Viral Video: ಆ್ಯಮ್ ಐ ರೈಟ್? ಕುಂಟಾಬಿಲ್ಲೆಯಾಡುತ್ತಿರುವ ಈ ಅಜ್ಜ!

HopScotch : ಅಬ್ಬಬ್ಬಾ ಎಂದರೆ ನೀವು ಹತ್ತು ಹನ್ನೆರಡು ವರ್ಷದ ತನಕ ಕುಂಟಾಬಿಲ್ಲೆ ಆಡಿರುತ್ತೀರಿ. ಈ ಅಜ್ಜನ ಆಟವನ್ನು ನೋಡಿ ಈ ವಿಡಿಯೋದಲ್ಲಿ.

Viral Video: ಆ್ಯಮ್ ಐ ರೈಟ್? ಕುಂಟಾಬಿಲ್ಲೆಯಾಡುತ್ತಿರುವ ಈ ಅಜ್ಜ!
ಅ್ಯಮ್ ಐ ರೈಟ್?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 17, 2022 | 5:15 PM

Viral Video : ಸಾಕಪ್ಪಾ ಈ ಜೀವನ ಎಂದೆನ್ನಿಸುತ್ತಿದೆಯಾ? ಏನು ಮಾಡಿದರೂ ಉತ್ಸಾಹವೇ ಹೊಮ್ಮುತ್ತಿಲ್ಲವಾ? ಹಾಗಿದ್ದರೆ ಇಲ್ಲಿರುವ ವಿಡಿಯೋ ನೋಡಿ. ವಯಸ್ಸಾದ ಅಜ್ಜನೊಬ್ಬ ಕುಂಟಾಬಿಲ್ಲೆಯಾಡುತ್ತಿದ್ದಾನೆ. ಅದೂ ಕೋಲಿನಾಸರೆ ಪಡೆಯುವಂಥ ಹಣ್ಣುಹಣ್ಣಾದ ಈ ವಯಸ್ಸಿನಲ್ಲಿ. ಈ ವಿಡಿಯೋ 20,000 ವೀಕ್ಷಣೆ ಹೊಂದಿದೆ. ಆರನೂರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಈ ವಯಸ್ಸಿನಲ್ಲಿ ಅವರು ಇಷ್ಟು ರಿಸ್ಕ್​ ತೆಗೆದುಕೊಳ್ಳುತ್ತಾರೆಂದರೆ ಅವರ ಜೀವನ ಉತ್ಸಾಹ ನಮಗೆಲ್ಲ ಮಾದರಿಯೇ ಸೈ! ನೋಡಿ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರು ಶಭಾಷ್ ಎಂದಿದ್ದಾರೆ ಈ ಅಜ್ಜನಿಗೆ. ಕುಂಟಿದಾಗೆಲ್ಲ ಅವರ ಮುಖದಲ್ಲಿ ನಗು ಇದೆ ಸ್ವಲ್ಪೂ ಪ್ರಯಾಸವಿಲ್ಲ ಎಂಬುದು ಗಮನಾರ್ಹ ಅಂಶ. ಗುಡ್​ ನ್ಯೂಸ್​ ಕರಸ್ಪಾಂಡೆಂಟ್ ಎಂಬ ಟ್ವಿಟರ್ ಖಾತೆದಾರರು ಈ ಪೋಸ್ಟ್​ ಹಂಚಿಕೊಂಡಿದ್ಧಾರೆ.

 ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:11 pm, Wed, 17 August 22