Viral Post : ಪಶ್ಚಿಮ ಕ್ಯಾಲಿಫೋರ್ನಿಯಾದ ಅಧಿಕಾರಿಗಳಿಗೆ ತುರ್ತು ಕರೆ ಹೋಗಿದೆ. ಎಷ್ಟೊತ್ತಾದರೂ ಆ ಕಡೆಯಿಂದ ಧ್ವನಿ ಕೇಳಿಲ್ಲ. ಪಾಪ ಯಾರು ಎಂಥ ತುರ್ತುಪರಿಸ್ಥಿತಿಯಲ್ಲಿದ್ದಾರೋ ಎಂದು ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ. ಬಂದ ಕರೆಯ ಮೂಲವನ್ನು ಪತ್ತೆ ಹಚ್ಚಲು ತೊಡಗಿದ್ದಾರೆ. ನಂತರ ಲಾಸ್ ಏಂಜಲೀಸ್‌ನಿಂದ 320 ಕಿ.ಮೀ ದೂರದಲ್ಲಿರುವ ಸಂರಕ್ಷಣಾ ಉದ್ಯಾನವನದಿಂದ ಈ ಕರೆ ಬಂದಿರುವುದೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಯಾವ ಮನುಷ್ಯ ತೊಂದರೆಯಲ್ಲಿದ್ಧಾನೆ, ಇಲ್ಲಿ ಕರೆ ಮಾಡಿರುವುದು ಯಾರು ಎಂಬುದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಆದರೂ ಇದನ್ನು ಇಷ್ಟಕ್ಕೇ ಬಿಡದೆ ರಹಸ್ಯವನ್ನು ಕಂಡುಹಿಡಿಯಬೇಕೆಂದು ನಿರ್ಧರಿಸಿ ತನಿಖೆ ಮುಂದುವರಿಸಿದ್ದಾರೆ.
ಕರೆ ಮಾಡಿರುವುದು ಮನುಷ್ಯನಲ್ಲ, ಮನುಷ್ಯನ ಪೂರ್ವಜರು ಎಂದು ತಿಳಿದು ಬಂದಿದೆ. ಕೋತಿಯ ಕಿಡಿಗೇಡಿತನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳು ಪೋಸ್ಟ್ ಮಾಡಿದ್ಧಾರೆ.
More fun than a barrel of monkeys. Local monkey calls the Sheriff’s Office. You heard that right. https://t.co/bG8fanV9y5 pic.twitter.com/wwvFmVq0gY
— SLO County Sheriff (@SLOSheriff) August 15, 2022
ಈ ಕೋತಿಗಳು ಜಿಜ್ಞಾಸು ಮನೋಭಾವದವು. ಒಂದೊಂದು ವಸ್ತುಗಳನ್ನು ಕುತೂಹಲದಿಂದ ಮುಟ್ಟುವುದು, ಒತ್ತುವುದನ್ನೆಲ್ಲ ಮಾಡುತ್ತ ಆನಂದಿಸುತ್ತವೆ. ಅಕಸ್ಮಾತ್ ಆಗಿ ನಂಬರ್ ಒತ್ತಿದಾಗ ಅದು ಪೊಲೀಸರಿಗೆ ಹೋಗಿದೆ. ಪಾಪ ಯಾರೋ ತುರ್ತು ಪರಿಸ್ಥಿತಿಯಲ್ಲಿದ್ದಾರೆಂದು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇಷ್ಟೇ ನಡೆದಿದ್ದು. ಆದರೆ ಮೂರು ದಿನಗಳ ಕಾಲ ಪೊಲೀಸರ ತಲೆಕೆಡಿಸಿದ ಈ ಕೋತಿ!?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:40 am, Thu, 18 August 22