Viral: ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಬೆಡಗಿಯರು; ವಿಡಿಯೋ ವೈರಲ್
ಇತ್ತೀಚಿಗಷ್ಟೆ ಯುವತಿಯೊಬ್ಬಳು ಟವೆಲ್ ಸುತ್ತಿಕೊಂಡು ಇಂಡಿಯಾ ಗೇಟ್ ಬಳಿ ನೃತ್ಯ ಮಾಡಿದಂತಹ ಸುದ್ದಿಯೊಂದು ಭಾರೀ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮೂವರು ಯುವತಿಯರು ಬರೀ ಬಾತ್ ಟವೆಲ್ ಸುತ್ತಿಕೊಂಡೇ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ. ಇವರ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿಗಂತೂ ಜನರ ರೀಲ್ಸ್ ಹುಚ್ಚು ಮಿತಿಮೀರಿದೆ. ಹೆಚ್ಚಿನವರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ವಿಚಿತ್ರ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೊನ್ನೆಯಷ್ಟೇ ಯುವತಿಯೊಬ್ಬಳು ಟವೆಲ್ ಸುತ್ತಿಕೊಂಡು ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿದಂತಹ ವಿಡಿಯೋವನ್ನು ಹರಿಬಿಟ್ಟಿದ್ದಳು. ಇದೀಗ ಇಲ್ಲಿ ಮೂವರು ಯುವತಿಯರು ನಾವು ಕೂಡಾ ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಬರೀ ಬಾತ್ ಟವೆಲ್ ಸುತ್ತಿ ಮೆಟ್ರೋದಲ್ಲಿ ಓಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಅಲ್ಲಿದ್ದ ಜನ ಬೆರಗಾಗಿದ್ದು, ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಣ್ಣಿಗೊಂದು ಗ್ಲಾಸ್, ತಲೆಗೊಂದು ಟವೆಲ್, ಮೈಗೊಂದು ಬಾತ್ ಟವೆಲ್, ಹೈ ಹೀಲ್ಸ್ ಧರಿಸಿ ಫ್ಯಾಷನ್ ಮಾಡೆಲ್‌ಗಳಂತೆ ಎಂಟ್ರಿ ಕೊಟ್ಟ ಮೂವರು ಯುವತಿಯರು ಸಖತ್ ಪೋಸ್ ಕೊಡುತ್ತಾ ಮೆಟ್ರೋದಲ್ಲಿ ಅಡ್ಡಾಡಿದ್ದಾರೆ. ಇವರ ಈ ಅವತಾರವನ್ನು ಕಂಡು ಹಲವರು ದಂಗಾದರೆ, ಇನ್ನೂ ಕೆಲವರು ಇವರುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
View this post on Instagram
ಈ ಕುರಿತ ವಿಡಿಯೋವೊಂದನ್ನು mimisskate ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಣ್ಣಿಗೊಂದು ಕಪ್ಪು ಗ್ಲಾಸ್, ತಲೆಗೊಂದು ಟವೆಲ್, ಹೈ ಹೀಲ್ಸ್ ಧರಿಸಿ, ಮೈಗೆ ಬಾತ್ ಟವೆಲ್ ಸುತ್ತಿ ಮೂವರು ಬೆಡಗಿಯರು ಮೆಟ್ರೋದಲ್ಲಿ ಅಡ್ಡಾಡುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಎಂಥಾ ಕಾಲ ಬಂತು ನೋಡಿ… ತಂದೆಯನ್ನೇ ಮದುವೆಯಾದ ಮಗಳು
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಬಾತ್‌ರೂಮ್‌ನಿಂದ ಡೈರೆಕ್ಟ್ ಬೀದಿಗೆ ಬಂದಂತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇನ್‌ಫ್ಲುಯೆನ್ಸರ್‌ಗಳೇ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ವರ್ತಿಸಿದರೆ ಹೇಗೆ?ʼ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ