Fact Check: ರತನ್ ಟಾಟಾ ಅವರ ನಾಯಿ ಗೋವಾ ಇನ್ನಿಲ್ಲ ಎಂಬ ಸುದ್ದಿ ನಿಜವೇ?

ರತನ್ ಟಾಟಾ ನಿಧನದ ಬಳಿಕ ಅವರ ಕುರಿತು ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೀಗ ಅವರು ದತ್ತು ಪಡೆದುಕೊಂಡ ಗೋವಾ ನಾಯಿ ಸಾವನ್ನಪ್ಪಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿ ನಿಜವೇ?, ರತನ್ ಟಾಟಾ ಅವರ ಮುದ್ದಿನ ನಾಯಿ ಮರಣ ಹೊಂದಿದೆಯೇ?. ಈ ಕುರಿತ ಮಾಹಿತಿ ಇಲ್ಲಿದೆ.

Fact Check: ರತನ್ ಟಾಟಾ ಅವರ ನಾಯಿ ಗೋವಾ ಇನ್ನಿಲ್ಲ ಎಂಬ ಸುದ್ದಿ ನಿಜವೇ?
Follow us
| Updated By: ಅಕ್ಷತಾ ವರ್ಕಾಡಿ

Updated on: Oct 16, 2024 | 4:18 PM

ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನದ ಕೆಲವೇ ದಿನಗಳಲ್ಲಿ, ಅವರ ಸಾಕು ನಾಯಿ ಗೋವಾ ಕೂಡ ಸಾವನ್ನಪ್ಪಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಹೇಳಿಕೊಳ್ಳುತ್ತಿದ್ದಾರೆ. ಈ ಹೇಳಿಕೆಯ ಜೊತೆಗೆ, ಟಾಟಾ ಅವರ ತ್ರಿವರ್ಣ ಕವಚದ ಪೆಟ್ಟಿಗೆಯ ಪಕ್ಕದಲ್ಲಿ ನಾಯಿ ಕುಳಿತಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ, ಈ ಸುದ್ದಿ ನಿಜವೇ?, ರತನ್ ಟಾಟಾ ಅವರ ಮುದ್ದಿನ ನಾಯಿ ಗೋವಾ ಮರಣ ಹೊಂದಿದೆಯೇ?. ಈ ಕುರಿತ ಮಾಹಿತಿ ಇಲ್ಲಿದೆ.

ಫೇಸ್​ಬುಕ್, ಇನ್​ಸ್ಟಾಗ್ರಾಮ್, ಎಕ್ಸ್​ನಲ್ಲಿ ಕೆಲ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ದುಃಖದ ಸುದ್ದಿ. ರತನ್ ಟಾಟಾ ಅವರ ಮುದ್ದಿನ ನಾಯಿ ಗೋವಾ ಅವರು ತೀರಿಹೋದ 3 ದಿನಗಳ ನಂತರ ಸಾವನ್ನಪ್ಪಿದೆ. ಅದಕ್ಕಾಗಿಯೇ ಮನುಷ್ಯರಿಗಿಂತ ನಾಯಿಗಳು ತಮ್ಮ ಯಜಮಾನರಿಗೆ ಹೆಚ್ಚು ನಂಬಿಗಸ್ತವಾಗಿವೆ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ, ಗೋವಾ ಸಾವಿನ ಬಗೆಗಿನ ವೈರಲ್ ಪೋಸ್ಟ್‌ಗಳು ನಕಲಿ ಎಂದು ತಿಳಿದುಬಂದಿದೆ. ರತನ್ ಟಾಟಾ ಅವರ ಆಪ್ತ ಸಹಾಯಕ ಶಂತನು ನಾಯ್ಡು ಅವರು ಪೊಲೀಸ್ ಅಧಿಕಾರಿಗೆ ನಾಯಿ ಜೀವಂತವಾಗಿರುವುದನ್ನು ಖಚಿತಪಡಿಸಿದ್ದಾರೆ.

ಈ ಸುದ್ದಿಯ ಸತ್ಯಾಂಶ ತಿಳಿಯಲು ನಾವು ಮೊದಲಿಗೆ ಗೂಗಲ್​ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದೆವು. ಆಗ ಇದಕ್ಕೆ ಸಂಬಂಧಿಸಿದಂತೆ ಅನೇಕ ಲೇಖನ ಕಂಡುಬಂತು. ಜೊತೆಗೆ ನಾವು ಮುಂಬೈನ ಬೊರಿವಲಿ ಪಶ್ಚಿಮದಲ್ಲಿರುವ MHB ಕಾಲೋನಿ ಪೊಲೀಸ್ ಠಾಣೆಯಲ್ಲಿ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್ ಕುಡಾಲ್ಕರ್ ಅವರ ಇನ್​ಸ್ಟಾಗ್ರಾಮ್ ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ರತನ್ ಟಾಟಾ ಅವರ ಸಾಕು ನಾಯಿ ಜೀವಂತವಾಗಿದೆ ಮತ್ತು ಚೆನ್ನಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಟಾಟಾ ಅವರ ಆಪ್ತ ಸಹಾಯಕ ಶಂತನು ನಾಯ್ಡು ಖಚಿತಪಡಿಸಿದ್ದಾರೆ ಎಂದು ಅವರು ಬರೆದುಕೊಮಡಿದ್ದಾರೆ. ಶೀರ್ಷಿಕೆಯಲ್ಲಿ, ಇಂತಹ ವದಂತಿಗಳನ್ನು ಹೊಂದಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ ಎಂದು ಕುಡಾಲ್ಕರ್ ಒತ್ತಾಯಿಸಿದ್ದಾರೆ.

ಶಂತನು ನಾಯ್ಡು ಅವರೊಂದಿಗೆ ಕುಡಾಲ್ಕರ್ ನಡೆಸಿರುವ ವಾಟ್ಸ್​ಆ್ಯಪ್​ ಚಾಟ್‌ನ ಸ್ಕ್ರೀನ್‌ಶಾಟ್ ಕೂಡ ಇದೆ. ಇಲ್ಲಿ ಅವರು ಗೋವಾದ ಸಾವಿನ ಸುದ್ದಿಯನ್ನು ನಿರಾಕರಿಸಿದ್ದಾರೆ.

ಹಾಗೆಯೆ ಅಕ್ಟೋಬರ್ 16, 2024 ರಂದು ಟಿವಿ9 ಬಾಂಗ್ಲಾ ಕೂಡ ಗೋವಾ ಸಾವಿನ ಸುದ್ದಿ ಸುಳ್ಳು ಎಂದು ಲೇಖನ ಪ್ರಕಟಿಸಿದೆ. ಓದಲು ಇಲ್ಲಿ ಕ್ಲಿಕ್​ ಮಾಡಿ

ಸುಧೀರ್ ಕುಡಾಲ್ಕರ್ ಅವರು ಪ್ರಾಣಿಗಳ ಮೇಲಿನ ಪ್ರೀತಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಅವರು ಪೊಲೀಸ್ ಠಾಣೆಯ ಆವರಣದಲ್ಲಿ ಪ್ರತಿದಿನ ಹಲವಾರು ಬೀದಿ ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ. PETA (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್), AWB (ಪ್ರಾಣಿ ಕಲ್ಯಾಣ ಮಂಡಳಿ), ಮತ್ತು ಮಹಾರಾಷ್ಟ್ರ ಸರ್ಕಾರವು ಪ್ರಾಣಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದಂತಹ ಸಂಸ್ಥೆಗಳಿಂದ ಅವರನ್ನು ಗೌರವಿಸಲಾಗಿದೆ ಎಂದು ವರದಿಯಾಗಿದೆ.

ಗೋವಾದ ಕಥೆ ಏನು?

ವರ್ಷಗಳ ಹಿಂದೆ, ಗೋವಾ ಪ್ರವಾಸದ ಸಮಯದಲ್ಲಿ ಒಂದು ಬೀದಿ ನಾಯಿ ರತನ್ ಟಾಟಾ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಅವರು, ಈ ನಾಯಿಯನ್ನು ಇಷ್ಟಪಟ್ಟರು ಮತ್ತು ಅದನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಬಳಿಕ ಮುಂಬೈಗೆ ಕರೆತಂದು ಗೋವಾ ಎಂದು ಹೆಸರಿಸಿಟ್ಟರು. ಈ ಮೂಲಕ ಸದ್ಯ ವೈರಲ್ ಆಗುತ್ತಿರುವಂತೆ ಗೋವಾ ನಾಯಿಯ ಸಾವಿನ ಪೋಸ್ಟ್ ಸುಳ್ಳು ಎಂಬುದು ಸ್ಪಷ್ಟವಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಆತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಮಗನೇ ಮತ್ತೊಮ್ಮೆ ಹುಟ್ಟಿಬಂದಷ್ಟು ಸಂತೋಷವಾಗುತ್ತಿದೆ ಎಂದ ಶಿವನಗೌಡ
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪ್ರಕೃತಿಗೆ ಬುದ್ಧಿ ಹೇಳಲಾಗುತ್ತಾ ಅಂತ ಹಾರಿಕೆ ಉತ್ತರಕ್ಕೆ ಶರಣಾದ ಶಿವಕುಮಾರ್
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ
ಪರಪ್ಪನ ಅಗ್ರಹಾರ ಜೈಲಿನಿಂದ ಶಾಸಕ ಮುನಿರತ್ನ ಬಿಡಗುಡೆ