ಮೇಕೆಮರಿಗಳ ಹುಟ್ಟುಹಬ್ಬ; ‘ನಮಗೆ ಮಕ್ಕಳಿಲ್ಲ, ಇವರೇ ನಮಗೆ ಎಲ್ಲ’

| Updated By: ಶ್ರೀದೇವಿ ಕಳಸದ

Updated on: Nov 09, 2022 | 4:39 PM

Birthday Of Their Goat Kids : ‘ಕುಬೇರ್, ಲಕ್ಷ್ಮೀ ಎಂದು ನಾಮಕರಣ ಮಾಡಿದ್ದೇವೆ. ಇವರಿಬ್ಬರನ್ನೂ ಆಗಾಗ ರಿಕ್ಷಾದಲ್ಲಿ ವಿಹಾರಕ್ಕಾಗಿ ಕರೆದೊಯ್ಯುತ್ತೇವೆ’ ರಾಜಾ. ಹುಟ್ಟುಹಬ್ಬದಲ್ಲಿ ಏರ್ಪಡಿಸಿದ್ದ ಡಿಜೆ ಪಾರ್ಟಿ ವಿಡಿಯೋ ನೋಡಿ.

ಮೇಕೆಮರಿಗಳ ಹುಟ್ಟುಹಬ್ಬ; ‘ನಮಗೆ ಮಕ್ಕಳಿಲ್ಲ, ಇವರೇ ನಮಗೆ ಎಲ್ಲ’
UP Couple Celebrates Birthday Of Their Goat Kids
Follow us on

Viral : ಉತ್ತರಪ್ರದೇಶದ ಬಾಂದಾದಲ್ಲಿ ದಂಪತಿ ಇತ್ತೀಚೆಗೆ ತಮ್ಮ ಮೇಕೆ ಮರಿಗಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಕಾನ್ಶೀರಾಮ್​ ಕಾಲೋನಿಯಲ್ಲಿ ವಾಸಿಸುತ್ತಿರುವ ಈ ದಂಪತಿ ತಮ್ಮ ಸಂಬಂಧಿಕರು, ಬಂಧು ಬಳಗದವರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಕೇಕ್​ ಕತ್ತರಿಸಿ ಈ ಹುಟ್ಟುಹಬ್ಬವನ್ನು ಯಶಸ್ವಿಗೊಳಿಸಿದ್ದಾರೆ. ಇಷ್ಟೇ ಅಲ್ಲ, ಕೇಕ್​ ಕತ್ತರಿಸಿದ ನಂತರ ಡಿಜೆಗೂ ವ್ಯವಸ್ಥೆ ಮಾಡಿದ್ದರು. ಈ ಪಾರ್ಟಿಯ ವಿಡಿಯೋ ಇದೀಗ ವೈರಲ್ ಆಗಿದೆ.

ಅನೇಕ ವರ್ಷಗಳಿಂದ ಈ ದಂಪತಿಗೆ ಮಕ್ಕಳಿಲ್ಲ. ಹಾಗಾಗಿ ಒಂದು ಮೇಕೆಯನ್ನು ಸಾಕಿಕೊಂಡರು. ಅದು ಎರಡು ಮರಿಗಳಿಗೆ ಜನ್ಮ ನೀಡಿತು. ಆಗ ಹೇಗಾದರೂ ಇದನ್ನು ಸಂಭ್ರಮಿಸಬೇಕು ಎಂದು ಉದ್ದೇಶಿಸಿ ಬರ್ತಡೇ ಪಾರ್ಟಿ ಏರ್ಪಸಿದರು.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ನಾವು ಈ ಮರಿಗಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದೇವೆ. ಕುಬೇರ್ ಮತ್ತು ಲಕ್ಷ್ಮೀ ಎಂದು ಇವುಗಳಿಗೆ ನಾಮಕರಣ ಮಾಡಿದ್ದೇವೆ. ನಾನು ಇವರಿಬ್ಬರನ್ನೂ ಆಗಾಗ ರಿಕ್ಷಾದಲ್ಲಿ ವಿಹಾರಕ್ಕಾಗಿ ಕರೆದೊಯ್ಯುತ್ತೇವೆ’ ಎನ್ನುತ್ತಾರೆ ರಾಜಾ.

ಹುಟ್ಟುಹಬ್ಬಕ್ಕೆ ಬಂದ ಆಹ್ವಾನಿತರು ಈ ಮರಿಗಳಿಗೆ ಹೊದಿಕೆ ಮತ್ತು ಇತರೇ ಉಡುಗೊರೆಗಳನ್ನು ಕೊಟ್ಟಿದ್ದಾರೆ.

ಖುಷಿ, ನೆಮ್ಮದಿಯನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳಬಹುದು ಎನ್ನುವುದಕ್ಕೆ ಈ ವರದಿ ಸಾಕ್ಷಿ.

ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:34 pm, Wed, 9 November 22