ಈ ಕಟ್ಟಡದಲ್ಲಿ ಅಟ್ಯಾಚ್ಡ್ ಬಾತ್ರೂಂ ಇರುವ ಒಂದು ಕೋಣೆಗೆ ಕೇವಲ 15 ರೂ. ಬಾಡಿಗೆ
ಇತ್ತೀಚಿನ ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಬಾಡಿಗೆ ಮನೆಯನ್ನು ಹುಡುಕುವುದು ತುಂಬಾ ಕಷ್ಟಕರ. ಬಾಡಿಗೆ ಸರಿ ಹೊಂದಿದರೆ ಮನೆ ಚೆನ್ನಾಗಿರುವುದಿಲ್ಲ, ಮನೆ ಚೆನ್ನಾಗಿದ್ದರೆ ವಿಪರೀತ ಬಾಡಿಗೆ. ಬ್ಯಾಚ್ಯುಲರ್ಗಳು ಮನೆ ಬಾಡಿಗೆ ಪಡೆಯುವುದಂತೂ ಇನ್ನೂ ಕಷ್ಟ, ದುಬಾರಿ ಮನೆಯಲ್ಲಿ ಉಳಿದುಕೊಳ್ಳಲು ಅಷ್ಟು ಹಣವೂ ಅವರ ಬಳಿ ಇರುವುದಿಲ್ಲ, ಆದರೆ ಇತ್ತೀಚೆಗೆ ಯುವಕನೊಬ್ಬ ಹಂಚಿಕೊಂಡಿರುವ ಫೋಟೊ ನೋಡಿ ಎಲ್ಲರೂ ಆಶ್ಚರ್ಯಪಟ್ಟಿರುವುದಂತೂ ಸತ್ಯ.

ಪಶ್ಚಿಮ ಬಂಗಾಳದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಹಂಚಿಕೊಂಡಿರುವ ಫೋಟೊ ಕುತೂಹಲ ಮೂಡಿಸಿದೆ. ಬಾತ್ರೂಂ ಅಟ್ಯಾಚ್ ಆಗಿರುವ ಕೋಣೆಯೊಂದಕ್ಕೆ ಬಾಡಿಗೆ ಕೇವಲ 15 ರೂ. ಇಂದಿನ ಕಾಲದಲ್ಲಿ 15 ರೂಪಾಯಿಗೆ ಮನೆ ಬಾಡಿಗೆ ನೀಡುತ್ತಾರೆ ಎಂದರೆ ಅಚ್ಚರಿಯಾಗುವುದು ಸತ್ಯ.
ಈ ವಿದ್ಯಾರ್ಥಿ ಏಮ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಇವು ಸರ್ಕಾರಿ ಕೊಠಡಿಗಳಾಗಿದ್ದು, ಇದರಿಂದಾಗಿ ತುಂಬಾ ಕಡಿಮೆ ಬೆಲೆಗೆ ನೀಡಲಾಗಿದೆ. ಕೋಣೆಯ ಗಾತ್ರವು ಒಬ್ಬ ವಿದ್ಯಾರ್ಥಿಗೆ ಸೂಕ್ತವಾಗಿದೆ. ಇದು ಬಾತ್ರೂಂ ಕೂಡ ಒಳಗೊಂಡಿದೆ. ಆತ ತನ್ನ ಅಗತ್ಯ ವಸ್ತುಗಳನ್ನೆಲ್ಲಾ ಕೋಣೆಯಲ್ಲೇ ಇರಿಸಿದ್ದಾರೆ.
I got this single room with attached washroom at a cost of ₹15 per month pic.twitter.com/irSYZ7vAaS
— Manish Aman (@manish__aman) October 13, 2024
ಮನೀಶ್ ಕೂಡ ಕೋಣೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ನಿಮ್ಮ ರೂಮಿಗೆ 15 ಸಾವಿರ ರೂ ನೀಡುವ ರೂಮ್ ಮೇಟ್ ನೇಮಿಸಿಕೊಳ್ಳುವುದು ಒಳ್ಳೆಯದು ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ವಿದ್ಯಾರ್ಥಿಯಾಗಿರುವುದರಿಂದ ಖಂಡಿತವಾಗಿಯೂ ಇದು ಪ್ರಯೋಜನಕಾರಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ