ಪೋಲಂಡ್: ಪೋಲಂಡ್ ದೇಶದ ವಾರ್ಸಾ ವಿಶ್ವವಿದ್ಯಾಲಯದ ಲೈಬ್ರರಿ ಗೋಡೆಯಲ್ಲಿ ಉಪನಿಷತ್ ಬರಹಗಳನ್ನು ಕೆತ್ತಲಾಗಿದೆ. ಪೋಲಂಡ್ನ ಭಾರತೀಯ ರಾಯಭಾರ ಕಛೇರಿಯು ಟ್ವಿಟರ್ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ಕಣ್ಣಿಗೆ ಎಂತಹ ಹಿತಕಾರಿಯಾದ ದೃಶ್ಯ ಎಂದಿದೆ. ಈ ದೃಶ್ಯವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಅದಕ್ಕೆ ಸುಂದರ ಬರಹವನ್ನೂ ಬರೆಯಲಾಗಿದೆ. ‘ವಾರ್ಸಾ ವಿಶ್ವವಿದ್ಯಾಲಯದ ಲೈಬ್ರರಿ ಗೋಡೆಯಲ್ಲಿ ಉಪನಿಷತ್ನ ಬರಹಗಳನ್ನು ಕೆತ್ತಲಾಗಿದೆ. ಎಂತಹ ದೃಶ್ಯವಿದು! ಹಿಂದೂ ಧರ್ಮದ ಸಂಸ್ಕೃತಿಯನ್ನು ರೂಪಿಸಿರುವ ಉಪನಿಷತ್ಗಳು ಹಿಂದೂ ತತ್ವಶಾಸ್ತ್ರದ ಪಠ್ಯಗಳಾಗಿವೆ’ ಎಂದು ಪೋಲಂಡ್ನಲ್ಲಿ ಕಂಡ ದೃಶ್ಯದ ಜೊತೆಗೆ ಸಣ್ಣ ಪರಿಚಯಾತ್ಮಕ ಸಾಲುಗಳನ್ನೂ ಟ್ವೀಟ್ ಮೂಲಕ ತಿಳಿಸಲಾಗಿದೆ.
ಭಾರತೀಯ ರಾಯಭಾರಿ ಕಛೇರಿ ಮಾಡಿರುವ ಟ್ವೀಟ್ ಇಲ್ಲಿದೆ:
What a pleasant sight !!? This is a wall of Warsaw University’s library with Upanishads engraved on it. Upanishads are late vedic Sanskrit texts of Hindu philosophy which form the foundations of Hinduism. ??@MEAIndia pic.twitter.com/4fWLlBUAdX
— India in Poland (@IndiainPoland) July 9, 2021
ನೆಟ್ಟಿಗರಿಗೆ ಈ ದೃಶ್ಯ ಬಹಳ ಮುದವನ್ನು ನೀಡಿದ್ದು, ಟ್ವೀಟ್ ವೈರಲ್ ಆಗಿದೆ. ಉಪನಿಷತ್ ಪೋಲಂಡ್ನ ಲೈಬ್ರರಿಯಲ್ಲಿ ಕೆತ್ತಲಾಗಿರುವ ಕುರಿತು ಹಲವರು ಹೆಮ್ಮೆಯ ಟ್ವೀಟ್ಗಳನ್ನು ಮಾಡುತ್ತಿದ್ದು, ‘ಭಾರತ ಮರೆಯುತ್ತಿರುವ ಉನ್ನತ ಸಂಸ್ಕೃತಿಯನ್ನು ಜಗತ್ತು ಈಗ ಗುರುತಿಸುತ್ತಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ಯುವಕರಲ್ಲಿ ಉಪನಿಷತ್ ಕುರಿತು ಆಸಕ್ತಿ ಮೂಡಿಸಲು ಏನಾದರೂ ಮಾಡಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ.
ವೇದಗಳ ಕೊನೆಯ ಹಾಗೂ ನಾಲ್ಕನೆಯ ಭಾಗವನ್ನು ಉಪನಿಷತ್ತುಗಳು (ದೇವನಾಗರಿ ಲಿಪಿಯಲ್ಲಿ ಉಪನಿಷದ್) ಎಂದು ಕರೆಯಲಾಗುತ್ತದೆ. ಉಪನಿಷತ್ತಿನ ಹೆಚ್ಚಿನ ಭಾಗಗಳು ಗುರು ಶಿಷ್ಯರ ಸಂವಾದ ರೂಪದಲ್ಲಿವೆ. ಉಪನಿಷತ್ ಪದದ ಅರ್ಥವನ್ನು ಸರಳವಾಗಿ ಹೇಳುವುದಾದರೆ, ಗುರುವಿನ ಬಳಿ ಕುಳಿತು ಕೇಳಿಸಿಕೊಳ್ಳುವುದು ಎನ್ನಬಹುದು.
ಇದನ್ನೂ ಓದಿ:
ಮನೆ ಕಟ್ಟಲೆಂದು ಸೈಟ್ ಕೊಳ್ಳುವಾಗ ಹುಷಾರ್! ಅನಧಿಕೃತ ಬಡಾವಣೆ ಸೃಷ್ಟಿಸಿ ಮಾರುವವರಿದ್ದಾರೆ ಎಚ್ಚರ
(Warsa University Library wall engraved by Upanishads in Poland picture goes viral)
Published On - 10:05 am, Sat, 7 August 21