ಯಾರೋ ಒಬ್ಬ ಯುವತಿ ಅನ್ಯಕೋಮಿನ ಯುವಕನ ಜೊತೆ ಕಾಣಿಸಿಕೊಂಡರೆ ಅಥವಾ ಯುವಕ ಅನ್ಯಕೋಮಿನ ಯುವತಿಯ ಜೊತೆ ಕಾಣಿಸಿಕೊಂಡ್ರೆ ಅಲ್ಲಿ ದೊಡ್ಡ ಜಗಳವೇ ನಡೆಯುತ್ತವೆ. ಇಂತಹ ಸಾಕಷ್ಟು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದ್ದು, ಪಾರ್ಕಿನಲ್ಲಿ ಮುಸ್ಲಿಂ ಯುವತಿಯೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಯುವಕನ ಕಪಾಳಕ್ಕೆ ಬಾರಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಪಾರ್ಕ್ ಒಂದರಲ್ಲಿ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಜೊತೆಯಾಗಿ ಕುಳಿತು ಮಾತನಾಡುತ್ತಿರುವುದನ್ನು ಕಂಡು ಅಲ್ಲಿಗೆ ಬಂದ ಒಂದಷ್ಟು ಇಸ್ಲಾಂ ಮೂಲಭೂತವಾದಿಗಳು ಆ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆ ಯುವತಿ ಆತ ನನ್ನ ಸಹೋದರ ಎಂದು ಹೇಳಿದರೂ ಕೂಡಾ ಅವರುಗಳು ಆ ಇಬ್ಬರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
EXCLUSIVE: A Hindu boy and Muslim girl were thrashed by Muslim goons, as they were seen sitting together at Company garden, Bareilly.
CC: @bareillypolice @dgpup @Uppolice pic.twitter.com/cmpdmmgBlk
— Treeni (@TheTreeni) August 25, 2024
ಈ ಕುರಿತ ಪೋಸ್ಟ್ ಒಂದನ್ನು TheTreeni ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗಾರ್ಡನ್‌ನಲ್ಲಿ ಒಟ್ಟಿಗೆ ಕುಳಿತಿದ್ದ ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿಗೆ ಥಳಿಸಿದ ಮುಸ್ಲಿಂ ಗೂಂಡಾಗಳು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಅನ್ಯ ಕೋಮಿನ ಯುವತಿಯ ಜೊತೆ ಕಾಣಿಸಿಕೊಂಡಿದ್ದಕ್ಕೆ ಮುಸ್ಲಿಂ ಸಂಘಟನೆಯವರು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗುವ ದೃಶ್ಯ ಕಾಣಬಹುದು. ಪಾರ್ಕಿಗೆ ಬಂದ ಇಸ್ಲಾಮಿಸ್ಟ್‌ಗಳು ಇಬ್ಬರಿಗೂ ಕಪಾಳಮೋಕ್ಷ ಮಾಡಿ ಹಿಂದೂ ಯುವಕನ ಬಳಿ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆ ಮುಸ್ಲಿಂ ಯುವತಿ ಆತ ತನ್ನ ಸಹೋದರ ಇದ್ದಂತೆ ಎಂದು ಹೇಳಿದರೂ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಬರೇಲಿ ಪೊಲೀಸರು, ಸಂಬಂಧಿತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ಈ ಬಗ್ಗೆ ತನಿಖೆ ನಡೆಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೈಹಿಕ ಸಂಪರ್ಕ ಬೆಳೆಸಿದ್ರೆ ಮಾತ್ರ ಮಾಡಿದ ಪೂಜೆಗೆ ಫಲ ಸಿಗೋದು, ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ ಪುರೋಹಿತ
ಆಗಸ್ಟ್ 25 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 13 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ನೀವುಗಳು ಹಿಂದೂ ಯುವತಿಯ ಜೊತೆ ನಿಮ್ಮ ಮುಸ್ಲಿಂ ಯುವಕರು ಕಾಣಿಸಿಕೊಂಡಾಗ ಏಕೆ ಕ್ರಮ ಕೈಗೊಳ್ಳಲ್ಲಾ’ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಆ ಯುವಕನಿಗೆ ಕಪಾಳಮೋಕ್ಷ ಮಾಡುವ ಅಧಿಕಾರ ಇವರಿಗ್ಯಾರು ಕೊಟ್ಟಿದ್ದು’ ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ