ಇಂದಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಕೆಲವರು ಸಣ್ಣಪುಟ್ಟ ಕಾರಣಗಳಿಗೆ ಬ್ರೇಕಪ್ ಮಾಡಿಕೊಂಡರೆ, ಇನ್ನೂ ಕೆಲವರು ಸಂಗಾತಿಗೆ ಮೋಸ ಮಾಡಿ ಇನ್ನೊಬ್ಬರ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ತಾನು 8 ವರ್ಷಗಳ ಕಾಲ ಪ್ರೀತಿಸಿದ ಯುವತಿಗೆ ಮೋಸ ಮಾಡಿ ಇನ್ನೊಬ್ಬಳ ಜೊತೆ ಮದುವೆ ಮಾಡಿಕೊಳ್ಳಲು ತಯಾರಾಗಿದ್ದು, ಈತನ ಮೋಸದಾಟದಿಂದ ಬೇಸತ್ತು ಗೆಳತಿ ಆತನ ಜನನಾಂಗವನ್ನೇ ಚಾಕುವಿನಿಂದ ಕತ್ತರಿಸಿ ಸೇಡು ತೀರಿಸಿಕೊಂಡಿದ್ದಾಳೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದ್ದು, ಯುವತಿಯೊಬ್ಬಳು ಗೆಳೆಯನ ಜನನಾಂಗವನ್ನು ಕತ್ತರಿಸಿ ಅದೇ ಚಾಕುವಿನಿಂದ ತನ್ನ ಕೈ ಕೊಯ್ದುಕೊಂಡು ತನಗೆ ತಾನೇ ಹಾನಿ ಮಾಡಲು ಯತ್ನಿಸಿದ್ದಾಳೆ.
ವರದಿಗಳ ಪ್ರಕಾರ, ಇಲ್ಲಿನ ಯುವಕನೊಬ್ಬ ತಾನು 8 ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಗೆ ಮೋಸ ಮಾಡಿ ಬೇರೆಯವಳನ್ನು ಮದುವೆಯಾಗಲು ಯೋಜನೆ ನಡೆಸಿದ್ದ. ಈ ವಿಷಯ ತಿಳಿದ ಗೆಳತಿ ಆತನನ್ನು ಮಾತನಾಡಬೇಕೆಂದು ಕರೆಸಿಕೊಂಡು, ಕಾರಿನಲ್ಲಿಯೇ ಕುಳಿತು ಗಂಟೆಗಟ್ಟಲೆ ಹೊತ್ತು ಮಾತನಾಡಿ, ಕೊನೆಗೆ ಏಕಾಏಕಿ ಚಾಕು ತೆಗೆದು ಆತನ ಜನನಾಂಗವನ್ನು ಕತ್ತರಿಸಿದ್ದಾಳೆ. ಅಷ್ಟೇ ಅಲ್ಲದೆ ಅದೇ ಚಾಕುವಿನಿಂದ ಆಕೆ ತನ್ನ ಕೈ ಕೊಯ್ದುಕೊಂಡಿದ್ದಾಳೆ. ಘಟನೆಯ ಬಳಿಕ ಭಾನುವಾರ (ಡಿ.22) ಸಂಜೆ ಪೊಲೀಸರು 21 ವರ್ಷ ವಯಸ್ಸಿನ ಆ ಯುವತಿಯನ್ನು ಬಂಧಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This Lady was having a love affair with a young man for 8 years. Madam got the news that the boyfriend wants to marry another girl, Called to meet. They were in the car for several hours. Suddenly Madam took out a knife and Chooped-off the lover’s private part pic.twitter.com/PNgcmVacyx
— Ghar Ke Kalesh (@gharkekalesh) December 23, 2024
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಗೆಳೆಯನ ಜನನಾಂಗವನ್ನು ಕತ್ತರಿಸಿದ ಯುವತಿಯನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ದುಬೈನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಮೊಹಮ್ಮದ್ ಶಮಿ-ಸಾನಿಯಾ ಮಿರ್ಜಾ?
ಡಿಸೆಂಬರ್ 23 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 6.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರೀತಿಸಿ ಮೋಸ ಮಾಡುವ ಎಲ್ಲರಿಗೂ ಇದೇ ಶಿಕ್ಷೆ ಕೊಡಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಸಮಾಜದಲ್ಲಿ ಇದೇನು ನಡೆಯುತ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:18 am, Tue, 24 December 24