Viral Video: ‘ಹುಚ್ಚಪ್ಪಾ, ಯಾಕಷ್ಟು ಟೆನ್ಷನ್ ಮಾಡ್ಕೊಳ್ತೀ ಏನಾಗಲ್ಲ’ ಹೀಗೊಂದು ಆಪ್ತಕೋತಿ

Viral : ಇನ್ನೇನು ಜೀವನಾನೇ ಮುಗಿದು ಹೋಯ್ತು. ಏನೂ ದಾರಿಗಳೇ ಹೊಳೀತಿಲ್ಲ. ಬಹಳ ಬೇಜಾರಾಗ್ತಿದೆ ಅನ್ನಿಸಿದಾಗೆಲ್ಲ ಇವರಿಗೆ ಕಾಂಟ್ಯಾಕ್ಟ್ ಮಾಡಿ.

Viral Video: ‘ಹುಚ್ಚಪ್ಪಾ, ಯಾಕಷ್ಟು ಟೆನ್ಷನ್ ಮಾಡ್ಕೊಳ್ತೀ ಏನಾಗಲ್ಲ’ ಹೀಗೊಂದು ಆಪ್ತಕೋತಿ
ಬಾ ಇಲ್ಲಿ ಮಲ್ಕೋ ಸಮಾಧಾನ ಅನ್ಸತ್ತೆ
Edited By:

Updated on: Aug 08, 2022 | 12:17 PM

Viral : ಸಾಕುಪ್ರಾಣಿಗಳು ಬಹಳ ಸೂಕ್ಷ್ಮ. ತನ್ನನ್ನು ಸಾಕಿದವರ ಮೂಡ್​ ಸ್ವಲ್ಪ ಏರುಪೇರಾದರೂ ಸಾಕು ತಕ್ಷಣ ಅವುಗಳಿಗೆ ಗೊತ್ತಾಗಿಬಿಡುತ್ತದೆ. ಮತ್ತೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ಏನು ಕೊಡುತ್ತೇವೋ ಅದನ್ನು ಪಡೆಯುತ್ತೇವೆ ಎನ್ನುವುದನ್ನು ಪ್ರಾಣಿಗಳ ವಿಷಯದಲ್ಲಿಯೂ ಮರೆಯಬಾರದು. ಪ್ರೀತಿ, ಅಂತಃಕರಣ, ವಾತ್ಸಲ್ಯದಿಂದ ಪೋಷಿಸಿದ ಅವು ನಮ್ಮ ಮಕ್ಕಳಿಗಿಂತಲೂ ಹೆಚ್ಚು. ಮಕ್ಕಳು ಬೆಳೆಯುತ್ತ ಬೆಳೆಯುತ್ತ ಅವರ ಲೋಕದಲ್ಲಿ ಮುಳುಗಿಬಿಡಬಹುದು. ಅದರೆ ಪ್ರಾಣಿಗಳು ಹಾಗಲ್ಲ. ಅಷ್ಟೇ ನಿಷ್ಠೆ, ಅಷ್ಟೇ ಪ್ರೀತಿಯಿಂದ ಕೊನೆತನಕ ಜೊತೆಗಿರುತ್ತವೆ. ಇಲ್ಲಿರುವ ಈ ಕೋತಿಯ ವಿಡಿಯೋ ನೋಡಿ. ತನ್ನನ್ನು ಸಾಕಿದವರೊಂದಿಗೆ ಎಷ್ಟು ಅಂತಃಕರಣದಿಂದ ವರ್ತಿಸುತ್ತದೆ.

ತನಗೇನೋ ಸುಸ್ತಾಗುತ್ತಿದೆಯೋ, ಯಾವುದೋ ಟೆನ್ಷನ್​ನಲ್ಲಿ ಇದ್ದಂತೆಯೋ ಈತ ವರ್ತಿಸುತ್ತಾನೆ. ಅಮ್ಮನೋ, ಅಕ್ಕತಂಗಿಯೋ, ಸ್ನೇಹಿತರೋ ಪಕ್ಕದಲ್ಲಿದ್ದು ಸಾಂತ್ವನ ಹೇಳುವಂತೆ ಈ ಕೋತಿಯೂ ಅವನ ಭುಜ ತಟ್ಟಿ ಸಮಾಧಾನಿಸಿದೆ. ಬಾ ಇಲ್ಲಿ ಹಾಗೇ ಒಡಲಲ್ಲಿ ತಲೆಇಡು ಎಂದು ಹೇಳಿದೆ. ಭುಜ ತಟ್ಟಿ ಸಮಾಧಾನಿಸುತ್ತದೆ.

ಈ ವಿಡಿಯೂ 3.3 ಮಿಲಿಯನ್ ವೀಕ್ಷಣೆ ಹೊಂದಿದೆ. 44,000 ಲೈಕ್ಸ್​ ಹೊಂದಿದೆ. ನೆಟ್ಟಿಗರು ಈ ಕೋತಿಯ ಭಾವನಾತ್ಮಕ ಸ್ಪಂದನೆಯ ಬಗ್ಗೆ ಬಹುವಾಗಿ ಮೆಚ್ಚಿದ್ದಾರೆ. ನಿಮ್ಮ ಮನೆಯಲ್ಲಿಯೂ ಇಂಥದೊಂದು ಕೋತಿ ಬೇಕೆ? ಯೋಚಿಸಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 12:15 pm, Mon, 8 August 22