Viral: ಸರಿಯಾಗಿ ಚಾಕು ಸಹ ಹಿಡಿಯೋಕೆ ಬರೊಲ್ಲ ಅಡುಗೆ ಮಾಡೋಕೆ ಮೊದಲೇ ಗೊತ್ತಿಲ್ಲ; ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಗಂಡ

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಡ್‌ನಲ್ಲಿ ಹೆಚ್ಚಿನವರು ತಮ್ಮ ಜೀವನದ ಕೆಲವೊಂದು ಸಮಸ್ಯೆಗಳ ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ಪೋಸ್ಟ್‌ಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದೇ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ಅಡುಗೆ ಬಿಡಿ, ಆಕೆಗೆ ಸರಿಯಾಗಿ ಚಾಕು ಹಿಡಿದು ಹಣ್ಣು ಕಟ್‌ ಮಾಡೋದಕ್ಕೂ ಬರಲ್ಲ ಆಕೆಗೆ ಯಾವುದೇ ಮನೆಗೆಲಸ ಮಾಡೋಕೂ ಬರೊಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

Viral: ಸರಿಯಾಗಿ ಚಾಕು ಸಹ ಹಿಡಿಯೋಕೆ ಬರೊಲ್ಲ ಅಡುಗೆ ಮಾಡೋಕೆ ಮೊದಲೇ ಗೊತ್ತಿಲ್ಲ; ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಗಂಡ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 6:27 PM

ನನ್ನ ಗಂಡನಿಗೆ ಅಡುಗೆ ಬಿಡಿ, ಒಂದು ಕಪ್‌ ಟೀ ಮಾಡೋದಕ್ಕೂ ಬರಲ್ಲ, ಮನೆ ಕೆಲಸದಲ್ಲಂತೂ ಒಂದು ಚೂರೂ ಸಹಾಯ ಮಾಡಲ್ಲ ಅಂತ ಮಹಿಳೆಯರು ತಮ್ಮ ಗಂಡಂದಿರ ಬಗ್ಗೆ ದೂರು ಹೇಳುತ್ತಿರುತ್ತಾರೆ. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಮನೆಗೆಲಸ ಗೊತ್ತಿಲ್ಲ ಎಂದು ಪತಿರಾಯ ತನ್ನ ಹೆಂಡ್ತಿಗೆ ಡಿವೋರ್ಸ್‌ ನೀಡಲು ಮುಂದಾಗಿದ್ದಾರೆ. ಹೌದು ಅಡುಗೆ ಬಿಡಿ, ಆಕೆಗೆ ಸರಿಯಾಗಿ ಚಾಕು ಹಿಡಿದು ಹಣ್ಣು ಕಟ್‌ ಮಾಡೋದಕ್ಕೂ ಬರಲ್ಲ ಎಂದು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗಿದೆ.

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಡ್‌ನಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. 28 ವರ್ಷದ ವ್ಯಕ್ತಿ ತನ್ನ ಸಮಸ್ಯೆಯ ಬಗ್ಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ನನ್ನ ಹೆಂಡತಿಗೆ ಅಡುಗೆ ಮಾಡೋದಕ್ಕೂ ಬರುವುದಿಲ್ಲ ಜೊತೆಗೆ ಆಕೆಗೆ ಸರಿಯಾಗಿ ಚಾಕು ಹಿಡಿಯೋದಕ್ಕೂ ಬರೋದಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: ವಿಜಯದಶಮಿಯಂದು ಪತಿ ಮತ್ತು ಅತ್ತೆಯ ಪ್ರತಿಕೃತಿ ಸುಟ್ಟು ಹಾಕಿದ ಮಹಿಳೆ

28 ವರ್ಷದ ಈ ವ್ಯಕ್ತಿ ಕಳೆದ ಒಂದು ವರ್ಷದ ಹಿಂದೆ 31 ವರ್ಷದ ಮಹಿಳೆಯನ್ನು ಮದುವೆಯಾಗಿದ್ದರು. ಹೆಂಡತಿಗೆ ಮನೆ ಕೆಲಸ ಮಾಡಲು ಬಾರದ ಕಾರಣ ಆ ವ್ಯಕ್ತಿಯೇ ಅಡುಗೆ ಮಾಡಿ ಬಡಿಸುತ್ತಿದ್ದರು. ನಂತರದಲ್ಲಿ ಇದೊಂದು ಸಮಸ್ಯೆಯಾಗಿಯೇ ಪರಿಣಮಿಸಿತು ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಒಂಉ ದಿನ ರಾತ್ರಿ ನಾನು ಅಡುಗೆಗೆ ತಯಾರಿ ನಡೆಸುತ್ತಿದ್ದ ವೇಳೆ ನನ್ನ ತಾಯಿ ನನಗೆ ಸಹಾಯ ಮಾಡಲು ಬಂದ್ರು ಹಾಗೂ ನನ್ನ ಹೆಂಡ್ತಿಯ ಬಳಿ ಹಣ್ಣುಗಳನ್ನು ಕಟ್‌ ಮಾಡಿಕೊಡಲು ಕೇಳಿದ್ದರು. ಆದ್ರೆ ಆಕೆ ಸರಿಯಾಗಿ ಹಣ್ಣುಗಳನ್ನು ಕಟ್‌ ಮಾಡಿಲ್ಲ. ಆಕೆಗೆ ಸರಿಯಾಗಿ ಚಾಕುವನ್ನು ಹಿಡಿಯೋಕೂ ಬರೋದಿಲ್ಲ ಎಂದು ಅಮ್ಮ ಕೋಪದಿಂದ ಹೋದರು. ಸರಿಯಾಗಿ ಒಂದು ಚಾಕು ಹಿಡಿಯೋದಕ್ಕೂ ಬರೋದಿಲ್ಲ ಅನ್ನೋದು ನಿಜಕ್ಕೂ ಮುಜುಗರದ ಸಂಗತಿ ಎಂದು ಹೇಳಿದ್ದಾರೆ. ಜೊತೆಗೆ ಕೊನೆಯಲ್ಲಿ ಆಕೆಯನ್ನು ಅಡುಗೆ ಕ್ಲಾಸ್‌ಗೆ ಸೇರಿಸುತ್ತೇನೆ, ಇಷ್ಟಾದರೂ ಆಕೆ ಅಡುಗೆ ಕಲಿಯದಿದ್ದರೆ ಆಕೆಗೆ ವಿಚ್ಛೇದನ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ