AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹಿಂಗೂ ಲವ್  ಬ್ರೇಕಪ್ ಆಗುತ್ತಾ? ಬಾಯ್​​​ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಬ್ರೇಕಪ್ 

ಪ್ರೇಮಿಗಳ ನಡುವೆ ಅನೇಕ ಕಾರಣಗಳಿಂದ  ಬ್ರೇಕಪ್ ಆಗುತ್ತವೆ. ಕೆಲವೊಬ್ಬರು ಮನೆಯಲ್ಲಿ ಮದುವೆಗೆ ಸಮ್ಮತಿ ಸೂಚಿಸಲ್ಲ  ಎಂಬ ಕಾರಣಕ್ಕೆ ಲವ್ ಬ್ರೇಕಪ್ ಮಾಡಿಕೊಂಡರೆ, ಇನ್ನೂ ಕೆಲವರು  ಕೆಲವು ಮನಸ್ತಾಪಗಳ ಕಾರಣದಿಂದಾಗಿ  ಲವ್ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಬಾಯ್​​​ಫ್ರೆಂಡ್  ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾಳೆ. ಈಕೆಯ ಸ್ಟೋರಿಯನ್ನು ಕೇಳಿ,  ಹಿಂಗೂ ಬ್ರೇಕಪ್ ಆಗುತ್ತಾ ಅಂತ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. 

Viral: ಹಿಂಗೂ ಲವ್  ಬ್ರೇಕಪ್ ಆಗುತ್ತಾ? ಬಾಯ್​​​ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಬ್ರೇಕಪ್ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 18, 2023 | 5:05 PM

ಈ ಪ್ರೇಮಿಗಳ ನಡುವೆ ಬ್ರೇಕಪ್ ಪ್ಯಾಚಪ್ ಇದ್ದಿದ್ದೇ. ಅನೇಕ ಕಾರಣಗಳಿಂದ ಪ್ರೇಮಿಗಳು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಬ್ಬರು ತಮ್ಮ ನಡುವಿನ ಸಣ್ಣಪುಟ್ಟ ಮನಸ್ತಾಪಗಳ ಕಾರಣದಿಂದಾಗಿ ಬ್ರೇಕಪ್ ಮಾಡಿಕೊಂಡರೆ, ಕೆಲವೊಬ್ಬರು ಮನೆಯವರು ಮದುವೆಗೆ ಸಮ್ಮತಿ ಸೂಚಿಸುವುದಿಲ್ಲ ಎಂಬ ಕಾರಣಕ್ಕೆ ಬ್ರೇಕಪ್ ಮಾಡಿಕೊಳ್ಳುತ್ತಾರೆ.  ಹೀಗೆ ಹಲವು ರೀತಿಯ ಬ್ರೇಕಪ್ ಸ್ಟೋರಿಗಳನ್ನು ನಾವು ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಬ್ರೇಕಪ್ ಸ್ಟೋರಿ ನಡೆದಿದೆ.   ಹೌದು ಮಹಿಳೆಯೊಬ್ಬಳು ತನ್ನ ಬಾಯ್​​​ಫ್ರೆಂಡ್  ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾಳೆ.  ನಮ್ಮಲ್ಲಿ ಮಲ ಮೂತ್ರ ವಿಸರ್ಜನೆಯ ನಂತರ ಸ್ವಚ್ಛತೆಗಾಗಿ ನೀರನ್ನು ಬಳಸಿದರೆ, ವಿದೇಶಗಳಲ್ಲಿ ಟಾಯ್ಲೆಟ್ ಪೇಪರ್ ಬಳಸುತ್ತಾರೆ. ಹೀಗೆ ಸ್ವಚ್ಛತೆಗಾಗಿ  ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಈ ಮಹಿಳೆ ತನ್ನ ಬಾಯ್​​​ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ.

ಈ ವಿಚಿತ್ರ  ಘಟನೆ ನಡೆದಿದ್ದು ಅಮೇರಿಕಾದ ಫ್ಲೋರಿಡಾದಲ್ಲಿ. ಫ್ಲೋರಿಡಾದ ಟ್ಯಾಂಪಾ ನಗರದ ನಿವಾಸಿಯಾದ  ಅಲೆಕ್ಸಾಂಡ್ರಾ ಮಾರಿಯಾ ಕ್ಲಾರಾ ಎಂಬಾಕೆ ತನ್ನ ಬಾಯ್ಫ್ರೆಂಡ್ ಟಾಯ್ಲೆಟ್ ಪೇಪರ್ ಬಳಸುವುದಿಲ್ಲ ಎಂಬ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಕುರಿತ ಸ್ಟೋರಿಯನ್ನು  ಸ್ವತಃ ಆಕೆ ತನ್ನ ಟಿಕ್ಟಾಕ್ ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಕ್ಲಿಪ್ 900,000 ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಆಕೆ ವಿಡಿಯೋದಲ್ಲಿ ಹೇಳಿರುವಂತೆ, ಒಮ್ಮೆ ಆಕೆ  ತನ್ನ ಬಾಯ್​​​ಫ್ರೆಂಡ್ ಮನೆಗೆ ಭೇಟಿ ನೀಡಿದಾಗ, ವಾಶ್ರೂಮ್ ಅಲ್ಲಿ ಟಾಯ್ಲೆಟ್ ಪೇಪರ್ ಇಲ್ಲದಿರುವುದನ್ನು ಗಮನಿಸುತ್ತಾಳೆ. ಅದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಆಕೆ, ಬಹುಶಃ ಟಾಯ್ಲೆಟ್ ಪೇಪರ್ ಖಾಲಿಯಾಗಿರಬೇಕು ಎಂದು ಭಾವಿಸುತ್ತಾಳೆ. ಆದರೆ ಎರಡನೇ ಬಾರಿ ಮನೆಗೆ ಭೇಟಿ ನೀಡಿದಾಗಲೂ ಶೌಚಾಲಯದಲ್ಲಿ ಟಾಯ್ಲೆಟ್ ಪೇಪರ್ ಇರಲಿಲ್ಲ, ಆಕೆ ತನ್ನ ಬಾಯ್​​​ಫ್ರೆಂಡ್  ಬಳಿ ವಿಚಾರಿಸಿದಾಗ, ಟಾಯ್ಲೆಟ್ ಪೇಪರ್ ತರಲು ಮರೆತು ಹೋಗಿದ್ದೇನೆ ಎಂದು ಆತ ಹೇಳುತ್ತಾನೆ.  ಆದರೆ  ಒಂದು ಬಾರಿ ಇವರಿಬ್ಬರು ಸೂಪರ್ ಮಾರ್ಕೆಟ್​​​ಗೆ ಹೋದಾಗ  ಕ್ಲಾರಾಳ ಬಾಯ್​​​ಫ್ರೆಂಡ್  ಟಾಯ್ಲೆಟ್ ಪೇಪರ್ ಬಳಸುವುದಿಲ್ಲ ಎಂಬ ಸತ್ಯ ಅವಳಿಗೆ ತಿಳಿಯುತ್ತದೆ.

ಇದನ್ನೂ ಓದಿ: ಹಾವಿಗೆ ಸ್ನಾನ ಮಾಡ್ಸೋ ಕೆಲಸ ಖಾಲಿ ಇದ್ಯಂತೆ, ನೀವೇನಾದ್ರೂ ಹೋಗ್ತೀರಾ?   

ಹೌದು ಕ್ಲಾರಾ ಸೂಪರ್ ಮಾರ್ಕೆಟ್ ಒಂದರಲ್ಲಿ ಆಕೆಯ ಬಾಯ್ಫ್ರೆಂಡ್ ಬಳಿ ಟಾಯ್ಲೆಟ್ ಪೇಪರ್ ಖರೀದಿಸಲು ಹೇಳುತ್ತಾಳೆ. ಆದರೆ ಆತ  ಈಗ ಖರೀದಿಸುವುದು ಬೇಡ ಎನ್ನುತ್ತಾನೆ. ಕ್ಲಾರಾ ಪುನಃ ಪುನಃ ಒತ್ತಾಯಿಸುತ್ತಾಳೆ, ಆ ಸಂದರ್ಭದಲ್ಲಿ ಆತ ನಾನು ಶೌಚಾಲಯಕ್ಕೆ ಹೋದಾಗ ಟಾಯ್ಲೆಟ್ ಪೇಪರ್ ಬಳಸುವುದಿಲ್ಲ, ಬದಲಿಗೆ ನಾನು  ಸ್ವಚ್ಛತೆಗಾಗಿ ಒದ್ದೆ ಬಟ್ಟೆಯನ್ನು ಬಳಸುತ್ತೇನೆ ಎಂದು  ಹೇಳುತ್ತಾನೆ. ಇದರಿಂದ ಗಾಬರಿಗೊಂಡ ಕ್ಲಾರಾ, ಬಾಯ್​​​ಫ್ರೆಂಡ್​​ಗಾಗಿ ಸ್ವತಃ ಆಕೆಯೇ ಟಾಯ್ಲೆಟ್ ಪೇಪರ್ ಅನ್ನು ಖರೀದಿಸುತ್ತಾಳೆ.  ಈ ಕುರಿತ ವಿಡಿಯೋವೊಂದನ್ನು ಆಕೆ ತನ್ನ ಟಿಕ್ಟಾಕ್ ಅಲ್ಲಿ ಹಂಚಿಕೊಂಡಾಗ ಬಹುತೇಕ ಎಲ್ಲರೂ ಟಾಯ್ಲೆಟ್ ಪೇಪರ್ ಬಳಸಲ್ಲ ಎಂಬ ಕಾರಣಕ್ಕೆ ಕ್ಲಾರಾಳ ಪ್ರಿಯಕರನನ್ನು  ಅಪಹಾಸ್ಯ ಮಾಡಿದ್ದಾರೆ, ಇದರಿಂದ ಮುಜುಗರಕ್ಕೊಳಗಾದ ಆಕೆ ತನ್ನ ಬಾಯ್​​​ಫ್ರೆಂಡ್  ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದಾಳೆ.  ಈ ವಿಚಿತ್ರ ಬ್ರೇಕಪ್ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Published On - 5:03 pm, Mon, 18 December 23

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್