
ಪ್ರಕೃತಿಯಲ್ಲಿ ನಡೆಯುವಂತಹ ಕೆಲವು ವಿಷಯಗಳು ಎಷ್ಟು ವಿಚಿತ್ರವಾಗಿರುತ್ತದೆ ಎಂದರೆ ನಂಬುವುದಕ್ಕೆ ಕಷ್ಟವಾಗುತ್ತದೆ. ಮನುಷ್ಯ ಮಾತ್ರ ತನ್ನ ಮಕ್ಕಳನ್ನು ತನಗೆ ಬೇಕಾದಂತೆ ಬೆಳೆಸುತ್ತಾನೆ ಆದರೆ ನಮ್ಮ ಸುತ್ತಮುತ್ತಲಿನ ಜೀವರಾಶಿಗಳು ಅಂದರೆ ಪ್ರಾಣಿ, ಪಕ್ಷಿಗಳು ತಮಗೆ ಏನು ಬೇಕೋ ಅದನ್ನು ತಾವಾಗಿಯೇ ಕಲಿತುಕೊಳ್ಳುತ್ತದೆ. ನಮ್ಮ ಹಾಗೆ ಅವುಗಳಿಗೆ ತರಬೇತಿ ನೀಡಲು ಶಾಲೆ, ಮನೆ ಯಾವುದು ಇರುವುದಿಲ್ಲ ಆದರೂ ಕೂಡ ಅವು ಬದುಕುವುದನ್ನು, ತಾನೇ ಆಹಾರ ಹುಡುಕುವುದನ್ನ, ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಹೀಗೆ ಪ್ರತಿಯೊಂದನ್ನು ಹುಟ್ಟಿನಿಂದಲೇ ಕಲಿತು ಬಿಡುತ್ತದೆ. ಇದಕ್ಕೆ ಹೇಳೋದು ಪ್ರಕೃತಿಯ ವಿಸ್ಮಯದ ನಡುವೆ ನಾವು ಕಲಿಯುವುದು ತುಂಬಾ ಇದೆ. ಇದಕ್ಕೆ ಪೂರಕವೆಂಬಂತೆ ನೇಚರ್ ಈಸ್ ಅಮೇಜಿಂಗ್ (Nature is Amazing) ಎಂಬ X ಖಾತೆಯಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಪ್ರಕೃತಿಯ ವಿಸ್ಮಯ ಹೇಗಿರುತ್ತೆ ಎಂಬುದಕ್ಕೆ ಸಾಕ್ಷಿಯಾಗಿದೆ. ಮೊಸಳೆ ಮರಿಯೊಂದು (Baby Alligator’s Death Roll) ಮಾಂಸ ತಿನ್ನಲು ಯಾವ ರೀತಿ ತನ್ನ ಬುದ್ದಿವಂತಿಕೆ ಉಪಯೋಗಿಸಿದೆ ಎಂಬುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ನಿಮಗೆ ಗೊತ್ತಿರಬಹುದು, ಮೊಸಳೆ ಅಥವಾ ಹೆಬ್ಬಾವು ಅಥವಾ ದೊಡ್ಡ ದೊಡ್ಡ ಸರೀಸೃಪಗಳು ತಮ್ಮ ಬೇಟೆ ಹಿಡಿದ ಮೇಲೆ ತಿರುಗುತ್ತವೆ. ಇದು ಅವುಗಳ ತಂತ್ರಗಾರಿಕೆಯಾಗಿದ್ದು ಬೇಟೆಯಾಡಿದ ಜೀವವನ್ನು ಕೊಲ್ಲಲು ಅಥವಾ ಅದನ್ನು ಚಾಕಚಕ್ಯತೆಯಿಂದ ಬೇಟೆಯಾಡಲು ಅಥವಾ ಅದು ತಪ್ಪಿಸಿಕೊಳ್ಳದಿರಲು ಇದು ಸಹಾಯ ಮಾಡುತ್ತದೆ. ಅದೇ ರೀತಿ, ನೇಚರ್ ಈಸ್ ಅಮೇಜಿಂಗ್ ಎಂಬ X ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಕ್ಲಿಪ್ನಲ್ಲಿ ಮೊಸಳೆಯ ಚಿಕ್ಕ ಮರಿ ತನಗೆ ನೀಡಿರುವ ಮಾಂಸದ ತುಂಡನ್ನು ತಿನ್ನುವುದಕ್ಕೆ ಪಲ್ಟಿ ಹೊಡೆಯಲು ಆರಂಭ ಮಾಡುತ್ತದೆ. ಸರೀಸೃಪಗಳು ತಮ್ಮ ಬೇಟೆಯನ್ನು ತಿನ್ನಲು ಈ ರೀತಿ ಡೆತ್ ರೋಲ್ ಪ್ರದರ್ಶಿಸುತ್ತವೆ, ಆದರೆ ಇಷ್ಟು ಚಿಕ್ಕ ಮರಿ ಬೇಟೆಯಾಡಲು ಆ ರೀತಿ ಮಾಡಿದ್ದು ನೋಡಿ, ಯಾರೂ ಹೇಳಿಕೊಡದೆ ತನ್ನಿಂದ ತಾನಾಗಿಯೇ ಪ್ರಕೃತಿದತ್ತವಾಗಿ ಬಂದಿರುವ ಆ ಕಲೆಯನ್ನು ಜನ ಮೆಚ್ಚುಕೊಂಡಿದ್ದಾರೆ.
ಇದನ್ನೂ ಓದಿ: Video: ಹಾರಾಟದ ವೇಳೆ ಅಡ್ಡ ಸಿಕ್ಕ ಹಕ್ಕಿ; ಪ್ರಯಾಣಿಕರ ಪ್ರಾಣ ಉಳಿಸಲು ಪೈಲೆಟ್ ಸಾಹಸ ಹೇಗಿತ್ತು ನೋಡಿ!
This baby alligator just started doing the death roll… pic.twitter.com/BEeNFSn3sL
— Nature is Amazing ☘️ (@AMAZlNGNATURE) June 12, 2025
ಬಹಳ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 650,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಐಕಾನಿಕ್ ಡೆತ್ ರೋಲ್ ಪ್ರದರ್ಶಿಸಿದ ಮೊಸಳೆ ಮರಿಯ ನೈಪುಣ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಮರಿ ಮೊಸಳೆ ವಿಡಿಯೋ ನೋಡಿ ಆಶ್ಚರ್ಯವ್ಯಕ್ತ ಪಡಿಸಿದ್ದು ‘ಹುಟ್ಟಿನಿಂದಲೇ ಎಲ್ಲವನ್ನು ಕಲಿತುಕೊಂಡು ಬಂದಿರುವ ಹಾಗೆ ಕಾಣಿಸುತ್ತದೆ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅವುಗಳಿಗೆ ಹುಟ್ಟಿನಿಂದಲೇ ಅದನ್ನು ಹೇಗೆ ಮಾಡಬೇಕೆಂದು ತಿಳಿದಿರುತ್ತದೆ. ಪ್ರಕೃತಿ ವಯಸ್ಸಿಗೆ ಕಾಯುವುದಿಲ್ಲ ಮೊದಲ ದಿನದಿಂದಲೇ ಅವುಗಳ ವೃತ್ತಿ ಪ್ರಾರಂಭವಾಗುತ್ತದೆ’ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ