Viral: ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿರುವ ವೇಳೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಮನೆಕೆಲಸದಾಕೆ; ವೈರಲ್ ಆಯ್ತು ವಿಡಿಯೋ
ಕೆಲ ದಿನಗಳ ಹಿಂದೆ ವ್ಯಾಪಾರಿಯೊಬ್ಬ ಹಣ್ಣಿನ ಜ್ಯೂಸ್‌ನಲ್ಲಿ ತನ್ನ ಮೂತ್ರ ಬೆರೆಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಭಾರೀ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಇಲ್ಲೊಬ್ಬಳು ಮನೆಕೆಲಸದಾಕೆ ತನ್ನ ಓನರ್ ಮನೆಯವರಿಗೆಯೇ ಮೂತ್ರ ಬೆರೆಸಿ ತಯಾರಿಸಿದ ರೊಟ್ಟಿ ನೀಡಿದ್ದಾಳೆ. ಇದೀಗ ಆಕೆ ಮನೆಯವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮನೆಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ, ನಮಗೆ ಯಾವುದೇ ರೀತಿಯ ರೊಂದರೆಯಾಗದಂತೆ ಮನೆಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾರೆ ಎಂಬ ನಂಬಿಕೆಯ ಮೇಲೆ ಹೆಚ್ಚಿನವರು ಮನೆಕೆಲಸದವರನ್ನು ನೇಮಿಸುತ್ತಾರೆ. ಆದ್ರೆ ಕೆಲ ಕೆಲಸಗಾರರು ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡುತ್ತಿರುತ್ತಾರೆ. ಇಂತಹ ಸಾಕಷ್ಟು ಪ್ರಕರಣಗಳ ಸುದ್ದಿಗಳು ಈ ಹಿಂದೆಯೂ ಕೇಳಿ ಬಂದಿವೆ. ಇದೀಗ ಇಂತಹದ್ದೇ ಘಟನೆಯೊಂದು ನಡೆದಿದ್ದು, ಮನೆಕೆಲಸದಾಕೆಯ ನೀಚ ಕೆಲಸವನ್ನು ಕಂಡು ಮನೆಯವರು ಫುಲ್ ಶಾಕ್ ಆಗಿದ್ದಾರೆ. ಹೌದು ಆಕೆ ತನ್ನ ಓನರ್ ಮನೆಯವರಿಗೆಯೇ ಹಿಟ್ಟಿನಲ್ಲಿ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ ಕೊಟ್ಟಿದ್ದಾಳೆ. ಆಕೆಯ ಈ ದುಶ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಥಾನಾ ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದ ಫ್ಲಾಟ್ ಒಂದರಲ್ಲಿ ವಾಸವಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಕೆಲಸದಾಕೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ರೀನಾ ಹೆಸರಿನ ಆ ಮಹಿಳೆ ಕಳೆದ 8 ವರ್ಷದಿಂದ ಈ ಉದ್ಯಮಿಯ ಮನೆಯಲ್ಲಿಯೇ ಕೆಲಸವನ್ನು ಮಾಡುತ್ತಿದ್ದು, ಇದೀಗ ಆಕೆ ಉಂಡ ಮನೆಗೆಯೇ ದ್ರೋಹ ಬಗೆಯುವ ಕೆಲಸವನ್ನು ಮಾಡಿದ್ದಾಳೆ.
ವರದಿಗಳ ಪ್ರಕಾರ ಉದ್ಯಮಿಯ ಮನೆಯವರು ಕೆಲ ತಿಂಗಳುಗಳಿಂದ ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಅಷ್ಟೇ ಅಲ್ಲದೇ ಅವರು ಯಕೃತ್ತಿನ ಸೋಂಕಿಗೂ ತುತ್ತಾಗಿದ್ದರು. ಆದರೆ ಆರೋಗ್ಯದಲ್ಲಿ ಇಷ್ಟರಮಟ್ಟಿಗೆ ಏರುಪೇರು ಆಗಲು ಕಾರಣ ಏನೆಂಬುದು ಮನೆಯವರಿಗೆ ತಿಳಿಯಲಿಲ್ಲ. ನಂತರ ಒಂದು ದಿನ ಅಡುಗೆ ಮನೆಯಲ್ಲಿ ಮೊಬೈಲ್ ಕ್ಯಾಮರಾದಲ್ಲಿ ಗುಟ್ಟಾಗಿ ರೆಕಾರ್ಡಿಂಗ್ ಮಾಡುವ ವೇಳೆ ಮನೆಕೆಲಸದಾಕೆ ಪಾತ್ರೆಗೆ ಮೂತ್ರ ವಿಸರ್ಜಿಸಿ ಅದೇ ಮೂತ್ರದಲ್ಲಿ ರೊಟ್ಟಿ ತಯಾರಿಸಿದ ಆಘಾತಕಾರಿ ಸಂಗತಿ ಬಯಲಾಗಿದೆ. ಕೂಡಲೇ ಮನೆಯವರು ಮನೆಕೆಲಸದಾಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಆಧಾರರ ಮೇರೆಗೆ ಪೊಲೀಸರು ರೀನಾಳನ್ನು ಬಂಧಿಸಿದ್ದಾರೆ.
ಸಚಿನ್ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮನೆಕೆಲಸದಾಕೆ ಅಡುಗೆ ಕೋಣೆಯನ್ನು ಒಂದು ಪಾತ್ರೆಗೆ ಮೂತ್ರ ವಿಸರ್ಜಿಸುವಂತಹ ದೃಶ್ಯವನ್ನು ಕಾಣಬಹುದು. ನಂತರ ಅದೇ ಪಾತ್ರೆಗೆ ಹಿಟ್ಟು ಬೆರೆಸಿ ರೊಟ್ಟಿಯನ್ನು ತಯಾರಿಸಿದ್ದಾಳೆ.
ಇದನ್ನೂ ಓದಿ: ಎಲ್ಲಾ ಎಣ್ಣೆ ಎಫೆಕ್ಟ್… ಮೈ ಮೇಲೆ ದೈತ್ಯ ಹೆಬ್ಬಾವು ಹತ್ತಿದ್ರೂ ಡೋಂಟ್ ಕೇರ್ ಅಂತ ಕುಳಿತ ಕುಡುಕ ಮಹಾಶಯ
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಿಳೆ ನಿಜಕ್ಕೂ ಅಸಹ್ಯಕರ ಕೃತ್ಯವನ್ನೇ ಮಾಡಿದ್ದಾಳೆ. ಆದರೆ ಈಕೆಯ ಈ ಮನಸ್ಥಿತಿಗೆ ಮಾಲೀಕರ ಕೆಟ್ಟ ನಡವಳಿಕೆ ಏನಾದರೂ ಕಾರಣವಿರಬಹುದೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಕೆಲಸವನ್ನು ಮಾಡಲು ಇವರಿಗೆ ಮನಸ್ಸಾದರೂ ಹೇಗೆ ಬರುತ್ತೆʼ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ