ಪೆನ್ಸಿಲ್‌ನ ತುದಿಯಲ್ಲಿ ರಾಮನ ಕಲಾಕೃತಿ ಕೆತ್ತಿ ಶ್ರೀರಾಮ ನವಮಿಯ ಶುಭಾಶಯ ಕೋರಿದ ಕಲಾವಿದ

ಇದೀಗಾಗಲೇ ಹಲವು ಸಂದರ್ಭಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿ ವೆಂಕಟೇಶ್ ಅವರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾರೆ. ಇದೀಗಾ ಶ್ರೀರಾಮ ನವಮಿಯಂದು ಶ್ರೀರಾಮನ ರೂಪವನ್ನು ಕೆತ್ತನೆ ಮಾಡಿ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳನ್ನು ಕೋರಿದ್ದಾರೆ.

ಪೆನ್ಸಿಲ್‌ನ ತುದಿಯಲ್ಲಿ ರಾಮನ ಕಲಾಕೃತಿ ಕೆತ್ತಿ ಶ್ರೀರಾಮ ನವಮಿಯ ಶುಭಾಶಯ ಕೋರಿದ ಕಲಾವಿದ
Follow us
ಅಕ್ಷತಾ ವರ್ಕಾಡಿ
|

Updated on: Apr 17, 2024 | 2:44 PM

ಅಮೆರಿಕದಲ್ಲಿ ನೆಲೆಸಿರುವ ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದ ಚಿಕಣಿ ಕಲಾವಿದ  ವೆಂಕಟೇಶ್ ಅವರು ಪೆನ್ಸಿಲ್‌ನ ತುದಿಯಲ್ಲಿ ಶ್ರೀರಾಮನ ಶಿಲ್ಪ ಕೆತ್ತಿದ್ದಾರೆ. ಪೆನ್ಸಿಲ್​​ನ ತುದಿಯಲ್ಲಿ ಚಿಕ್ಕ ಆಕಾರದಲ್ಲಿ ಶ್ರೀರಾಮನ ಈ ಸುಂದರ ರೂಪವನ್ನು ತಯಾರಿಸಲು ವೆಂಕಟೇಶ್ ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿದ್ದಾರೆ. ಹಲವು ಸಂದರ್ಭಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿದ ವೆಂಕಟೇಶ್ ಅವರು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದಾರೆ. ಇದೀಗಾ ಶ್ರೀರಾಮ ನವಮಿಯಂದು ಶ್ರೀರಾಮನ ರೂಪವನ್ನು ಕೆತ್ತನೆ ಮಾಡಿ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳನ್ನು ಕೋರಿದ್ದಾರೆ.

ಗಟ್ಟೆಂ ವೆಂಕಟೇಶ್ ಮೂಲತಃ ಕಟ್ಟಡ ನಿರ್ಮಾಣ ತಜ್ಞರು. ಲಲಿತಕಲೆ ಅವರ ಉತ್ಸಾಹ. ವೆಂಕಟೇಶ್ ಅವರು ಪೆನ್ಸಿಲ್ ಶಾರ್ಪನರ್, ಸ್ಕ್ರ್ಯಾಪ್ ಪೇಪರ್, ಐಸ್ ಕ್ರೀಮ್ ಸ್ಕೂಪ್, ಸೋಪ್ ಬಾರ್, ಬೆಂಕಿಕಡ್ಡಿ, ಟೂತ್‌ಪಿಕ್‌ನಂತಹ ಚಿಕಣಿ ವಸ್ತುಗಳ ಮೇಲೆ ಹೆಸರು ಮತ್ತು ಕಲಾಕೃತಿಗಳನ್ನು ಕೆತ್ತಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. 500 ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿ, ನೂರಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಗನ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ ತಂದೆ

19ನೇ ವಯಸ್ಸಿನಲ್ಲಿ18 ಮಿಲಿಮೀಟರ್ ಉದ್ದದ ಅತ್ಯಂತ ಸೂಕ್ಷ್ಮವಾದ ಟೂತ್‌ಪಿಕ್‌ನಲ್ಲಿ ‘ದಿ ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಅನ್ನು ಕೆತ್ತಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು. ವೆಂಕಟೇಶ್ ಅವರ ಹುಟ್ಟೂರು ವಿಶಾಖಪಟ್ಟಣ ಜಿಲ್ಲೆಯ ನಕ್ಕಪಲ್ಲಿ ಮಂಡಲದ ಚಿನದೊಡ್ಡಿಗಲ್ಲು. ಆದರೆ ಇದೀಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕದಲ್ಲಿಯೂ ಸಹ, ಭಾರತದ 80 ಶಾಲೆಗಳಲ್ಲಿ 15,000 ವಿದ್ಯಾರ್ಥಿಗಳಿಗೆ ಲಲಿತಕಲೆಗಳಲ್ಲಿ ತರಬೇತಿ ನೀಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: