
Dance : ಮದುವೆಯ ಎಲ್ಲಾ ಕ್ಷಣಗಳನ್ನು ಕ್ಯಾಮೆರಾದಲ್ಲಿ ದಾಖಲಿಸುವ ವಿಡಿಯೋಗ್ರಾಫರ್ಗೆ ಅಪಾರ ತಾಳ್ಮೆ ಇರಬೇಕು. ಇಡೀ ದಿನ ಎಲ್ಲ ಸನ್ನಿವೇಶ ಸಂದರ್ಭಗಳನ್ನು ಒಪ್ಪವಾಗಿ ಕ್ಯಾಮೆರಾದಲ್ಲಿ (Camera) ಹಿಡಿದಿಡಬೇಕು. ಊಟ ತಿಂಡಿಗೂ ಪುರಸೊತ್ತು ಇರುವುದಿಲ್ಲ. ತನ್ನನ್ನೇ ತಾನು ಕಳೆದುಹೋಗುವಷ್ಟು ಕೆಲಸದಲ್ಲಿ ಮುಳುಗುವ ಅನಿವಾರ್ಯತೆ. ಇದು ವಿಡಿಯೋಗ್ರಾಫರ್ ಅಥವಾ ಫೋಟೋಗ್ರಾಫರ್ಗಳ ದಿನಚರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ವಿಡಿಯೋಗ್ರಾಫರ್ ಒಬ್ಬ ಮದುವೆಯಲ್ಲಿ ಅತಿಥಿಗಳೊಂದಿಗೆ ನರ್ತಿಸಿದ್ದಾನೆ. ನೆಟ್ಟಿಗರು ಅಚ್ಚರಿಯಿಂದ ಈತನ ಉತ್ಸಾಹವನ್ನು ಕೊಂಡಾಡುತ್ತಿದ್ದಾರೆ ಮತ್ತು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಮುಂಬೈ; ತನ್ನ ಬೆಕ್ಕನ್ನು ಬೆನ್ನಟ್ಟಿದ್ದಕ್ಕಾಗಿ ನೆರೆಮನೆಯ ನಾಯಿಯ ಮೇಲೆ ಎಸಿಡ್ ಎರಚಿದ ಮಹಿಳೆಯ ಬಂಧನ
X (Twitter) ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಪಂಜಾಬಿ ಟಚ್ ಎಂಬ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಆ. 14ರಂದು ಪೋಸ್ಟ್ ಮಾಡಿದ ನಂತರ ಈತನಕ 1.6 ಲಕ್ಷ ಜನರು ನೋಡಿದ್ದಾರೆ. ಸುಮಾರು 2,600 ಜನರು ಲೈಕ್ ಮಾಡಿದ್ದಾರೆ. 390 ಜನರು ರೀಪೋಸ್ಟ್ ಮಾಡಿದ್ದಾರೆ. ನೂರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋಗ್ರಾಫರ್ ನಮ್ಮ ಆಕಾಂಕ್ಷೆಗಳನ್ನು ಈಡೇರಿಸಿದ್ದಾರೆ. ಹಾಗಾಗಿ ಅವರು ಆಧಾರ್ ಕಾರ್ಡ್ ಹೊಂದಲು ಅರ್ಹತೆ ಪಡೆದಿದ್ದಾರೆ ಎಂದಿದ್ದಾರೆ ಒಬ್ಬರು. ಹೀಗೆ ಡ್ಯಾನ್ಸ್ ಮಾಡಿಕೊಂಡು ಮಾಡಿದ ವಿಡಿಯೋ ಹೇಗೆ ಬಂದಿರಬಹುದು ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ ಇನ್ನೊಬ್ಬರು. ಈ ವಿಡಿಯೋಗ್ರಾಫರ್ನನ್ನು ಆಮದು ಮಾಡಿಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದ್ಧಾರೆ ಮತ್ತೊಬ್ಬರು. ಇವನನ್ನು ಮದುವೆಗೆ ಕರೆಸಿದವರು ಗ್ಯಾರಂಟಿ ಹಣವನ್ನು ಮರಳಿಸುವಂತೆ ಕೇಳುತ್ತಾರೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ‘ನನ್ನದು ವಿಶೇಷ ಕಣ್ಣು ಗೊತ್ತಾ?’ ದಿಟ್ಟ ಪುಟ್ಟಿಯ ದೃಷ್ಟಿಪ್ರಯಾಣ
ಇದು ಮೆರವಣಿಗೆಯಲ್ಲಿ ಮಾಡುವ ಡ್ಯಾನ್ಸ್ ಎಂದಿದ್ದಾರೆ ಒಬ್ಬರು. ವಿದೇಶಿಯ ವಿಡಿಯೋಗ್ರಾಫರ್ ಆಗಿದ್ದಕ್ಕೆ ಇವನು ಹೀಗೆ ಕುಣಿದಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ರುಮಾಲನ್ನು ಸುತ್ತಿಕೊಳ್ಳುವುದನ್ನು ಈತ ಮರೆತಿದ್ದಾನೆ ಎಂದಿದ್ದಾರೆ ಮತ್ತೊಬ್ಬರು. ಇದು ಅವನ ಜಿಮ್ ರುಟೀನ್ ಆಗಿರಬೇಕು, ಅದಕ್ಕೇ ಇಷ್ಟು ಸಲೀಸಾಗಿ ನರ್ತಿಸುತ್ತಿದ್ದಾನೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ