ನಿಮಗೆ ಓಟು ಹಾಕಿದ್ದೀನಿ, ನೀವೇ ನನ್ನ ಮದುವೆ ಮಾಡಿಸ್ಬೇಕು, ಶಾಸಕರ ಬಳಿ ಬೇಡಿಕೆ ಇಟ್ಟ ವ್ಯಕ್ತಿ
ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರು ಶಾಸಕರ ಬಳಿ ಹೋಗಿ ನಾನು ನಿಮಗೆ ಮತ ಹಾಕಿದ್ದೇನೆ ನೀವು ನನ್ನ ಮದುವೆ ಮಾಡಿಸಬೇಕು ಎಂದು ಬೇಡಿಕೆ ಇಟ್ಟಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಬಿಜೆಪಿ ಶಾಸಕರು ಮದುವೆ ಮಾಡಿಸುವುದಾಗಿ ಭರವಸೆ ಕೂಡ ಕೊಟ್ಟಿದ್ದಾರೆ.
‘‘ನಾನು ನಿಮಗೆ ಮತ ಹಾಕಿದ್ದೇನೆ, ನೀವು ನನ್ನ ಮದುವೆ ಮಾಡಿಸಬೇಕು’’ ಎನ್ನುವ ವ್ಯಕ್ತಿಯೊಬ್ಬರ ಮಾತು ಕೇಳಿ ಶಾಸಕರೊಬ್ಬರು ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಮಹೋಬಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪೆಟ್ರೋಲ್ ಪಂಪ್ ಉದ್ಯೋಗಿಯೊಬ್ಬರು ಚರಖಾರಿ ಶಾಸಕ ಬ್ರಿಜ್ ಭೂಷಣ್ ರಜಪೂತ್ ಅವರ ಬಳಿ ತಮಗೆ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ.
ಶಾಸಕರು ತಮ್ಮ ಕಾರಿಗೆ ಪೆಟ್ರೋಲ್ ಹಾಕಿಸಲೆಂದು ಪೆಟ್ರೋಲ್ ಬಂಕ್ ಬಳಿ ಬಂದಾಗ ಅಲ್ಲಿನ ಸಿಬ್ಬಂದಿಯೊಬ್ಬರು ಶಾಸಕರ ಬಳಿ ಓಡಿ ಬಂದಿದ್ದರು. ಬಳಿಕ ನಾನು ನಿಮಗೆ ಮತ ಹಾಕಿದ್ದೇನೆ ಅದಕ್ಕೆ ಪ್ರತಿಯಾಗಿ ನೀವು ನನಗೆ ಮದುವೆ ಮಾಡಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟರು.
ಅದಕ್ಕೆ ಶಾಂತವಾಗಿ ವರ್ತಿಸಿರುವ ಶಾಸಕರು ಹುಡುಗಿ ಹುಡುಕಿ ಮದುವೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮೊದಲು ಪೆಟ್ರೋಲ್ ಬಂಕ್ ಉದ್ಯೋಗಿ ಶಾಸಕರ ಬಳಿ ಓಡಿ ಬಂದಾಗ ಏನೋ ದೂರು ನೀಡಲು ಬಂದಿರಬಹುದು ಎಂದು ತಿಳಿದಿದ್ದರು ಬಳಿಕ, ಅವರ ಮಾತು ಕೇಳಿ ದಿಗ್ಭ್ರಮೆಗೊಂಡರು.
ಮದುವೆಯಾಗದೇ ಬೇಸರದಲ್ಲಿದ್ದೇನೆ ಎಂದು ನೌಕರ ಹೇಳಿಕೊಂಡಿದ್ದಾರೆ. ಬೇರೆ ಯಾರ ಬಳಿಯಾದರೂ ಈ ರೀತಿ ಮನವಿ ಮಾಡಿದ್ದೀರಾ ಎಂದು ಶಾಸಕರು ಕೇಳಿದಾಗ ಹೌದು ನಿಮ್ಮ ವಿರುದ್ಧ ಸ್ಪರ್ಧಿಸಿದ್ದ ಗೋಸ್ವಾಮಿ ಅವರ ಬಳಿಯೂ ಮದುವೆ ಮಾಡಿಸುವಂತೆ ಕೇಳಿಕೊಂಡಿದ್ದೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಈ ಕಟ್ಟಡದಲ್ಲಿ ಅಟ್ಯಾಚ್ಡ್ ಬಾತ್ರೂಂ ಇರುವ ಒಂದು ಕೋಣೆಗೆ ಕೇವಲ 15 ರೂ. ಬಾಡಿಗೆ
ನಂತರ ಶಾಸಕರು ಅವರ ಸಂಬಳದ ಬಗ್ಗೆಯೂ ವಿಚಾರಿಸಿದ್ದಾರೆ, ತಿಂಗಳಿಗೆ ಆರು ಸಾವಿರ ರೂಪಾಯಿ ಸಂಬಳ, ಭೂಮಿ ಕೂಡ ಇದೆ. ಈ ವಿಡಿಯೋ ಯಾವ ಪ್ರದೇಶದ್ದು, ಯಾವಾಗ ನಡೆದಿದ್ದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ