AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಎಲ್ಲಾ ಎಣ್ಣೆ ಎಫೆಕ್ಟ್‌… ಮೈ ಮೇಲೆ ದೈತ್ಯ ಹೆಬ್ಬಾವು ಹತ್ತಿದ್ರೂ ಡೋಂಟ್‌ ಕೇರ್‌ ಅಂತ ಕುಳಿತ ಕುಡುಕ ಮಹಾಶಯ

ಕುಡುಕರಿಗೆ ತಾವು ಎಣ್ಣೆ ಏಟಲ್ಲಿ ಏನು ಮಾಡ್ತಿದ್ದೇವೆ ಎಂಬ ಅರಿವೇ ಅವರಿಗೆ ಇರೊಲ್ಲ. ಹೀಗೆ ಕುಡಿದ ಮತ್ತಿನಲ್ಲಿ ಕುಡುಕರು ಮಾಡುವ ಅವಾಂತರಗಳು ಒಂದೆರಡಲ್ಲ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮೈ ಮೇಲೆ ದೈತ್ಯ ಹೆಬ್ಬಾವು ಸುತ್ತುವರಿದರೂ ಕುಡುಕನೊಬ್ಬ ಇದಕ್ಕೆಲ್ಲಾ ಡೋಂಟ್‌ ಕೇರ್‌ ಎನ್ನದೇ ಅರಾಮಾಗಿ ಕುಳಿತಿದ್ದನು. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Oct 16, 2024 | 1:01 PM

ಹಾವುಗಳನ್ನು ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ, ಬಹುತೇಕ ನಾವೆಲ್ಲರೂ ದೈತ್ಯ ಹೆಬ್ಬಾವು, ಕಾಳಿಂಗ ಸರ್ಪ ಇತ್ಯಾದಿ ವಿಷಕಾರಿ ಹಾವುಗಳನ್ನು ಕಂಡರೆ ಭಯದಿಂದ ಮಾರು ದೂರು ಓಡಿ ಹೋಗ್ತೇವೆ. ಆದ್ರೆ ಇಲ್ಲೊಬ್ಬ ಕುಡುಕ ಮೈ ಮೇಲೆ ದೈತ್ಯ ಹೆಬ್ಬಾವು ಸುತ್ತಿಕೊಂಡ್ರು ಕೂಡಾ ಎಣ್ಣೆ ಏಟಲ್ಲಿ ಯಾವುದೇ ಅಂಜಿಕೆ, ಭಯವಿಲ್ಲದೆ ಅರಾಮವಾಗಿ ಕುಳಿತಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕುಡುಕನ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಈ ಘಟನೆ ಆಂಧ್ರಪ್ರದೇಶದ ಕರ್ನೂಲ್‌ ಎಂಬಲ್ಲಿ ನಡೆದಿದ್ದು, ಪೊದೆಯ ಪಕ್ಕ ಕುಳಿತಿದ್ದ ಕುಡುಕನ ಮೈ ಮೇಲೆ ದೈತ್ಯ ಹಾವೊಂದು ಸುತ್ತುವರೆದು ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು. ಹೌದು ರಾತ್ರಿ ಮೇಲೆ ಮದ್ಯ ಸೇವಿಸಿ ವಾಹನವನ್ನು ಓಡಿಸಲಾಗದೆ ಲಾರಿ ಚಾಲಕ ಅಲ್ಲೇ ಪೊದೆಯ ಪಕ್ಕ ಕುಳಿತಿದ್ದನು. ಆ ಸಂದರ್ಭದಲ್ಲಿ ಆತನ ಮೇಲೆ ದೈತ್ಯ ಹೆಬ್ಬಾವು ಸುತ್ತುವರೆದಿದ್ದು, ಇದನ್ನು ಕಂಡ ಸ್ಥಳೀಯರು ಹಾವು ಮತ್ತು ಕುಡುಕನಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹಾವನ್ನು ರಕ್ಷಿಸಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಪಾನಮತ್ತ ವ್ಯಕ್ತಿಯನ್ನು ದೈತ್ಯ ಹೆಬ್ಬಾವು ಸುತ್ತುವರೆದಿರುವ ದೃಶ್ಯವನ್ನು ಕಾಣಬಹುದು. ಈ ಭಯಾನಕ ದೃಶ್ಯವನ್ನು ಕಂಡು ಸ್ಥಳೀಯರು ಜೋರಾಗಿ ಕಿರುಚಿಕೊಂಡರೂ, ಆ ಕುಡುಕ ಮಾತ್ರ ಮೈ ಮೇಲೆ ಹಾವು ಇದ್ದರೂ ಡೋಂಟ್‌ ಕೇರ್‌ ಎನ್ನದೇ ಅರಾಮಾಗಿ ಕುಳಿತಿದ್ದ.

ಇದನ್ನೂ ಓದಿ: ರಾಮಲೀಲಾ ವೇಳೆ ವೇದಿಕೆಯಲ್ಲೇ ರಾಮ -ರಾವಣನ ಪಾತ್ರ ಮಾಡುತ್ತಿದ್ದ ನಟರ ಗಲಾಟೆ; ವಿಡಿಯೋ ವೈರಲ್

ಅಕ್ಟೋಬರ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 87 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಕುಡುಕನ ಧೈರ್ಯಕ್ಕೆ ಮೆಚ್ಚಲೇ ಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನೋಡಿ ಕುಡುಕರಿಗಿರುವಷ್ಟು ಧೈರ್ಯ ಯಾರಿಗೂ ಇರಲ್ಲʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:57 pm, Wed, 16 October 24