ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಇಂದು ಅತ್ಯಂತ ಅಚ್ಚರಿಯ ಘಟನೆ ನಡೆದಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣವೊಂದರಲ್ಲಿ ವ್ಯಕ್ತಿಯೋರ್ವ ದಾರಿಯಲ್ಲಿ ಹೋಗುವವರಿಗೆಲ್ಲ ಕಚ್ಚುವ ಮೂಲಕ ಆತಂಕ ಸೃಷ್ಟಿಸಿದ್ದಾನೆ. ಆತನನ್ನು ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಹಿಡಿದು ನಿಯಂತ್ರಣಕ್ಕೆ ತರಲಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ಆತನನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಆ ವ್ಯಕ್ತಿಯನ್ನು ಹಗ್ಗ ಬಳಸಿ ಹಿಡಿದು ಕಟ್ಟಿಹಾಕಲಾಯಿತು.
ಈ ವ್ಯಕ್ತಿ ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದ ಕಾರಣ ಸುತ್ತಮುತ್ತಲಿನ ಜನರನ್ನು ಕಚ್ಚುತ್ತಿದ್ದ ಎಂದು ಸ್ಥಳೀಯರು ಮತ್ತು ಪೊಲೀಸರು ಶಂಕಿಸಿದ್ದಾರೆ. ಹೈಡ್ರೋಫೋಬಿಯಾ ಎನ್ನುವುದು ಲಸಿಕೆ ಹಾಕದ ಬೀದಿನಾಯಿಯು ಹಸಿ ಮಾಂಸವನ್ನು ತಿನ್ನಲು ಬಳಸುವ ಮಾನವನನ್ನು ಕಚ್ಚಿದಾಗ ಉಂಟಾಗುವ ಕಾಯಿಲೆ ಅಥವಾ ಅಸ್ವಸ್ಥತೆಯಾಗಿದೆ. ಆದರೆ, ಆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕರೆದೊಯ್ದ ಆಸ್ಪತ್ರೆಯು ಆತ ನ್ಯೂರೋಸೈಕೋಸಿಸ್‌ನಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಗಿದೆ. ಆತನನ್ನು ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: Shocking News: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ನಾಯಿಯಿಂದ ಈ ಹಿಂದೆ ಕಚ್ಚಿಸಿಕೊಂಡಿದ್ದ ಯುವಕ ಜನರನ್ನೆಲ್ಲ ಕಚ್ಚುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ವ್ಯಕ್ತಿಯನ್ನು ಕೆಟ್ಟ ಸ್ಥಿತಿಯಲ್ಲಿ ತೋರಿಸುತ್ತದೆ. ಆ ವ್ಯಕ್ತಿಯನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ನಿರ್ದಿಷ್ಟ ಘಟನೆಯು ಮುಜಾಫರ್‌ನಗರದಲ್ಲಿ ಮನುಷ್ಯ-ಪ್ರಾಣಿ ಸಂಘರ್ಷವನ್ನು ಎತ್ತಿ ತೋರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಮುಜಾಫರ್‌ನಗರದ ಸ್ಥಳೀಯ ವ್ಯಕ್ತಿಯೊಬ್ಬರು ಬೀದಿ ನಾಯಿ ಕಚ್ಚಿ ಸಾವನ್ನಪ್ಪಿದ್ದರು.
मुज़फ्फरनगर के छपार थाना इलाके के बसेड़ा गांव में बंधक बना युवक कोई बदमाश नहीं है। इसका कसूर यह है की वह रात के अँधेरे में अपनी महबूबा से मिलने उसके घर पहुंच गया। गांव के लोग जाग गए और प्रेमी को बंधक बनाकर पीटा गया।#UttarPradesh
पूछताछ की वीडियो वायरल है। pic.twitter.com/wVqnHWfokW
— TRUE STORY (@TrueStoryUP) September 3, 2024
ಸ್ಥಳೀಯರ ಪ್ರಕಾರ, ಮುಜಾಫರ್‌ನಗರದಲ್ಲಿ ಬೀದಿ ನಾಯಿಗಳು ಮತ್ತು ಮಂಗಗಳು ಜನರ ಮೇಲೆ ದಾಳಿ ಮಾಡಿದ ಹಲವಾರು ನಿದರ್ಶನಗಳು ಇತ್ತೀಚೆಗೆ ನಡೆದಿವೆ. ಇಂತಹ ದಾಳಿಗಳು ಜೀವಹಾನಿಗೂ ಕಾರಣವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ