AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕಂದಮ್ಮಗಳ ರಕ್ಷಣೆಗೆ ಸಿಂಹಿಣಿಯೊಂದಿಗೆ ಘೋರ ಯುದ್ಧಕ್ಕೆ ಇಳಿದ ತಾಯಿ ಚಿರತೆ; ವಿಡಿಯೋ ವೈರಲ್‌

ತಾಯಿ ತನ್ನ ಮಕ್ಕಳ ರಕ್ಷಣೆಗಾಗಿ ತನ್ನ ಪ್ರಾಣವನ್ನು ಬೇಕಾದರೂ ಅರ್ಪಿಸಲು ಸಿದ್ಧಳಿರುತ್ತಾಳೆ. ತಾಯಿಯ ಪ್ರೀತಿ, ಮಮತೆ, ತ್ಯಾಗಕ್ಕೆ ಸಂಬಂಧಿಸಿದ ಇಂತಹ ಭಾವನಾತ್ಮಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತಾಯಿ ಹುಲಿಯೊಂದು ತನ್ನ ಪ್ರಾಣ ಹೋದರೂ ಸರಿ, ತನ್ನ ಕಂದಮ್ಮಗಳನ್ನು ನಾನು ರಕ್ಷಿಸುತ್ತೇನೆ ಎಂದು ಪಣ ತೊಟ್ಟು ದೈತ್ಯ ಸಿಂಹಿಣಿಯೊಂದಿಗೆ ಕಾದಾಡಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಮಾಲಾಶ್ರೀ ಅಂಚನ್​
| Edited By: |

Updated on: Nov 06, 2024 | 2:38 PM

Share

ತನ್ನ ಕರುಳ ಕುಡಿಯ ರಕ್ಷಣೆಗಾಗಿ ತಾಯಿಯಾದವಳು ಏನು ಬೇಕಾದರೂ ಮಾಡಬಲ್ಲಳು. ಹೀಗೆ ಮನುಷ್ಯರಿಗಿಂತ ಮೂಕ ಪ್ರಾಣಿ-ಪಕ್ಷಿಗಳ ಮಾತೃ ವಾತ್ಸಲ್ಯ, ತಾಯಿಯ ಮಮಕಾರ, ಪ್ರೀತಿ, ತ್ಯಾಗ ಭಿನ್ನವಲ್ಲ. ಮನುಷ್ಯರಂತೆ ಮೂಕ ಜೀವಿಗಳು ಸಹ ತಮ್ಮ ಕರುಳ ಕುಡಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಬೇಕಾದರೂ ತ್ಯಾಗ ಮಾಡುತ್ತವೆ. ಮೂಕ ಜೀವಿಗಳು ಸಹ ತಮ್ಮ ಜೀವದ ಹಂಗು ತೊರೆದು ತಮ್ಮ ಕಂದಮ್ಮಗಳನ್ನು ರಕ್ಷಿಸಿದ ಅನೇಕ ಉದಾಹಣೆಗಳಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ತಾಯಿ ಹುಲಿಯೊಂದು ತನ್ನ ಪ್ರಾಣ ಹೋದರೂ ಸರಿ, ತನ್ನ ಕಂದಮ್ಮಗಳನ್ನು ನಾನು ರಕ್ಷಿಸುತ್ತೇನೆ ಎಂದು ಪಣ ತೊಟ್ಟು ದೈತ್ಯ ಸಿಂಹಿಣಿಯೊಂದಿಗೆ ಕಾದಾಡಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಸಿಂಹಿಣಿಯೊಂದು ತನ್ನ ಬಳಿ ಬರುತ್ತಿರುವುದನ್ನು ಗಮನಿಸಿದ ತಾಯಿ ಹುಲಿಯೊಂದು ಈ ಪ್ರಾಣಿ ತನ್ನ ಕಂದಮ್ಮಗಳಿಗೆ ತೊಂದರೆ ಕೊಟ್ಟರೆ ಏನು ಮಾಡುವುದು ಎಂಬ ಭಯದಿಂದ ಮರಿಗಳನ್ನು ರಕ್ಷಿಸಲು ಸಿಂಹಿಣಿಯೊಂದಿಗೆ ಕಾದಾಡಿದೆ. ಇಲ್ಲಿಗೆ ಸಫಾರಿಗೆ ಬಂದಿದ್ದಂತಹ ದಂಪತಿಗಳಿಬ್ಬರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋವನ್ನು Latest Sightings ಎಂಬ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “ಮರಿಗಳನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಮುಂದಾದ ತಾಯಿ ಚಿರತೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಚಿರತೆ ತನ್ನ ಮರಿಗಳನ್ನು ರಕ್ಷಿಸಲು ಸಿಂಹಿಣಿಯೊಂದಿಗೆ ಕಾದಾಡುತ್ತಿರುವ ದೃಶ್ಯವನ್ನು ಕಾಣಬಹುದು. ತಮ್ಮ ಸಮೀಪಕ್ಕೆ ಬರುತ್ತಿದ್ದ ಸಿಂಹಿಣಿಯನ್ನು ಕಂಡ ತಾಯಿ ಚಿರತೆ, ಈ ಪ್ರಾಣಿ ಏನಾದರೂ ನನ್ನ ಕಂದಮ್ಮಗಳಿಗೆ ತೊಂದರೆ ಕೊಟ್ಟರೆ ಏನು ಮಾಡೋದು ಎಂದು ಯೋಚಿಸಿ, ತನ್ನ ಪ್ರಾಣ ಹೋದರೂ ಪರವಾಗಿಲ್ಲ ಆದ್ರೆ ನಾನು ನನ್ನ ಮಕ್ಕಳನ್ನು ರಕ್ಷಿಸುತ್ತೇನೆ ಎಂದು ಪಣ ತೊಟ್ಟು ಸಿಂಹಿಣಿ ಹತ್ತಿರ ಬಂದಾಗ ತಾಯಿ ಹುಲಿ ಅದರ ಮೇಲೆ ಎಗರಿ ಫೈಟ್‌ ಮಾಡಿ, ಕೊನೆಗೆ ತಾನು ಓಡಿ ಹೋಗುವ ಮೂಲಕ ತನ್ನ ಮರಿಗಳಿರುವ ಸ್ಥಳದಿಂದ ಸಿಂಹವನ್ನು ಹೋಗುವಂತೆ ಮಾಡಿದೆ.

ಇದನ್ನೂ ಓದಿ: ಮದುವೆಯಾಗುವ ಹುಡುಗ ಮತದಾನ ಮಾಡಲ್ಲ ಎಂದು ಹೇಳಿದ್ದಕ್ಕೆ ನಿಶ್ಚಿತಾರ್ಥ ಬೇಡ ಎಂದ ಯುವತಿ

ಎರಡು ವಾರಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 21 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅದ್ಭುತವಾದ ದೃಶ್ಯ, ತಾಯಿ ಚಿರತೆ ಸಿಂಹದೊಂದಿಗೆ ಕಾದಾಡುವ ಮೂಲಕ ಅದರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾಯಿಯ ಪ್ರೀತಿಗೆ ಸರಿಸಾಟಿ ಯಾವುದೀ ಇಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮರಿಗಳನ್ನು ರಕ್ಷಿಸಲು ತಾಯಿ ಚಿರತೆ ಹೋರಾಡಿದ ರೀತಿ ತುಂಬಾ ಇಷ್ಟವಾಯಿತುʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?