Viral Video: ಐದು ಜನ ಒಟ್ಟಿಗೆ ಪ್ರಯಾಣಿಸಬಹುದಾದ ಈ ಸೈಕಲ್ ಹೇಗಿದೆ ನೋಡಿ
ವೀಡಿಯೊದಲ್ಲಿ ಯುವಕನೊಬ್ಬ ವಿಶಿಷ್ಟವಾದ ಉದ್ದನೆಯ ಐದು ಆಸನಗಳ ಸೈಕಲನ್ನು ತಯಾರಿಸಿರುವುದನ್ನು ಕಾಣಬಹುದು. ಕಬ್ಬಿಣದ ರಾಡ್ ಸಹಾಯದಿಂದ ಈ ಸೈಕಲ್ ತಯಾರಿಸಲಾಗಿದೆ. ವಿಶಿಷ್ಟ ವಿನ್ಯಾಸ ಸೈಕಲನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ನೀವು ಇಬ್ಬರು ಕುಳಿತುಕೊಂಡು ಹೋಗುವ ಸೈಕಲ್ ಅನ್ನು ನೋಡಿರುತ್ತೀರಿ. ಆದರೆ ಎಂದಾದರೂ 5ಜನ ಒಟ್ಟಿಗೆ ಪ್ರಯಾಣಿಸಬಹುದಾದ ಸೈಕಲ್ ಅನ್ನು ಎಂದಾದರೂ ನೋಡಿದ್ದೀರಾ? ಇದೀಗ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೈಕಲ್ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ನೋಡಿದರೆ ಇದು ಸೈಕಲ್ಲೋ ಅಥವಾ ರೈಲೋ? ಅಂತ ನಿಮಗೆ ಡೌಟ್ ಬರುವುದಂತೂ ಖಂಡಿತಾ.
ವೀಡಿಯೊದಲ್ಲಿ ಯುವಕನೊಬ್ಬ ವಿಶಿಷ್ಟವಾದ ಉದ್ದನೆಯ ಐದು ಆಸನಗಳ ಸೈಕಲನ್ನು ತಯಾರಿಸಿರುವುದನ್ನು ಕಾಣಬಹುದು. ಕಬ್ಬಿಣದ ರಾಡ್ ಸಹಾಯದಿಂದ ಈ ಸೈಕಲ್ ತಯಾರಿಸಲಾಗಿದ್ದು, ಇದು ಮೂರು ದೊಡ್ಡ ಆಸನಗಳು, ಒಂದು ಸಣ್ಣ ಆಸನ, ಒಂದು ಆಸನ ಕುರ್ಚಿಯ ರೀತಿಯ ಆಸನವನ್ನು ತಯಾರಿಸಲಾಗಿದೆ. ಸದ್ಯ ಈ ವಿಶಿಷ್ಟ ವಿನ್ಯಾಸ ಸೈಕಲನ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಮನೆ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರು ಹರಿದು ಸಾವು
ಈ ವೀಡಿಯೊವನ್ನು @bapu_zamidar_short ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನೇಕ ನೆಟ್ಟಿಗರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. “ಹಿಂಭಾಗದಲ್ಲಿ ಇನ್ನೊಂದು ಆಸನವನ್ನು ಇರಿಸಿ” ಎಂದು ಹಾಸ್ಯಸ್ಪದವಾಗಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ