ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಭೀಕರ ಘಟನೆ ನಡೆದಿದೆ. ಬರೇಲಿಯ ನವಾಬ್‌ಗಂಜ್ ತಹಸಿಲ್‌ನಲ್ಲಿ ಇಬ್ಬರು ಗೃಹ ರಕ್ಷಕರು ದಲಿತ ವಾಚ್‌ಮ್ಯಾನ್ ನನ್ನು ತೀವ್ರವಾಗಿ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಗಳು ವಾಚ್‌ಮ್ಯಾನ್ಗೆ ತಮ್ಮ ಬೂಟಿನಿಂದ ಒದ್ದು ಥಳಿಸಿದ್ದಾರೆ. ಇದೀಗ ವಾಚ್‌ಮ್ಯಾನ್ ದೂರಿನ ಮೇರೆಗೆ ನವಾಬ್‌ಗಂಜ್ ಕೊತ್ವಾಲಿಯ ಇಬ್ಬರೂ ಗೃಹರಕ್ಷಕರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಹಿತಿ ಪ್ರಕಾರ, ಬರೇಲಿಯ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಗ್ರಾಮದ ವೀರೇಂದ್ರ ಕುಮಾರ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ವೀರೇಂದ್ರಕುಮಾರ್ ತಮ್ಮ ಜಮೀನು ಪತ್ರಕ್ಕಾಗಿ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಆದರೆ ಅಲ್ಲಿದ್ದ ಗೃಹರಕ್ಷಕರು ವೀರೇಂದ್ರಕುಮಾರ್ ಅವರನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ. ಉಚಿತ ಪಡಿತರ ತೆಗೆದುಕೊಳ್ಳುತ್ತಿರುವವರು ಸರಕಾರಕ್ಕೆ ಮತ ಹಾಕುತ್ತಿಲ್ಲ ಎಂದು ವ್ಯಂಗ್ಯವಾಗಿ ನಿಂದಿಸಿದರು. ವೀರೇಂದ್ರ ಜೊತೆ ಇಬ್ಬರು ಹೋಂ ಗಾರ್ಡ್‌ಗಳಾದ ವೀರ್ ಬಹದ್ದೂರ್ ಮತ್ತು ರಾಂಪಾಲ್ಕಿ ಜಗಳವಾಡಿದ್ದಾರೆ. ಈ ಜಗಳದಲ್ಲಿ ಗೃಹರಕ್ಷಕರಿಬ್ಬರೂ ವೀರೇಂದ್ರ ಜತೆ ವಾಗ್ವಾದಕ್ಕಿಳಿದ್ದಾರೆ. ಗೃಹರಕ್ಷಕ ದಳದ ಸಿಬ್ಬಂದಿಗಳು ಥಳಿಸುತ್ತಿರುವುದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇಬ್ಬರು ಗೃಹರಕ್ಷಕರ ವಿರುದ್ಧ ದಲಿತ ವ್ಯಕ್ತಿ ವೀರೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.
ये वीडियो देखिए, कितना भयावह है !
यूपी के बरेली में दो होमगार्ड वीर बहादुर और रामपाल एक दलित चौकीदार वीरेंद्र कुमार को जमीन पर गिराकर बंदूक की नोंक से मार रहे हैं
मारते हुए कह रहे हैं कि, फ्री का राशन सरकार से लेते हो और वोट भी नहीं देते हो ! pic.twitter.com/BysdWIgoMG
— Nigar Parveen (@NigarNawab) May 14, 2024
ಇದನ್ನೂ ಓದಿ: ಆಸ್ಟ್ರೇಲಿಯಾದ ಬೀದಿಗಳಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆದಾಡುತ್ತಿರುವ ಜನರು; ಏನಿದು ಹೊಸ ಟ್ರೆಂಡ್
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ಇಬ್ಬರು ಗೃಹರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಬಗ್ಗೆ ಆರೋಪಿ ಗೃಹರಕ್ಷಕರನ್ನು ವಿಚಾರಣೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ