Video: ರಾಂಗ್ ರೂಟ್​​​ನಲ್ಲಿ ಬಂದು ಬೈಕ್​​​ಗೆ ಡಿಕ್ಕಿ ಹೊಡೆದ ಕಾರು, ಭಯಾನಕ ವಿಡಿಯೋ ವೈರಲ್

ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ. ಹೌದು, ಅವಸರವಾಗಿ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತರುವವರೇ ಹೆಚ್ಚು. ಇದೀಗ ಅಂತಹದ್ದೇ ಅಪಘಾತಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ವಿರುದ್ದ ದಿಕ್ಕಿನಲ್ಲಿ ಬಂದ ಕಾರು ಚಾಲಕನೊಬ್ಬನು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಮೈ ಜುಮ್ ಎನಿಸುವ ಈ ಅಪಘಾತದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ರಾಂಗ್ ರೂಟ್​​​ನಲ್ಲಿ ಬಂದು  ಬೈಕ್​​​ಗೆ ಡಿಕ್ಕಿ ಹೊಡೆದ ಕಾರು, ಭಯಾನಕ  ವಿಡಿಯೋ ವೈರಲ್
ವೈರಲ್ ವಿಡಿಯೋ
Image Credit source: Twitter

Updated on: May 22, 2025 | 2:18 PM

ವಡೋದರಾ, ಮೇ 22: ಅವಸರವೇ ಅಪಘಾತ (accident) ಕ್ಕೆ ಕಾರಣ ಎನ್ನುವ ಮಾತಿದೆ. ಆದರೆ ಕೆಲವರು ವಾಹನ ಕೈಗೆ ಸಿಕ್ಕೊಡನೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವೇಗವಾಗಿ ವಾಹನ ಓಡಿಸುತ್ತಾರೆ. ಅದಲ್ಲದೇ, ಅತೀ ವೇಗವಾಗಿ ವಾಹನ ಓಡಿಸಿ ಅಪಘಾತಗಳಾಗಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಇದೀಗ ಗುಜರಾತಿ (Gujarat) ನ ವಡೋದರಾದ ಗೆಂಡಾ ವೃತ್ತ (Genda Circle of Vadodara) ದ ಬಳಿ ಭೀಕರ ಅಪಘಾತವೊಂದು ಸಂಭವಿಸಿದೆ. ರೆಡ್ ಸಿಗ್ನಲ್ ದಾಟಿ ಮುಂದೆ ಸಾಗುತ್ತಿದ್ದ ಬೈಕ್ ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

@My Vadodara ಹೆಸರಿನ ಎಕ್ಸ್ ಖಾತೆಯಲ್ಲಿ ಈ ಅಪಘಾತದ ವಿಡಿಯೋ  ಶೇರ್ ಮಾಡಿಕೊಳ್ಳಲಾಗಿದೆ . ಈ ವಿಡಿಯೋದಲ್ಲಿ ಬೈಕ್ ಸವಾರನೊಬ್ಬನು ರೆಡ್ ಸಿಗ್ನಲ್ ಜಂಪ್ ಮಾಡಿ ಮುಂದಕ್ಕೆ ಹೋಗುತ್ತಿದ್ದಂತೆ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಹಾಗೂ ಆತನ ತಾಯಿ ಮೇಲಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಸ್ಥಳೀಯರು ಓಡೋಡಿ ಬರುತ್ತಿರುವುದನ್ನು ಕಾಣಬಹುದು. ಅಪಘಾತದಲ್ಲಿ ಇಬ್ಬರಿಗೂ ಕೂಡ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ
ಕೆಲಸಕ್ಕೆ ಮನುಷ್ಯರನ್ನು ಇಂಟರ್​​​ವ್ಯೂ ಮಾಡುತ್ತಿವೆ ಯಂತ್ರಗಳು...
ಇನ್ಮುಂದೆ ಬೆಂಗಳೂರಿನ ರಸ್ತೆಯಲ್ಲಿ ಓಡಾಡಲಿದೆ ಟೈಟಾನಿಕ್​​​​ ಹಡಗು
ಲಾರಿಗೆಡಿಕ್ಕಿ ಹೊಡೆದ ಕಾರು, ಮೂವರು ಸಾವು
ಈ ಮನೆಯಲ್ಲಿ ಹಾವುಗಳದ್ದೇ ರಾಶಿ, ವಿಡಿಯೋ ವೈರಲ್

ಇದನ್ನೂ ಓದಿ :Video: ಮೂವರ ಪಾಲಿಗೆ ಯಮನಾದ ಕಾರು, ಲಾರಿಗೆ ಡಿಕ್ಕಿ ಹೊಡೆದ ಕಾರು, ಮೂರು ಸಾವು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಎಂಭತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಾಮೆಂಟ್ ಗಳು ಹರಿದು ಬಂದಿದೆ. ಬಳಕೆದಾರರೊಬ್ಬರು, ಕಾರಿನ ವೇಗ ಕಡಿಮೆಯಿಲ್ಲ ಎಂದೇನಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ಭಾರತೀಯ ಸಂಚಾರ ಕಾನೂನುಗಳಲ್ಲಿ ರುವ ದೊಡ್ಡ ಸಮಸ್ಯೆ ಏನೆಂದರೆ ತಪ್ಪು ಯಾರದ್ದು ಎಂದು ನೋಡುವುದಿಲ್ಲ. ದೊಡ್ಡ ವಾಹನ ಗಳು ಯಾರ ಬಳಿಯಿವೆ ಎಂಬುದನ್ನು ನೋಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾರು ಮಾಲೀಕರ ಮೇಲೆಯೇ ಆರೋಪ ಹೊರಿಸಲಾಗುತ್ತದೆ. ಕಾರು ಮಾಲೀಕರು ಹಾಗೂ ದ್ವಿಚಕ್ರ ವಾಹನ ಚಾಲಕನ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:06 pm, Thu, 22 May 25