Viral Video : ಎಂಥಾ ಪರ್ಫೆಕ್ಟ್​ ರೇನ್​ಕೋಟ್​ ಗೊತ್ತಾ ಇದು?

Dog in Rain : ಮಳೆಗಾಲದಲ್ಲಿ ಮಗು ಶಾಲೆಯಿಂದ ರೇನ್​ಕೋಟ್ ಹಾಕಿಕೊಂಡು ಮನೆಗೆ ಓಡೋಡಿ ಬರುವಂತೆ ಕಾಣುತ್ತದೆಯಲ್ಲವಾ? 1.2 ಮಿಲಿಯನ್ ವೀಕ್ಷಣೆ ಪಡೆದಿದೆ ನಾಯಿಯ ಈ ವಿಡಿಯೋ.

Viral Video : ಎಂಥಾ ಪರ್ಫೆಕ್ಟ್​ ರೇನ್​ಕೋಟ್​ ಗೊತ್ತಾ ಇದು?
ಹೇಗಿದೆ ನನ್ನ ರೇನ್​ಕೋಟ್
Updated By: ಶ್ರೀದೇವಿ ಕಳಸದ

Updated on: Aug 30, 2022 | 9:58 AM

Viral Video : ಈ ವಿಡಿಯೋ ನಿಮ್ಮ ಮೂಡ್​ ಲಿಫ್ಟ್​ ಮಾಡುವುದರಲ್ಲಿ ಸಂಶಯವೇ ಇಲ್ಲ. ನಿನ್ನೆಯಷ್ಟೇ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಆದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆ ಪಡೆದಿದೆ. ಸಾವಿರಾರು ಕಮೆಂಟ್​ಗಳಲ್ಲಿ ನೆಟ್ಟಿಗರು ಇದನ್ನುಕೊಂಡಾಡಿದ್ದಾರೆ. ರೇನ್​ಕೋಟ್​ ಹಾಕಿಕೊಂಡು ಶಿಸ್ತಾಗಿ ಹೀಗೆ ಮಳೆಯಲ್ಲಿ ಓಡಾಡಿ ಮನೆಗೆ ಬರುವ ಇಂಥ ಮುದ್ದುನಾಯಿ ಯಾರಿಗೆ ತಾನೆ ಇಷ್ಟವಾಗಲ್ಲ? ಬೇರೆ ನಾಯಿಗಳಾಗಿದ್ದರೆ ಇಷ್ಟೊತ್ತಿಗೆ ರೇನ್​ಕೋಟ್​ ಅನ್ನು ತುಂಡುತುಂಡಾಗಿಸಿಬಿಡುವ ಸಾಧ್ಯತೆ ಇರುತ್ತಿತ್ತು. ಆದರೆ ಈ ನಾಯಿ ಹಾಗೆಲ್ಲ ಮಾಡುವಂಥದ್ದಲ್ಲ. ಪ್ರಾಣಿಗಳೂ ಮಕ್ಕಳ ಹಾಗೆಯೇ. ಹೇಗೆ ಬೆಳೆಸುತ್ತೇವೋ ಹಾಗೆ ಬೆಳೆಯುತ್ತವೆ.

ನನಗೆ ಇಂಥ ಮುದ್ದಾದ ನಾಯಿ ಬೇಕು ಎಂದು ಬಹಳಷ್ಟು ಜನ ಹೇಳಿದ್ದಾರೆ. ನನ್ನ ಮಕ್ಕಳಿಗೆ ಇಂಥ ನಾಯಿ ಬೇಕೇಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 9:51 am, Tue, 30 August 22