್ಲಿ ಅವರು ಮುಳುಗಿಬಿಟ್ಟಿರುತ್ತಾರೆ. ತಿಳಿವಳಿಕೆ ಹೇಳಹೊರಟರೆ ರಂಪ!
ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ
ಮೇಲಿನ ವಿಡಿಯೋ ನೋಡಿದ ಮೇಲೆ ಮತ್ತೆ ವಿವರಿಸುವುದು ಏನಿದೆ? ಮೂರು ವರ್ಷದ ಹಿಂದೆ ಅಪ್ಲೋಡ್ ಆದ ವಿಡಿಯೋ ಈಗಲೂ ವೈರಲ್ ಆಗುತ್ತಿದೆ ಎಂದರೆ, ಜನ ನೋಡುತ್ತಲೇ ಇರುತ್ತಾರೆ. ಮತ್ತೆ ಮತ್ತೆ ಇಂಥ ಪಾನೀಪೂರಿಯನ್ನು ತಿನ್ನುತ್ತಲೇ ಇರುತ್ತಾರೆ. ನೀವು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:09 pm, Wed, 19 July 23