ಅಮೆರಿಕದ ವಧು ಭಾರತೀಯ ವಧುವಿನ ಉಡುಗೆತೊಡುಗೆಯಲ್ಲಿ ಕಂಗೊಳಿಸಿದ ಆ ಕ್ಷಣಗಳು

| Updated By: ಶ್ರೀದೇವಿ ಕಳಸದ

Updated on: Nov 28, 2022 | 6:25 PM

Bride : ಮಗಳು ಹೀಗೆ ಭಾರತೀಯ ವಧುವಿನ ಉಡುಗೆ-ಅಲಂಕಾರದಲ್ಲಿ ಕಂಗೊಳಿಸಿದ್ದನ್ನು ನೋಡಿದ ಪೋಷಕರು ಅಚ್ಚರಿಗೆ ಒಳಗಾಗುತ್ತಾರೆ. ನೋಡಿ ಈ ಸುಂದರವಾದ ವಿಡಿಯೋ.

ಅಮೆರಿಕದ ವಧು ಭಾರತೀಯ ವಧುವಿನ ಉಡುಗೆತೊಡುಗೆಯಲ್ಲಿ ಕಂಗೊಳಿಸಿದ ಆ ಕ್ಷಣಗಳು
ಅಮೆರಿಕದ ವಧು ಭಾರತೀಯ ವಧುವಿನ ಉಡುಗೆಯಲ್ಲಿ ಕಂಗೊಳಿಸಿದಾಗ
Follow us on

Viral Video : ಭಾರತೀಯ ಸಂಸ್ಕೃತಿ, ಆಹಾರ, ಉಡುಗೆ ತೊಡುಗೆ, ಅಲಂಕಾರ ಎಲ್ಲವೂ ವಿದೇಶಿಗರನ್ನು ಬಹುವಾಗಿ ಸೆಳೆಯುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅಮೆರಿಕದ ವಧುವೊಬ್ಬಳು ಭಾರತೀಯ ವಧುವಿನಂತೆ ಉಡುಗೆ ತೊಟ್ಟು ಅಲಂಕರಿಸಿಕೊಂಡಿದ್ದಾಳೆ. ಹೀಗೆ ಈಕೆ ಅಲಂಕರಿಸಿಕೊಂಡು ಬಂದಾಗ ಈಕೆಯ ಪೋಷಕರಿಗೇ ಅಚ್ಚರಿಪಟ್ಟಿದ್ದಾರೆ. ಬಿಯಾನ್ನಾ ಲೋಝಡೋ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಧುವಿನ ಹೆಸರು ಹನ್ನಾ ರೋಜರ್ಸ್. ಕೆಂಪು ಲೆಹೆಂಗಾದಲ್ಲಿ ಈಕೆ ಬಹಳ ಸುಂದರವಾಗಿ ಕಂಗೊಳಿಸಿದ್ದಾಳೆ. ಹೀಗೆ ಅಲಂಕರಿಸಿಕೊಂಡು ಕೋಣೆಯಿಂದ ಹೊರಬರುತ್ತಿದ್ದಂತೆ ಆಕೆಯ ಕುಟುಂಬಸ್ಥರು ಅಚ್ಚರಿಯಿಂದ ಆಕೆಯನ್ನು ಬರಮಾಡಿಕೊಳ್ಳುತ್ತಾರೆ. ಎಲ್ಲರೂ ಅವಳನ್ನು ಸುತ್ತುವರಿದು ಅಪ್ಪಿಕೊಳ್ಳುತ್ತಾರೆ.

ಈ ವಿಡಿಯೋ ಅನ್ನು ಈತನಕ 7.1 ಮಿಲಿಯನ್​ ಜನರು ನೋಡಿದ್ದಾರೆ. ಇದಕ್ಕಿಂತ ಸುಂದರವಾದ ವಿಡಿಯೋ ಈ ದಿನ ನಾ ನೋಡಲೇ ಇಲ್ಲ ಎಂದಿದ್ದಾರೆ ಅನೇಕರು. ಭಾರತೀಯ ಸಂಸ್ಕೃತಿಯ ಸೊಬಗು ಇನ್ನೆಲ್ಲಿಯೂ ಇಲ್ಲ ಎಂದಿದ್ದಾರೆ ಕೆಲವರು. ಹೌದು ಅದಕ್ಕೇ ವಿದೇಶಿಗರು ನಮ್ಮ ಸಂಸ್ಕತಿಯನ್ನು ಅನುಸರಿಸುತ್ತಾರೆ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:24 pm, Mon, 28 November 22