ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ನವೆಂಬರ್ 05 ರಂದು ನಡೆದಿದೆ. ರಿಪಬ್ಲಿಕನ್ ಪಾರ್ಟಿಯ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಈ ಇಬ್ಬರು ಅಭ್ಯರ್ಥಿಗಳ ಪೈಕಿ ಯಾರು ಗೆಲ್ಲುತ್ತಾರೆ ಎಂದು ಇಡೀ ವಿಶ್ವವೇ ಎದುರು ನೋಡುತ್ತಿದೆ. ಅಮೆರಿಕದ ಬಿರುಸಿನ ಚುನಾವಣೆಯ ನಡುವೆಯೇ ಅಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಚುನಾವಣೆಯಲ್ಲಿ ತನ್ನ ಭಾವಿ ಪತಿ ಮತದಾನ ಮಾಡಿಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥವನ್ನು ಮುರಿಯಲು ಮುಂದಾಗಿದ್ದಾಳೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಏನೇನೋ ಕಾರಣಗಳಿಗೆ ಮದುವೆ, ನಿಶ್ಚಿತಾರ್ಥಗಳು ಮುರಿದು ಬಿದ್ದಿದ್ದುಂಟು. ಅದೇ ರೀತಿ ಇಲ್ಲೊಂದು ನಿಶ್ಚಿತಾರ್ಥ ಚುನಾವಣೆಯ ಕಾರಣದಿಂದ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಹೌದು ನಿನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾವಿ ಪತಿ ಮತದಾನ ಮಾಡಲು ನಿರಾಕರಿಸಿ ಅಸಡ್ಡೆ ತೋರಿದ ಪರಿಣಾಮ ಅಮೆರಿಕದ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥವನ್ನೇ ಮುರಿಯಲು ಮುಂದಾಗಿದ್ದಾಳೆ. ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದ ಪ್ಲಾಟ್‌ಫಾರ್ಮ್ ರೆಡ್ಡಿಡ್‌ನಲ್ಲಿ ಹಂಚಿಕೊಳ್ಳಲಾಗಿದೆ.
“ನಾನು ಫ್ಲೋರಿಡಾದಲ್ಲಿ ವಾಸಿಸುತ್ತಿರುವ ಯುವತಿಯಾಗಿದ್ದು, ನನ್ನ ಭಾವಿ ಪತಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ತಿರಸ್ಕರಿಸಿದ ಕಾರಣ ನಾನು ಆತನೊಂದಿಗಿನ ನಿಶ್ಚಿತಾರ್ಥವನ್ನು ಮುರಿದುಕೊಳ್ಳಲು ಬಯಸುತ್ತಿದ್ದೇನೆ. ಆತನಿಗೆ ಎರಡೂ ಪಕ್ಷದ ಅಭ್ಯರ್ಥಿಗಳು ಇಷ್ಟವಿಲ್ಲದ ಕಾರಣ ಆತ ಮತದಾನ ಮಾಡಲು ಒಪ್ಪಲಿಲ್ಲ. ಇದರಿಂದ ನಾನು ನೈತಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇನೆ. ಅವನು ಏನಾದರೂ ಮತದಾನ ಮಾಡದೇ ಹೋದರೆ ಖಂಡಿತವಾಗಿಯೂ ನಾನು ನಿಶ್ಚಿತಾರ್ಥವನ್ನು ಮುರಿದುಕೊಳ್ಳುತ್ತೇನೆ” ಎಂದು ಸುದೀರ್ಘ ಬರಹವನ್ನು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ: ಭಾರತದ ರಾಜಕೀಯ ನಾಯಕರುಗಳಾಗಿ ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್; AI ಫೋಟೋ ವೈರಲ್
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮತದಾನ ಮಾಡುವುದು ಬಿಡಿವುದು ಆತನ ವೈಯಕ್ತಿಕ ನಿರ್ಧಾರ. ಇದಕ್ಕಾಗಿ ನೀವು ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಅವಶ್ಯಕತೆ ಇಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಮ್ಮಿಬ್ಬರು ಈ ಮೌಲ್ಯಗಳು ಹೊಂದಾಣಿಕೆ ಆಗದಿದ್ದರೆ ನೀವು ಬ್ರೇಕಪ್ ಮಾಡಿಕೊಳ್ಳುವುದೇ ಸರಿʼ ಎಂದು ಹೇಳಿದ್ದಾರೆ. ಹೀಗೆ ಕೆಲವರು ಯುವತಿಯ ನಿರ್ಧಾರವನ್ನು ಬೆಂಬಲಿಸಿದರೆ ಇನ್ನೂ ಕೆಲವರು ಮತದಾನ ವೈಯಕ್ತಿಯ ಆಯ್ಕೆಯಾಗಿದೆ ಮತ್ತು ಅದು ಸಂಬಂಧದ ಮೇಲೆ ಪರಿಣಾಮವನ್ನು ಬೀರಬಾರದು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ