Viral Video: ಚಲಿಸುತ್ತಿರುವ ಕಾರಿನ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಮೋಜುಮಸ್ತಿಯಲ್ಲಿರುವ ಯುವಕರು

ನಾಲ್ಕು ಯುವಕರು ವೇಗವಾಗಿ ಚಲಿಸುತ್ತಿರುವ ಕಾರಿನ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಸಖತ್​​ ಆಗಿ ಡಾನ್ಸ್​​​ ಮಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.ಯುವಕರ ಅಪಾಯಕಾರಿ ಕೃತ್ಯಗಳನ್ನು ಹಿಂದಿನಿಂದ ಬರುತ್ತಿದ್ದ ವಾಹನ ಚಾಲಕ ವಿಡಿಯೋ ಸೆರೆಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದ್ದು, ಪೊಲೀಸರು ಈ ನಾಲ್ಕು ಯುವಕರನ್ನು ಬಂಧಿಸಿದ್ದಾರೆ.

Viral Video: ಚಲಿಸುತ್ತಿರುವ ಕಾರಿನ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಮೋಜುಮಸ್ತಿಯಲ್ಲಿರುವ ಯುವಕರು
Viral Video
Follow us
ಅಕ್ಷತಾ ವರ್ಕಾಡಿ
|

Updated on:Dec 19, 2023 | 12:19 PM

ಬೆಂಗಳೂರು: ಇತ್ತೀಚೆಗಷ್ಟೇ ಚಲಿಸುತ್ತಿರುವ ಕಾರಿನ ಸನ್​​ರೂಫ್​ನಿಂದ ಹೊರಬಂದು ನಡುರಸ್ತೆಯಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ಲಿಪ್​​ಲಾಕ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗಾ ಅಂತದ್ದೇ ಮತ್ತೊಂದು ವಿಡಿಯೋ ಸಖತ್​​ ಸುದ್ದಿಯಲ್ಲಿದೆ. ಇಲ್ಲಿ ನಾಲ್ಕು ಯುವಕರು ಕಾರಿನ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಸಖತ್​​ ಆಗಿ ಡಾನ್ಸ್​​​ ಮಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.  ಏರ್‌ಪೋರ್ಟ್ ರಸ್ತೆ ಎಂದೂ ಕರೆಯಲ್ಪಡುವ ಎನ್‌ಎಚ್ 7 ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹೆದ್ದಾರಿಯಲ್ಲಿ  ವಾಹನ ದಟ್ಟನೆಯಿದ್ದರೂ ಸಹ ತಮ್ಮ ಜಾಲಿಮೂಡ್​ನನಲ್ಲೇ ಬ್ಯುಸಿಯಾಗಿರುವ ಯುವಕರ ಅಪಾಯಕಾರಿ ಕೃತ್ಯಗಳನ್ನು ಹಿಂದಿನಿಂದ ಬರುತ್ತಿದ್ದ ವಾಹನ ಚಾಲಕ ವಿಡಿಯೋ ಸೆರೆಹಿಡಿದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದ್ದು, ಪೊಲೀಸರು ಈ ನಾಲ್ಕು ಯುವಕರನ್ನು ಬಂಧಿಸಿದ್ದಾರೆ.

ವಿಡಿಯೋದಲ್ಲಿ ಸಾಕಷ್ಟು ಸಂಚಾರ ದಟ್ಟಣೆಯ ನಡುವೆಯೂ ಯುವಕರು ಜಾಲಿಮೂಡ್​ನನಲ್ಲಿ ಸನ್‌ರೂಫ್ ಮತ್ತು ಕಿಟಕಿಯಿಂದ ಹೊರಬಂದು ಡಾನ್ಸ್​​​ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @nabilajamal_ ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರಿನ ಕಿಟಕಿಗಳು ಮತ್ತು ಸನ್‌ರೂಫ್ ಹೊರಗೆ 4 ಹುಡುಗರ ವರ್ತನೆ ಹಾಗೂ ನಿರ್ಲಕ್ಷ್ಯದ ಬಗ್ಗೆ ವೀಡಿಯೊಗೆ ಕ್ಯಾಪ್ಷನ್​​ ಬರೆಯಲಾಗಿದೆ.

ಇದನ್ನೂ ಓದಿ:  3000 ವರ್ಷಗಳಷ್ಟು ಹಳೆಯದಾದ ವಿಗ್ರಹದಲ್ಲಿ QR ಕೋಡ್ ಪತ್ತೆ; ಫೋಟೋ ವೈರಲ್​​

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ನಾಲ್ಕು ಯುವಕರ ವಿರುದ್ದ ಕೇಸು ದಾಖಲಾಗಿದೆ.ಸೆಕ್ಷನ್ 184,279, ಹಾಗೂ 283ರ ಅಡಿಯಲ್ಲಿ ಕಾರುಚಾಲಕ ಸಲ್ಮಾನ್ ಫಾರಿಸ್ (23), ಆತನ ಸ್ನೇಹಿತರಾದ ನಾಸಿಮ್ ಅಬ್ಬಾಸ್ (21), ಸಲ್ಮಾನುಲ್ ಫಾರಿಸ್ (20), ಮತ್ತು ಕೇರಳದ ಮೊಹಮ್ಮದ್ ನುಸೈಫ್ (21) ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:19 pm, Tue, 19 December 23