ಮಧ್ಯಪ್ರದೇಶ: ಭೂಮಿ ಮೇಲೆ ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದು ಇಲ್ಲ ಅನ್ನುತ್ತಾರೆ. ಅದು ಅಕ್ಷರಶಃ ಸತ್ಯ ಕೂಡ. ನಾವು ಪ್ರತಿವರ್ಷ ವಲ್ಡ್ ಎನಿಮಲ್ ಡೇ ಆಚಾರಿಸುತ್ತವೆ. ಹಾಗೇ ವಲ್ಡ್ ಟೈಗರ್ಸ್ ಡೇ (ಹುಲಿಗಳ ದಿನ)ವನ್ನು ಆಚರಿಸಿತ್ತೇವೆ. ಈ ದಿನ ಹುಲಿಗಳ ಕುರಿತು ದೊಡ್ಡ ಭಾಷಣಗಳನ್ನು ಮಾತನಾಡುತ್ತೇವೆ. ವಾಟ್ಸಪ್ ಸ್ಟೇಟ್ಸ್, ಫೇಸ್ಬುಕ್ ನಲ್ಲಿ ಹುಲಿಗಳನ್ನು ಸಂರಕ್ಷಿಸಿ ಅಂತ ಬರೆದುಕೊಳ್ಳುತ್ತೇವೆ. ಆದರೆ ನಿಜವಾದ ಹುಲಿ ಬಂದರೆ ಕಲ್ಲು ಹೊಡೆಯುತ್ತೇವೆ.
ಹೌದು ಮಧ್ಯಪ್ರದೇಶದ (Madya Pradesh) ಸಿಯೋನಿಯಲ್ಲಿ ಎರಡು ಹುಲಿ (Tiger) ಮರಿಗಳ ಮೇಲೆ ಗ್ರಾಮಸ್ಥರು ಕಲ್ಲಿನಿಂದ ದಾಳಿ ಮಾಡಿರುವ ಮನಕಲಕುವ ವಿಡಿಯೋ ಸಾನಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶದ ಬೆಳಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋವನ್ನು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ವೀಡಿಯೊದಲ್ಲಿ ಎರಡು ಹುಲಿ ಮರಿಗಳ ಮೇಲೆ ಗ್ರಾಮಸ್ಥರು ಕಲ್ಲು ಎಸೆಯುತ್ತಿದ್ದಾರೆ. ಕಲ್ಲುಗಳಿಂದ ರಕ್ಷಿಸಿಕೊಳ್ಳಲು ಹುಲಿ ಒಂದು ಬಂಡೆಯ ಹಿಂದೆ ಕುಂಟುತ್ತಾ ಹೋಗಿ ಅಡಗಿ ಕುಳಿತುಕೊಳ್ಳುತ್ತಿದೆ. ಇಷ್ಟಾದರೂ ಬಿಡದ ಜನರು ಮತ್ತೆ ಅದರ ಮೇಲೆ ಕಲ್ಲು ಎಸೆದಿದ್ದಾರೆ.
ಇದನ್ನು ಓದಿ: ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ?
We celebrate wildlife, Environment day, politician do long speech but first & foremost try to be HUMAN. Pelting stone on little cubs & injuring them is not just inhumane but make you barbaric. Seoni, Madhya Pradesh@rameshpandeyifs @supriyasahuias @susantananda3 @ParveenKaswan pic.twitter.com/Q03xKBYvLh
— WildLense® Eco Foundation ?? (@WildLense_India) May 18, 2022
ವಿಡಿಯೋ ಕುರಿತು ತೀರ್ವ ಅಸಮಾಧಾನ ವ್ಯಕ್ತಪಡಿಸಿರುವ IAS, IFS ಅಧಿಕಾರಿಗಳು ಟ್ವೀಟ್ ಮಾಡಿ ಇದು ಅಮಾನವೀಯ ಘಟನೆ. ಮನುಷ್ಯನಿಗೆ ನಾಚಿಕೆಯಾಗಬೇಕು. ಕರುಣಾಚನಕ ನಡುವಳಿಕೆ ಎಂದು ಬರೆದುಕೊಂಡಿದ್ದಾರೆ.
Pathetic behaviour.
— Parveen Kaswan, IFS (@ParveenKaswan) May 18, 2022
ಹುಲಿ ಮರಿಗಳ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಆದಿಲ್ ಅವರು ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ರಕ್ಷಣಾ ತಂಡವು ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತಲುಪಿದ ನಂತರ, ಅಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸಿ ಸುಮಾರು 6 ತಿಂಗಳ ವಯಸ್ಸಿನ ಎರಡು ಹುಲಿ ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ವನ್ಯಜೀವಿ ವೈದ್ಯರ ಆರೋಗ್ಯ ತಪಾಸಣೆಯ ನಂತರ ಮರಿಗಳನ್ನು ಕನ್ಹಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಿಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ಕುತೂಹಲಕರ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Fri, 20 May 22