Video Viral: ʼದಿ ಕೇರಳ ಸ್ಟೋರಿʼ ನಟಿಯ ಶಿವ ತಾಂಡವ ಸ್ತೋತ್ರ ಪಠಣೆ ಎಲ್ಲೆಡೆ ವೈರಲ್​​​; ವಿಡಿಯೋ ಇಲ್ಲಿದೆ ನೋಡಿ

ಇತ್ತೀಚೆಗಷ್ಟೇ(ಮೇ.11) ನಟಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಹುಟ್ಟು ಹಬ್ಬದಂದು ನಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​ ಆಗಿದೆ.

Video Viral: ʼದಿ ಕೇರಳ ಸ್ಟೋರಿʼ ನಟಿಯ ಶಿವ ತಾಂಡವ ಸ್ತೋತ್ರ ಪಠಣೆ ಎಲ್ಲೆಡೆ ವೈರಲ್​​​; ವಿಡಿಯೋ ಇಲ್ಲಿದೆ ನೋಡಿ
ಶಿವ ತಾಂಡವ ಸ್ತೋತ್ರ ಪಠಣೆ
Image Credit source: instagram/adah Sharma

Updated on: May 14, 2023 | 5:21 PM

ಮೇ 5ರಂದು ಬಿಡುಗಡೆಯಾದ ʼದಿ ಕೇರಳ ಸ್ಟೋರಿʼ(The Kerala Story) ಬಾಕ್ಸ್​​​​ ಆಫೀಸ್​​ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ಮೂಲಕ ಜನಮೆಚ್ಚುಗೆ ಪಡೆದಿದ್ದ ನಟಿ ಅದಾ ಶರ್ಮಾ (Adah Sharma) . ಇತ್ತೀಚೆಗಷ್ಟೇ(ಮೇ.11) ನಟಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಹುಟ್ಟು ಹಬ್ಬದಂದು ನಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​ ಆಗಿದೆ. ಜೊತೆಗೆ ವಿಡಿಯೋದಲ್ಲಿ ಇದು ನನ್ನ ಎನರ್ಜಿಯ ಗುಟ್ಟು ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆಕೆಯ ಎನರ್ಜಿಯ ಗುಟ್ಟು ಏನು ಗೊತ್ತಾ? ಇಲ್ಲಿದೆ ವಿವರ.

ಹುಟ್ಟು ಹಬ್ಬದ ದಿನದಂದು ನಟಿ ಅದಾ ಶರ್ಮಾ ಶಿವ ತಾಂಡವ ಸ್ತೋತ್ರ ಪಠಣೆ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅದಾ ಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಕಲೆಕ್ಷನ್​ನಲ್ಲಿ ದಿಢೀರ್​ ಏರಿಕೆ; 113 ಕೋಟಿ ರೂಪಾಯಿ ತಲುಪಿದ ಒಟ್ಟು ಗಳಿಕೆ

ಸಾಕಷ್ಟು ವಿವಾದಗಳ ನಡುವೆಯೇ ಸಿನಿಮಾ ಯಶಸ್ಸಿನಿಂದ ಮುನ್ನುಗುತ್ತಿರುವುದನ್ನು ಕಂಡು ಸಿನಿಮಾ ತಂಡ ಖುಷಿ ವ್ಯಕ್ತಪಡಿಸಿದೆ. ಶಿವನ ಸಾನಿದ್ಯದಲ್ಲಿ ಕುಳಿತು ನಟಿ ಮಂತ್ರ ಪಠಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಿನಿಮಾದಲ್ಲಿನ ಪಾತ್ರಕ್ಕೆ ಜೀವ ತುಂಬಿರುವುದರ ಜೊತೆಗೆ ಶಿವನ ಮೇಲಿನ ಭಕ್ತಿಗೆ ಅಭಿಮಾನಿಗಳಿಂದ ಭಾರೀ ಶ್ಲಾಫನೆ ವ್ಯಕ್ತವಾಗಿದೆ.   ಮೇ 13ರಂದು ‘ದಿ ಕೇರಳ ಸ್ಟೋರಿ’ ಸಿನಿಮಾದ ಗಳಿಕೆಯಲ್ಲಿ ದಿಢೀರ್​ ಏರಿಕೆ ಆಗಿದೆ. 9ನೇ ದಿನ ಈ ಸಿನಿಮಾ 19.50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಅಲ್ಲಿಗೆ, ಚಿತ್ರದ ಒಟ್ಟು ಕಲೆಕ್ಷನ್​ 113 ಕೋಟಿ ರೂಪಾಯಿ ಆಗಿದೆ. ಈ ಗೆಲುವಿನಿಂದ ನಟಿ ಅದಾ ಶರ್ಮಾ  ಅವರ ಖ್ಯಾತಿ ಹೆಚ್ಚಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 5:20 pm, Sun, 14 May 23