Viral: ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿ, ಪರಾರಿಯಾದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿ ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಒಂದಷ್ಟು ಮಕ್ಕಳು ಅಪಾರ್ಟ್‌ಮೆಂಟ್‌ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾರು ಚಲಾಯಿಸುತ್ತಾ ಬಂದ ಮಹಿಳೆಯೊಬ್ಬಳು, ಅಲ್ಲಿದ್ದ 5 ವರ್ಷ ವಯಸ್ಸಿನ ಬಾಲಕನ ಮೇಲೆ ಕಾರು ಹರಿಸಿದ್ದಾಳೆ. ಅಷ್ಟೇ ಅಲ್ಲದೆ ಬಾಲಕನ ಸಹಾಯಕ್ಕೆ ಹೋಗುವ ಬದಲು ಆಕೆ ಕಾರ್‌ ಸಮೇತ ಎಸ್ಕೇಪ್‌ ಆಗಿದ್ದಾಳೆ. ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿ, ಪರಾರಿಯಾದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ವೈರಲ್​ ವಿಡಿಯೋ
Edited By:

Updated on: Feb 27, 2025 | 3:04 PM

ಗಾಜಿಯಾಬಾದ್‌, ಫೆ.27: ವಾಹನ ಸವಾರರ ಅಜಾಗರೂಕತೆ, ಕಳಪೆಮಟ್ಟದ ರಸ್ತೆ ಹೀಗೆ ಒಂದಷ್ಟು ಕಾರಣಗಳಿಂದ ರಸ್ತೆ ಅಪಘಾತಗಳು (Accidents) ಸಂಭವಿಸುತ್ತಿವೆ. ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತು ಹಲವು ಅಪಘಾತ ಪ್ರಕರಣಗಳ ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್‌ ಆವರಣದಲ್ಲಿ ಒಂದಷ್ಟು ಮಕ್ಕಳು ಜೊತೆ ಸೇರಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾ ಬಂದ ಮಹಿಳೆಯೊಬ್ಬಳು 5 ವರ್ಷ ವಯಸ್ಸಿನ ಬಾಲಕನ ಮೇಲೆ ಕಾರು ಹರಿಸಿದ್ದಾಳೆ. ಅಷ್ಟೇ ಅಲ್ಲದೆ ಬಾಲಕನ ಸಹಾಯಕ್ಕೆ ಹೋಗುವ ಬದಲು ಆಕೆ ಕಾರ್‌ ಸಮೇತ ಎಸ್ಕೇಪ್‌ ಆಗಿದ್ದಾಳೆ. ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯೊಬ್ಬಳು 5 ವರ್ಷದ ಮಗುವಿನ ಮೇಲೆ ಕಾರು ಹರಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ. ಫೆಬ್ರವರಿ 24 ರಂದು ಸಂಜೆ 4.30 ರ ಸುಮಾರಿಗೆ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಒಂದಷ್ಟು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ಮಹಿಳೆ, ಸೀದಾ ಬಂದು ಪುಟ್ಟ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾಳೆ. ದುರಾದೃಷ್ಟಕರ ಸಂಗತಿಯೆಂದರೆ ಗಾಯಗೊಂಡ ಬಾಲಕನ ಸಹಾಯಕ್ಕೆ ಬಾರದೆ ಆಕೆ ಅಲ್ಲಿಂದ ಕಾರು ಸಮೇತ ಪರಾರಿಯಾಗಿದ್ದಾಳೆ. .

ಇದನ್ನೂ ಓದಿ
ಪ್ರೇಮಿಗಳ ದಿನದಂದು ಗಂಡ ಕೊಟ್ಟ ಪೋಷೆ ಕಾರು ಬೇಡ ಎಂದ ಪತ್ನಿ
1500 ರೂ. ಪತ್ರದೊಂದಿಗೆ ಕದ್ದ ಬೈಕನ್ನು ಮಾಲೀಕನಿಗೆ ವಾಪಸ್‌ ನೀಡಿದ ವ್ಯಕ್ತಿ
ಪಾಕ್​ ಎದುರು ಭಾರತದ ಜಯವನ್ನು ಸಂಭ್ರಮಿಸುತ್ತಾ ಮದುವೆಯಾದ ಜೋಡಿ
ಕಿಟಕಿಯಿಂದ ರೈಲಿನೊಳಗಿದ್ದ ಪ್ರಯಾಣಿಕರ ಮೇಲೆ ನೀರೆರಚಿದ ಯುವಕ

ಈ ಘಟನೆಯ ಬಳಿಕ ಮಗುವಿನ ತಂದೆ ನಂದಗ್ರಾಮ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರನ್ನು ದಾಖಲಿಸಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಬಲ ತೊಡೆಯ ಮೂಳೆ ಮುರಿತ ಸೇರಿದಂತೆ ಅಪಘಾತಕ್ಕೆ ತುತ್ತಾದ ಮಗುವಿಗೆ ಒಂದಷ್ಟು ಗಂಭೀರ ಗಾಯಗಳಾಗಿವೆ. ಪ್ರಸ್ತುತ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಮೇಲೆ ಕಾರು ಹರಿಸಿದ ಮಹಿಳೆಯ ಮೇಲೆ ಸೆಕ್ಷನ್‌ 281 ಮತ್ತು 125 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕನೊಬ್ಬನಿಗೆ ಕಾರ್‌ ಡಿಕ್ಕಿ ಹೊಡೆದಂತಹ ಆಘಾತಕಾರಿ ದೃಶ್ಯವನ್ನು ಕಾಣಬಹುದು. ಕಾರು ಬಾಲಕನ ಮೇಲೆಯೇ ಹರಿದು ಹೋಗಿದ್ದು, ಕಾರು ಚಲಾಯಿಸುತ್ತಿದ್ದ ಮಹಿಳೆ ಗಾಯಗೊಂಡ ಮಗುವಿನ ಸಹಾಯಕ್ಕೂ ಬಾರದೆ ಅಲ್ಲಿಂದ ತಕ್ಷಣ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ಗಂಡ ಕೊಟ್ಟ ಪೋಷೆ ಕಾರು ಬೇಡ ಎಂದ ಪತ್ನಿ, ಕಾರಿನ ಗತಿ ಏನಾಯ್ತು ನೋಡಿ

ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಅಜಾಗರೂಕತೆಯಿಂದ ವಾಹನ ಚಲಾಯಿಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಡ್ರೈವಿಂಗ್‌ ವಿಷಯದಲ್ಲಿ ಇನ್ನೊಬ್ಬರ ಜೀವನದ ಜೊತೆ ಆಟವಾಡಬೇಡಿʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಕೆಯ ವಿರುದ್ಧ ಕ್ರಮ ಕೈಗೊಂಡು, ಶಿಕ್ಷೆ ವಿಧಿಸಿʼ ಎಂದು ಕೇಳಿಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ