Viral: ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧನ ಮುಖಕ್ಕೆ ನಡುರಸ್ತೆಯಲ್ಲಿಯೇ ಫೋಮ್​​​​ ಸ್ಪ್ರೇ ಮಾಡಿ ಹುಚ್ಚಾಟ ಮೆರೆದ ಯುವಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 24, 2024 | 2:01 PM

ಈಗೀಗ ಪ್ರಾಂಕ್‌ ಮಾಡಿ ಅಥವಾ ಇತರರಿಗೆ ತೊಂದರೆ ಕೊಟ್ಟು ಆ ತಮಾಷೆಯ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುವವರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಸೈಕಲ್‌ನಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ವೃದ್ಧರೊಬ್ಬರ ಹಿಂದಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಆ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಎರಚಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Viral: ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧನ ಮುಖಕ್ಕೆ ನಡುರಸ್ತೆಯಲ್ಲಿಯೇ ಫೋಮ್​​​​ ಸ್ಪ್ರೇ ಮಾಡಿ ಹುಚ್ಚಾಟ ಮೆರೆದ ಯುವಕ
ವೈರಲ್​​ ವಿಡಿಯೋ
Follow us on

ಇತ್ತೀಚಿಗಂತೂ ರೀಲ್ಸ್‌, ವ್ಲಾಗ್ಸ್‌ ಕ್ರೇಜ್‌ ಬಹಳನೇ ಹೆಚ್ಚಾಗಿದೆ. ಅದರಲ್ಲೂ ಕೆಲವರಂತೂ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗುವ ಸಲುವಾಗಿ ಇತರರಿಗೆ ಪ್ರಾಂಕ್‌ ಮಾಡುವಂತಹ ಅಥವಾ ಇತರರಿಗೆ ತೊಂದರೆ ಕೊಟ್ಟು ಮಜಾ ತೆಗೆದುಕೊಳ್ಳುವಂತಹ ಹುಚ್ಚಾಟದ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದು, ಹೈವೇ ರಸ್ತೆಯಲ್ಲಿ ಸೈಕಲ್‌ನಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ವೃದ್ಧರೊಬ್ಬರ ಹಿಂದಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ನಡು ರಸ್ತೆಯಲ್ಲಿಯೇ ಆ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಎರಚಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಂಡು ಸರಿಯಾಗಿ ಸನ್ಮಾನ ಮಾಡಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಝಾನ್ಸಿ ನಗರದಲ್ಲಿ ನಡೆದಿದ್ದು, ಯುವಕನೊಬ್ಬ ರೀಲ್ಸ್‌ ವಿಡಿಯೋ ಮಾಡುವ ಸಲುವಾಗಿ ರಸ್ತೆಯಲ್ಲಿ ಸೈಕಲ್‌ ತುಳಿಯುತ್ತಾ ಹೋಗುತ್ತಿದ್ದ ಅಮಾಯಕ ವ್ಯಕ್ತಿಯ ಮೇಲೆ ಬಿಳಿ ಬಣ್ಣದ ಸ್ಪ್ರೇ ಎರಚಿ ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ತಕ್ಷಣ ಕಾರ್ಯನಿರತರಾದ ಝಾನ್ಸಿ ಪೊಲೀಸರು ಆ ಯುವಕನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿನಯ್‌ ಯಾದವ್‌ ಎಂದು ಗುರುತಿಸಲಾಗಿದೆ. ಇದೇ ರೀತಿಯ ಹುಚ್ಚಾಟದ ವಿಡಿಯೋಗಳನ್ನು ಹರಿಬಿಡುವ ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಕೂಡಾ ಇದ್ದಾರೆ. ಇದೀಗ ತನ್ನ ಮಿತಿಮೀರಿತ ವರ್ತನೆಯಿಂದಲೇ ಪೊಲೀಸರ ಅತಿಥಿಯಾಗಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಹಿಮಾಂಶು ತ್ರಿಪಾಠಿ (himansulive) ಎಂಬವರು ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಓ ದೇವರೇ ನಾಗರೀಕತೆ, ಸಂಸ್ಕೃತಿ, ಮೌಲ್ಯಗಳು ಎಲ್ಲಿ ಹೋದವೋ ಗೊತ್ತಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಹೈವೇ ರಸ್ತೆಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಸೈಕಲ್‌ನಲ್ಲಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಅವರ ಹಿಂದೆಯೇ ಬೈಕ್‌ನಲ್ಲಿ ಬಂದ ಯುವಕನೊಬ್ಬ ರೀಲ್ಸ್‌ ಮಾಡುವ ಸಲುವಾಗಿ ಆ ಅಮಾಯಕ ವ್ಯಕ್ತಿಯ ಮುಖಕ್ಕೆ ಸ್ಪ್ರೆ ಎರಚಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೂಕಳಂ ಗಲಾಟೆ: ಮಕ್ಕಳು ಮುದ್ದಾಗಿ ಬಿಡಿಸಿದ ಹೂವಿನ ರಂಗೋಲಿ ಹಾಳು ಮಾಡಿದ ಮಹಿಳೆ

ವಿಡಿಯೋ:

ಸೆಪ್ಟೆಂಬರ್‌ 22 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೊಲೆ ಯತ್ನದ ಕೇಸ್‌ ಅಡಿಯಲ್ಲಿ ಈತನನ್ನು ಒದ್ದು ಒಳಗೆ ಹಾಕಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಕೆಟ್ಟ ಮನಸ್ಥಿತಿಯ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ